logo
भारतवाणी
bharatavani  
logo
Knowledge through Indian Languages
Bharatavani

Pampana Nudigani (Kannada)

Please click here to read PDF file Pampana Nudigani (Kannada)

ಹಂಸಕುಳ
[ನಾ] ಹಂಸಪಕ್ಷಿಗಳ ಗುಂಪು (ಓಲಗಕ್ಕೆ ಪುಗುವ ಪೊಱಮಡುವ ವಾರವಿಳಾಸಿನಿಯರ ನೂಪುರಂಗಳ ರವಂಗಳೊಳ್ ನೃಪಭವನೋಪವನ ದೀರ್ಘಿಕಾ ಹಂಸಕುಳಂಗಳ್ ತಳವೆಳಗಾದುವು: ಪಂಪಭಾ, ೪. ೪೯ ವ)

ಹಂಸಗತಿ
[ನಾ]ಹಂಸದಂತಹ ಮೆಲುವಾದ ನಡಿಗೆ(ಮಂಗಳಧಾರಿಣಿಯರಾಗಿ ಮುಂದಂ ನಡೆವ ಆಶಾಂಗನೆಯರಿಂದೆ ದಿವಿಜೇಂದ್ರಾಂಗನೆ ಕರಮೆಸೆದು ಹಂಸಗತಿಯೊಳ್ ಬಂದಳ್:ಆದಿಪು, ೭. ೪೮)

ಹಂಸಗ್ರೀವ
[ನಾ]ಹಂಸದ ಕೊರಳು(ಹಂಸಗ್ರೀವನಿಹಿತ ಏಕಪಾದಂ ಇಳಾವಂದ್ಯಂ ಅನಿಂದ್ಯಂ ಅಬ್ಜಗರ್ಭಂ ಬಂದಂ:ಪಂಪಭಾ, ೧೨. ೧೩೮)

ಹಂಸಗ್ರೀವನಿಹಿತ ಏಕಪಾದಂ
ಹಂಸಪಕ್ಷಿಯಲ್ಲಿ ಇಟ್ಟ ಒಂದು ಪಾದವುಳ್ಳವನು (ಹಂಸಗ್ರೀವನಿಹಿತ ಏಕಪಾದಂ ಇಳಾವಂದ್ಯಂ ಅನಿಂದ್ಯಂ ಅಬ್ಜಗರ್ಭಂ ಬಂದಂ:ಪಂಪಭಾ, ೧೨. ೧೩೮)

ಹಂಸಧವಳ
[ನಾ]ಹಂಸದಂತೆ ಬೆಳ್ಳಗಿರುವ(ತನ್ನ ಪವಡಿಸುವ ಮಾಡಕ್ಕೆ ವಂದು ಹಂಸಧವಳಶಯ್ಯಾತಳದೊಳ್ ಗಂಗಾನದೀಪುಳಿನಪರಿಸರಪ್ರದೇಸದೊಳ್ ಮಱೆದೊಱಗುವ ಐರಾವತದಂತೆ ಪವಡಿಸಿ:ಪಂಪಭಾ, ೪. ೧೧೦ ವ)

ಹಂಸವೃದ್ಧ
[ನಾ]ಮುದಿ ಹಂಸ (ಹಂಸವೃದ್ಧನಂ ಇನಿಸಂ ನೆನೆಯಿಸಿ ಕೊಳದೊಳಗಣ ಸಿತವನರುಹಲಕ್ಷ್ಮಿಯುಮನಿನಿಸುಂ ತನಗೊಳಕೊಂಡಂ:ಆದಿಪು, ೭. ೯೯)

ಹಟತ್
[ಗು]ಹೊಳೆಯುವ (ಘಟಾಘಟಿತ ಹಟತ್ ವಿರೋಧಿರುಧಿರಪ್ಲವಲಂಪಟ ಸಂಕಟೋತ್ಕಟಂ:ಪಂಪಭಾ, ೧೧. ೧೪೬)

ಹಟತ್ಕಿರೀಟ
[ನಾ]ಹೊಳೆಯುವ ಕಿರೀಟ (ಕಟಕ ಕಟಿಸೂತ್ರ ಕುಂಡಲ ಹಟತ್ಕಿರೀಟ ಅಂಗದಾದಿ ಮಣಿಭೂಷಣ ಭಾಜಟಿಳಿತ ಮೂರ್ತ್ಯುತ್ಕರ್ಷಂ ಸ್ಫುಟಹರ್ಷಂ ತನ್ನ ವರ್ಷವರ್ಧನ ದಿನದೊಳ್:ಆದಿಪು, ೨. ೨)

ಹತಪ್ರತಿಜ್ಞ
[ನಾ]ಪ್ರತಿಜ್ಞಾಭಂಗರಾದವರು (ಆತ್ಮೀಯವಿದ್ಯಾ ಗರ್ವಪರ್ವತಂ ಅವರ ವಚೋನಿರ್ಘಾತದಿಂ ನುಚ್ಚುನುಱಿಯಾಗಿ ಪೋದೊಡೆ ಹತಪ್ರತಿಜ್ಞರುಂ ಗಳಿತಗರ್ವರುಂ ಆಗಿ:ಆದಿಪು, ೩. ೭೫ ವ)

ಹತವಿಹತ
[ನಾ]ಹೊಡೆತ ಮರುಹೊಡೆತ(ವಿದ್ವಿಷ್ಟವಿದ್ರಾವಣನ ಮೊನೆಯಂಬಿನ ಏಱಿಂಗೆ ಅಳ್ಕಿ ಹತವಿಹತ ಕೋಳಾಹಳರಾಗಿ:ಪಂಪಭಾ, ೫. ೮೮ ವ)


logo