logo
भारतवाणी
bharatavani  
logo
Knowledge through Indian Languages
Bharatavani

Pampana Nudigani (Kannada)

Please click here to read PDF file Pampana Nudigani (Kannada)

ಚಂಚತ್
[ಗು] ಚಲಿಸುವ (ನಡೆಯೆ ತುರಗಂ ಪೊನ್ನ ಆಯೋಗಂಗಳಿಂ ಅಮರ್ದು ಅೞ್ತಿಯಿಂ ಪಡೆಯೆ ನೆಳೞಂ ಚಂಚತ್ ಪಿಂಛಾತಪತ್ರಮೆ ಕೂಡೆ ತಮ್ಮೊಡನೆ ಬರೆ: ಪಂಪಭಾ, ೯. ೧೦೨)

ಚಂಡ
[ಗು] ವೇಗವಾದ, ಬಿರುಸಾದ (ವಾತ್ಯಾದುರ್ಧರ ಗಂಧಸಿಂಧುರ ಕಟಸ್ರೋತಃ ಸಮುದ್ಯತ್ ಮದವ್ರಾತ ಇಂದಿಂದಿರ ಚಂಡ ತಾಂಡವ ಕಲ ಸ್ವಾಭಾವಿಕಶ್ರೇಯಸಃ: ಪಂಪಭಾ, ೯. ೯೭)

ಚಂಡಮರೀಚಿ
[ನಾ] ಸೂರ್ಯ (ಚಂಡಮರೀಚಿಗೆ ಅಸ್ತಮಯಮಿಲ್ಲದುದು ಒಂದೆಡೆ ನಿಮ್ಮ ಕೇಳ್ದುದುಂ ಕಂಡುದುಂ ಉಳ್ಳೊಡೆ ಇಂ ಬೆಸಸಿಂ ಆಂ ಇರದೆ ಅಲ್ಲಿಗೆ ಪೋಪೆವು: ಪಂಪಭಾ, ೪. ೪೮)

ಚಂಡರೋಚಿ
[ನಾ] ಪ್ರಖರ ಕಿರಣಗಳುಳ್ಳವನು, ಸೂರ್ಯ (ಪತ್ತಿ ಶಸ್ತ್ರ ದ್ಯುತಿಪರಿಕg ಸಾಂದ್ರೀಭವಚ್ಚಂಡರೋಚಿಃಕಿರಣೌಘಂ: ಆದಿಪು, ೪. ೨೪)

ಚಂಡವೇಗ
[ನಾ] [ಜೈನ] ಭರತ ಚಕ್ರವರ್ತಿಯ ಏಳು ಅಜೀವರತ್ನಗಳಲ್ಲೊಂದಾದ ದಂಡರತ್ನದ ಹೆಸರು (ವಿಜಯಾರ್ಧಾಚಳ ಮಹಾಗುಹಾಗಹ್ವರಮುಖ ವಜ್ರಕವಾಟಪುಟ ವಿಘಟಪಟುವಪ್ಪ ಚಂಡವೇಗಮೆಂಬ ದಂಡರತ್ನಮುಂ: ಆದಿಪು, ೧೧. ೩. ವ)

ಚಂಡಾಂಶು
[ನಾ] ಚಂಡರುಚಿ, ಸೂರ್ಯ (ದೀಪ್ಯಮಾನ ಪ್ರತಾಪಸ್ಥಗಿತಾಶಾಚಕ್ರಚಂಡಾಂಶುವಂ ಅಮರಮನೋಹಾರಿ ಹೇಮಾದ್ರಿಯಂ: ಆದಿಪು, ೮. ೨೬)

ಚಂದನಗಂಧವಾರಿ
[ನಾ] ಶ್ರೀಗಂಧದ ಪರಿಮಳದ ನೀರು (ಚಂದನ ಗಂಧವಾರಿಯೊಳ್ ಸುತ್ತಲುಂ ಅೞ್ಕಱಂ ಪಡೆವ ಗೇಯದ ಪೆಂಪಿನ ಅಲಂಪಂ ಆರ್ಗಂ ಆರ್ತಿತ್ತುದು ಪಟ್ಟಬಂಧ ಮಹೋತ್ಸವಂ ಆ ಪಡೆಮೆಚ್ಚೆ ಗಂಡನಾ: ಪಂಪಭಾ, ೧೪. ೨೦)

ಚಂದನರಸ
[ನಾ] ಶ್ರೀಗಂಧದ ಮರದ ರಸ (ಅಂಗಲತಾಲಾಲಿತ ಸಾಂದ್ರಚಂದನರಸಂ ಬೆಳ್ದಿಂಗಳ್ ಎಂಬೊಂದು ಪಂಬಲ ಬಂಬಲ್ಗೆಡೆಯಾಗೆ ಬೆಳ್ಪಸದನಂ ಕಣ್ಗೊಪ್ಪಿತಾ ಕಾಂತೆಯಾ: ಪಂಪಭಾ, ೧. ೧೩೭); ಪರಿಮಳದ್ರವ (ಮಾದ್ಯತ್ ಗಜಗಂಡಭಿತ್ತಿ ಕಷಣ ಪ್ರೋದ್ಭೇದದಿಂ ಸಾರ್ದು ಬಂದು ಇದಿರೊಳ್ ಕೂಡುವುದಿಲ್ಲಿ ಚಂದನರಸಂ ಕೆಂಬೊನ್ನ ಟಂಕಂಗಳೊಳ್: ಪಂಪಭಾ, ೪. ೨೨)

ಚಂದನಸಾರ
ಶ್ರೀಗಂಧದ ರಸ (ಘನಸಾರ ಚಂದನಸಾರ ಪ್ರಮೃಷ್ಟಕರತಳನುಂ: ಆದಿಪು, ೧೧. ೨೭ ವ)

ಚಂದ್ರಕ
[ನಾ] ನವಿಲುಗರಿ (ಪಲವುಂ ರಾಜಚಿಹ್ನಂಗಳಂ ಬೆಳ್ಗೊಡೆಗಳ್ ತಳ್ಪೊಯ್ದು ಅದೇಂ ಕಣ್ಗೊಳಿಸಿದುದೊ ಚಳತ್ ಚಂದ್ರಕಚ್ಛತ್ರಪಿಂಡಂ: ಪಂಪಭಾ, ೧೩. ೩೮)


logo