logo
भारतवाणी
bharatavani  
logo
Knowledge through Indian Languages
Bharatavani

Pampana Nudigani (Kannada)

Please click here to read PDF file Pampana Nudigani (Kannada)

ಎತ್ತೆತ್ತ
[ಅ] ಏನೇನು (ಮನದೊಳ್ ಮುಂ ಪುದಿದಿರ್ದ ಕೋಪಮನಿತುಂ ತೂಳ್ದಾಗಳ್ ಎತ್ತೆತ್ತ ಗೆಯ್ದೆನಿದಂ ತಮ್ಮನೊಳ್ ಎಂಬುದೊಂದುಪಶಮಂ ಕೈಗಣ್ಮಿ: ಆದಿಪು, ೧೪. ೧೩೨)

ಎನತು
[ಗು] ನನ್ನದು (ನೀನೀಯೆ ಬಂದುದೆನಗೆ ಇದಂ ಎನತು ಎಂದು ಏಂ ನಿನಗೆ ಬಗೆಯಲಪ್ಪುದೆ: ಆದಿಪು, ೧೪. ೧೪೪)

ಎನಿತಾನುಂ
[ನಾ] ಎಷ್ಟೆಷ್ಟೋ, ಹಲವು ಬಗೆಗಳಲ್ಲಿ (ಎಂದು ಎನಿತಾನುಂ ತೆಱದೊಳ್ ಅಳಿಪಿನ ಲಲ್ಲೆಯ ಚೆಲ್ಲದ ಪುರುಡಿನ ಮುಳಿಸಿನ ನೆವದ ಪಡೆಮಾತುಗಳಂ ನುಡಿದುಂ ಕಾಲ್ವಿಡಿದುಂ ಅಚಳಿತಧೈರ್ಯನ ಮನಮಂ ಚಲಿಯಿಸಲಾಱದೆ: ಪಂಪಭಾ, ೭. ೯೪ ವ)

ಎನಿತು
[ನಾ] ಎಷ್ಟು (ಆಗಳಾ ತಾರಾಗಣಂಗಳ್ ದಿಶಾವನಿತೆಯರ ಮಕುಟಮಾಣಿಕಂಗಳಂತೆ ಎನಿತು ಬೆಳಗಿಯುಂ ಕೞ್ತಲೆಯಂ ಅಲೆಯಲಾಱವಾದುವು: ಪಂಪಭಾ, ೪. ೪೯ ವ)

ಎನಿಬರಾನುಂ
[ನಾ] ಎಷ್ಟೋ ಜನ (ನಂಟರಪ್ಪ ಅಶ್ವಗ್ರೀವ ವಿದ್ಯುನ್ಮಾಲಿ ನೀಲಾದಿಗಳಪ್ಪ ಪ್ರಭೃತಿಗಳ್ ಎನಿಬರಾನುಂ ಮುರಾಂತಕನಂ ಬಂದು ತಾಗಿದೊಡೆ: ಪಂಪಭಾ, ೬. ೬೪ ವ)

ಎನಿಸು
[ಕ್ರಿ] ಎನ್ನುವಂತೆ ಮಾಡು, ಅನ್ನಿಸು (ನೆಗೞ್ದಾದಿ ಕ್ಷತ್ರಿಯರೊಳಂ ಇಲ್ಲೆನಿಸಿದುದೀ ತ್ರಿಜಗದೊಳ್ ಎಸಗಿದ ಎಸಕಂ ಅರಿಕೇಸರಿಯಾ: ಪಂಪಭಾ, ೧. ೨೧)

ಎನು
[ಕ್ರಿ] ಳು (ಎಂದು ತನ್ನ ಮನಮನಱಿದು ಮುಟ್ಟಿ ನುಡಿದ ಕೆಳದಿಯ ನುಡಿಗೆ ಪೆಱತೇನುಮಂ ಎನಲಱಿಯದೆ: ಪಂಪಭಾ, ೪. ೬೪ ವ)

ಎನೆ
ಎನ್ನಿಸುವಂತೆ, ಎಂದು ತೋರುವಂತೆ (ಪುಸಿ ಎನೆ ರಥಮಂ ಹರಿ ಚೋದಿಸುವಂತೆವೊಲಿರ್ದು ಅದೆಂತು ನರನಂ ಗೆಲಿಪಂ ವಿಸಸನದೊಳ್: ಪಂಪಭಾ, ೧೨. ೯೧)

ಎನೆಯೆನೆ
[ಕ್ರಿ] [ಎನೆ+ಎನೆ] ಎಂದು ಹೇಳಲು (ಎನೆಯೆನೆ ಬಾಷ್ಪವಾರಿ ಪುಳಕಂಬೆರಸು ಒರ್ಮೆಯೆ ಪೊಣ್ಮೆ ಮುನ್ನೆ ನೀವೆನಗಿದನೇಕೆ ಪೇೞ್ದಿರೊ: ಪಂಪಭಾ, ೯. ೬೮)

ಎನ್ನ
[ಕ್ರಿ] ಎನ್ನುವೆಯಾ? (ಅರರೀಪುಟಮೆರಡುಂ ಜೀರ್ಗರೆದು ಮರಲ್ದಂದಮೆಂತುಟಾಯ್ತು ಎನ್ನ ಭಯಂಕರ ದಂಡರತ್ನಹತಿಯಿಂ ಗಿರಿ ನೊಂದು ನರಳ್ವ ಮಾೞ್ಕೆಯಂತಾಯ್ತಾಗಳ್: ಆದಿಪು, ೧೩. ೩೭); [ಗು] ನನ್ನ (ಅಸದಾಗ್ರಹಮಂ ಬಿಸುಡುವುದೊರ್ಮೆಗೆ ಮಱೆವುದು ಎನ್ನ ದುರ್ವಿಳಸನಮಂ: ಆದಿಪು, ೧೪. ೧೩೧)


logo