logo
भारतवाणी
bharatavani  
logo
Knowledge through Indian Languages
Bharatavani

Pampana Nudigani (Kannada)

Please click here to read PDF file Pampana Nudigani (Kannada)

ಕಂಕಣವಾರ
[ನಾ] ಬಳೆಗಳ ಸಾಲು [ಕಂಕಣ+ಆರ=ಕಂಕಣ ಮತ್ತು ಹಾರ] (ಮೆಲ್ಲನೆ ವಕುಲ ಆಳವಾಳತಳದೊಳ್ ಸುರಿದ ಅಂಬುಜಸೂತ್ರದಿಂದೆ ಮತ್ತನಿತಱೊಳಂ ಮುಗುಳ್ಸರಿಗೆ ತೋಳ್ವಳೆ ಕಂಕಣವಾರಮೆಂದು ಬೇೞ್ಪನಿತನೆ ಮಾಡಿ: ಪಂಪಭಾ, ೨. ೧೬)

ಕಂಕೇಲಿ
[ನಾ] ಕಂಕೆಲ್ಲಿ, ಅಶೋಕವೃಕ್ಷ (ಪುಣ್ಯಾಂಬು ಪೂರ್ಣಕುಂಭಾಗ್ರಮುಚಿತ ಕಂಕೇಲಿಪಲ್ಲವೋಲ್ಲಾಸರಚಿತ: ಆದಿಪು, ೪. ೩೦ ರಗಳೆ)

ಕಂಗನೆ
[ಕ್ರಿವಿ] ಬಹಳವಾಗಿ (ಮುನಿಸಿನೊಳ್ ಆದಂ ಏವಯಿಸಿ ಸೈರಿಸದೆ ಅದವೞಲೊಳ್ ಕನಲ್ದು ಕಂಗನೆ ಕನಲುತ್ತುಂ ಉಮ್ಮಳಿಸಿ: ಪಂಪಭಾ, ೪. ೧೦೬)

ಕಂಗು
[ನಾ] ನವಣೆ (ಕಳಮ ಷಷ್ಟಿಕಾ ವ್ರೀಹಿ ಯುವ ಯಾವನಾಳ ಗೋಧೂಮ ಕಂಗು .. .. ವಿವಿಧ ಧಾನ್ಯಭೇದಂಗಳುಂ: ಆದಿಪು, ೬. ೭೨ ವ)

ಕಂಚುಕಿ
[ನಾ] ಅಂತಃಪುರದ ಪಾರುಪತ್ತೇದಾರ (ಭರತರಾಜಂ ಅಯೋಧ್ಯೆಯೊಳ್ ಆಸ್ಥಾನಮಂಟಪದೊಳಿರೆ ತತ್ಪುರೋಹಿತ ಆಯುಧಾಧ್ಯಕ್ಷ ಅಂತಃಪುರವೃದ್ಧಕಂಚುಕಿಗಳ್ ಬಂದು: ಆದಿಪು, ೧೦. ೪೮ ವ)

ಕಂಚುಕಿತ
[ಗು] ಆಚ್ಛಾದಿತವಾದ, ಸುತ್ತುವರಿಯಲ್ಪಟ್ಟ (ಆಗಳ್ ಕದಂಬಸ್ತಬಕ ಕರ್ಣಪೂರಾಯಮಾಣ ರೋಮಾಂಚ ಕಂಚುಕಿತ ಕಪೋಳಮೂಳಸ್ಥಳನಿಶ್ವಾಸಕಲ್ಲೋಳಂ: ಆದಿಪು, ೪. ೧೫ ವ)

ಕಂಜ
[ನಾ] ಕಮಲ (ತೋಱಿತ್ತು ಕೊಳಂ ಪರಿವಿಕಸಿತ ಕನಕ ಕಂಜ ಪಿಂಜಲ್ಕಪುಂಜಪಿಂಜರಿತಜಳಂ: ಪಂಪಭಾ, ೮. ೩೮)

ಕಂಜಕಿಂಜಲ್ಕ
[ನಾ] ತಾವರೆಯ ಕೇಸರ (ಕಂಜ ಕಿಂಜಲ್ಕ ಪುಂಜಪಿಂಜರಿತಾಚ್ಛೋದಕಪರಿಪೂರ್ಣತಟಾಕ: ಆದಿಪು, ೧. ೫೮)

ಕಂಜಪ್ರಿಯ
[ನಾ] ಸೂರ್ಯ (ಮಂಜಿನ ಮೞೆಯೊಳ್ ಮಸುಳ್ದಿರೆ ಕಂಜಪ್ರಿಯಕುಮುದಬಂಧುಗಳ್: ಆದಿಪು, ೬. ೬೧)

ಕಂಜವಕ್ತ್ರೆ
[ನಾ] ತಾವರೆಯ ಮುಖದವಳು (ಅೞಲ್ದೆರೆದೊಂದಿದ ಲುಂದುಗಳ್ಗೆ ನೀರ್ಗುಡಿದವೊಲಾದುದುಚ್ಚಳಿಸಿ ಸೂಸುವ ಕಣ್ಬನಿ ಕಂಜವಕ್ತ್ರೆಯಾ: ಆದಿಪು, ೧೨. ೨೬)


logo