logo
भारतवाणी
bharatavani  
logo
Knowledge through Indian Languages
Bharatavani

Pampana Nudigani (Kannada)

Please click here to read PDF file Pampana Nudigani (Kannada)

ಫಣಾಗಣಮಣಿಕಿರಣ
[ನಾ] ಹೆಡೆಗಳ ಸಮೂಹದ ರತ್ನದ ಕಾಂತಿ (ಆಗಳ್ ಅನಂತಂ ಅನಂತ ಫಣಾಗಣಮಣಿಕಿರಣಮೆಸೆಯೆ ದುಗ್ಧಾರ್ಣವದೊಳ್ ರಾಗದಿನಿರ್ಪಂತಿರ್ದಂ ಭೋಗಿ ತೞತ್ತೞಿಸಿ ಬೆಳಗೆ ಕೆಯ್ದೀವಿಗೆಗಳ್: ಪಂಪಭಾ, ೪. ೫೩)

ಫಣಾರತ್ನ
[ನಾ] ಫಣಾಮಣಿ (ದೀಪದೊಳ್ ಪನ್ನಗಪತಿಯ ಫಣಾರತ್ನದೀಪಂ ವಿತಾನಾವಳಿಯೊಳ್ ದಿವ್ಯಂ ವಿತಾನಂ ತುಱುಗಿದುವು: ಆದಿಪು, ೧೬. ೨)

ಫಣಾಮಣಿ
[ನಾ] ಹೆಡೆಯ ಮಣಿ (ಬಾಳದಿನೇಶಬಿಂಬದ ನೆೞಲ್ ಜಲದೊಳ್ ನೆಲಸಿತ್ತೊ ಮೇಣ್ ಫಣೀಂದ್ರಾಳಯದಿಂದಂ ಉರ್ಚಿದ ಫಣಾಮಣಿಮಂಗಳರಶ್ಮಿಯೋ ಪಂಪಭಾ, ೧. ೯೬)

ಫಣಿ
[ನಾ] ಹಾವು (ಮತ್ಸ್ಯ ಮಕರ ಕುಲಿಶ ಕಲಶ ಕುಳೀರ ವರಾಹ ವಾನರ ಕಂಠೀರವ ಚಮೂರು ಮಯೂರ ಗರುಡ ಫಣಿರಾಜಚಿಹ್ನಂಗಳಪ್ಪ: ಆದಿಪು, ೧೧. ೨೮ ವ)

ಫಣಿಕೇತನ
[ನಾ] ರ್ಪಧ್ವಜ, ದುರ್ಯೋಧನ (ಎಂಬುದುಂ ಬೞಿಕ್ಕಿನ ನುಡಿಗೆ ಸೈರಿಸಲಾಱದೆ ಫಣಿಕೇತನಂ ಇಂತೆಂದಂ: ಪಂಪಭಾ, ೧೩. ೨೩ ವ)

ಫಣಿಗೇಹ
[ನಾ] ಫಣಿಗೃಹ (ಫಣಿಫಣಾಸ್ಫುರಿತದೀಪಿಕಾವ್ಯೂಹಮಂ ಕ್ವಣಿತಮಣಿಕಿಂಕಿಣೀನಿನದ ಫಣಿಗೇಹಮಂ .. .. ನೋಡಿ: ಆದಿಪು, ೭. ೨೭ ರಗಳೆ)

ಫಣಿಪ್ರಭು
[ನಾ] ಫಣಿಪತಿ (ಫಣಿಪ್ರಭುಗಂ ಎತ್ತಮತ್ತಳಗಮಲ್ತೆ ರೂಪಸ್ತವಂ ಗುಣಸ್ತವಂ ಉದಾತ್ತವೃತ್ತ ಭವದೀಯ ವಸ್ತುಸ್ತವಂ: ಆದಿಪು, ೧೩. ೯೦)

ಫಣಿಫಣಾ
[ನಾ] ಹಾವಿನ ಹೆಡೆ (ಫಣಿಫಣಾಸ್ಫುರಿತ ಮಣಿದೀಪಿಕಾವ್ಯೂಹಮಂ: ಆದಿಪು, ೭. ೨೭ ರಗಳೆ)

ಫಣಿಭೂಷಣ
[ನಾ] ಹಾವುಗಳೆಂಬ ಆಭರಣ (ಮುಳಿಸು ಲಲಾಟನೇತ್ರಶಿಖಿ ಮೆಚ್ಚೆ ವಿನೂತ ರಸಪ್ರಸಾದಂ ಉಜ್ಜಳಜಸಂ ಅಂಗಸಂಗತ ಲಸತ್ ಭಸಿತಂ ಪ್ರಭುಶಕ್ತಿ ಶಕ್ತಿ ನಿರ್ಮಳಮಣಿಭೂಷಣಂ ಫಣಿಭೂಷಣಂ ಆಗೆ: ಪಂಪಭಾ, ೧. ೨)

ಫಣಿರಾಜಕೇತನ
[ನಾ] ಫಣಿಪತಿಕೇತನ (ಅಪರಾಂಬುರಾಶಿಯೊಳ್ ಮುೞುಗುವ ತೀವ್ರದೀಧಿತಿವೊಲ್ ಆ ಕೊಳದೊಳ್ ಫಣಿರಾಜಕೇತನಂ ಮುೞುಗಿದಂ: ಪಂಪಭಾ, ೧೩. ೭೪)


logo