logo
भारतवाणी
bharatavani  
logo
Knowledge through Indian Languages
Bharatavani

Pampana Nudigani (Kannada)

Please click here to read PDF file Pampana Nudigani (Kannada)

ಗಂಗಾಂಗನೆ
[ನಾ] ಗಂಗಾದೇವಿ (ಅಂದು ಭೋಂಕನೆ ಕಂಡಂ ಗಂಗಾಂಗನೆಯಂ ಕಾಣ್ಬವೊಲ್ ಅಂಗನೃಪಂ ಮುಂದೆ ನಿಂದ ಕೊಂತಿಯನಾಗಳ್: ಪಂಪಭಾ, ೯. ೭೩)

ಗಂಗಾಜಾತ
[ನಾ] ಭೀಷ್ಮ (ಶ್ವೇತನ ಗಂಗಾಜಾತನ ಮಾತನೆ ಪಾರ್ದು ಎರಡು ಒಡ್ಡಣಂ ಕಾದಲ್ಕೆಂದೀ ತೆಱದಿನೊಡ್ಡಿ ನಿಂದುವು ಭೂತಳಮಳ್ಳಾಡೆ ಕೆಸಱ ಕಡಿತದ ತೆಱದಿಂ: ಪಂಪಭಾ, ೧೦. ೫೩)

ಗಂಗಾತ್ಮಜನ್ಮ
[ನಾ] ಗಂಗೆಯ ಮಗ, ಭೀಷ್ಮ (ಭುಜ ವೀರ್ಯ ವಿಕ್ರಮಯುತಂ ಗಂಗಾತ್ಮಜನ್ಮಂ ಜಯಶ್ರೀಲೋಲಂ ಜಮದಗ್ನಿ ರಾಮಮುನಿಯೊಳ್ ಕಲ್ತಂ ಧನುರ್ವಿದ್ಯೆಯಂ: ಪಂಪಭಾ, ೧. ೬೮)

ಗಂಗಾವಾರಿ
[ನಾ] ಗಂಗೆಯ ನೀರು (ಅಂತು ಚಾಗಂಗೆಯ್ದು ಜಗನ್ಮಂಗಳಗಂಗಾವಾರಿಯೊಳ್ ಅನಿವಾರಿತಪರಾಕ್ರಮಂ ಅಘಮರ್ಷಣಪೂರ್ವಕಂ ಮಿಂದು: ಪಂಪಭಾ, ೯. ೭೨ ವ)

ಗಂಗಾಸುತ
[ನಾ] ಗಂಗೆಯ ಮಗ, ಭೀಷ್ಮ (ಆರೂಢ ಸಮರರಸನುಂ ಉಪಾರೂಢಕನಕರಥನುಂ ಆಗಿ ಕೈಲಾಸವಾಸಿಗೆ ಪೊಡೆವಟ್ಟು ಬಿಲ್ಲಂ ಕೊಂಡು ಗಂಗಾಸುತಂಗೆ ಅದಿರದೆ ಇದಿರ್ಚಿ ನಿಂದಾಗಳ್: ಪಂಪಭಾ, ೧೦. ೫೨ ವ)

ಗಂಗೆಗಟ್ಟು
[ಕ್ರಿ] [ಗಂಗೆಗೆ+ಅಟ್ಟು] ವಿಸರ್ಜನೆಮಾಡಲು ಗಂಗಾನದಿಗೆ ಕಳಿಸು (ನಟ್ಟುಡಿದ ಬಾಳ ಕಕ್ಕಕಡೆಯುಡಿಗಳುಮಂ ಅಯಸ್ಕಾಂತಮಂ ತೋಱಿ ತೆಗೆಯಿಸುತ್ತುಂ ವಜ್ರಮುಷ್ಟಿಯ ಪೊಯ್ಲೊಳಂ ಬಾಳ ಕೋಳೊಳಮುಚ್ಚಳಿಸಿದ ಕಪಾಲದೋಡುಗಳಂ ಗಂಗೆಗಟ್ಟುತ್ತುಂ: ಪಂಪಭಾ, ೧೧. ೨ ವ)

ಗಂಗೆಯ ಪೆರ್ಮಗ
[ನಾ] ಭೀಷ್ಮ (ಗಂಗೆಯ ಪೆರ್ಮಗಂಗೆ ಘಟಸಂಭೂತಂಗೆ ಕರ್ಣಂಗೆ ಅಸಾಧ್ಯನೊಳ್ ಆ ಗಾಂಡಿವಿಯೊಳ್ ಕಱುತ್ತಿಱಿವರಾರ್: ಪಂಪಭಾ, ೧೩. ೯)

ಗಂಟು
[ನಾ] [ಗ್ರಂಥಿ] ಕಬ್ಬು, ಬಿದಿರು ಮುಂತಾದವುಗಳ ಗೆಣ್ಣು (ಬಿದಿರ ಗಂಟುಗಳಂ ಕಳೆವಂತೆ ಮನ್ಮನಃಸ್ಖಲನೆಯಂ ಉಂಟುಮಾಡುಗುಂ: ಪಂಪಭಾ, ೧೨. ೧೦೩); [ನಾ] ಕಟ್ಟಿದುದು (ಪರಾಕ್ರಮಧವಳನ ಶರಪರಿಣತಿಯಂ ಕಂಡು ದುರ್ಯೋಧನನ ಮೊಗಂ ತಲೆನವಿರ ಗಂಟಿಂ ಕಿಱಿದಾಗೆ: ಪಂಪಭಾ, ೨. ೭೭ ವ)

ಗಂಟೆ
[ಘಂಟಾ] ಶಬ್ದ ಉಂಟುಮಾಡುವ ಸಾಧನ (ಗಗನಗಜಕ್ಕಿಕ್ಕಿದ ಪೊನ್ನ ಗಂಟೆಯೆರಡೆನಲು: ಆದಿಪು, ೬. ೫೨)

ಗಂಡ
[ನಾ] ಗಂಡುಸು (ಕುಲಮುಂ ಚಲಮುಂ ದೊರೆಯುಂ ಕಿಡೆ ಬಾೞ್ವಂ ಗಂಡರೂಪಿನೊಳ್ ಗಂಡನಲ್ತು ಪೆಂಡತಿಯೆ ವಲಂ: ಆದಿಪು, ೧೨. ೯೬); [ನಾ] ಆನೆಯ ಕುಂಭಸ್ಥಳ (ಮಾದ್ಯತ್ ಗಜ ಗಂಡಕಷಣಪ್ರೋದ್ಭೇದದಿಂ ಸಾರ್ದು ಬಂದು ಇದಿರೊಳ್ ಕೂಡುವುದಿಲ್ಲಿ ಚಂದನರಸಂ ಕೆಂಬೊನ್ನ ಟಂಕಂಗಳೊಳ್: ಪಂಪಭಾ, ೪. ೨೨); [ನಾ] ಶೂರ (ಶ್ರೀಯುವತಿಯಂ ಆ ವೀರಶ್ರೀಯುವತಿಗೆ ಸವತಿ ಮಾೞ್ಪೆನೆಂದು ಅರಿನೃಪರಂ ಉಳ್ಳಾಯವೆರಸು ಎೞೆದುಕೊಂಡು ಧರಾಯುವತಿಗೆ ನೆಗೞ್ದ ಹರಿಗನೊರ್ವನೆ ಗಂಡಂ: ಪಂಪಭಾ, ೧೧. ೧)


logo