logo
भारतवाणी
bharatavani  
logo
Knowledge through Indian Languages
Bharatavani

Pampana Nudigani (Kannada)

Please click here to read PDF file Pampana Nudigani (Kannada)

ಒಂದಲ್ಲದುದು
[ನಾ] ಒಂದನ್ನು ಬಿಟ್ಟು (ಕೌರವನಾಯಕನ ಊರುಭಂಗಮೊಂದಲ್ಲದುದೆಲ್ಲಮಂ ನೆಱಪಿದೆಂ ಗಡಂ ಓಳಿಯೆ ಕೇಳಿಮೆಲ್ಲರುಂ: ಪಂಪಭಾ, ೧೨. ೧೬೧)

ಒಂದವಿಂದ
[ನಾ] ಇಜ್ಜೋಡು, ಬೇರ್ಪಡುವಿಕೆ (ಆಕೆಯಂ ಎನ್ನಂ ಓವೋ ಕಾಯ್ದಿಱಿಯೆ ವಿಧಾತ್ರನೇಂ ಪಡೆದನೋ ಬಿಸವಂದಮನೊಂದವಿಂದಮಂ: ಆದಿಪು, ೧೨. ೨೯)

ಒಂದವಿಂದಿ
[ನಾ] ಇಜ್ಜೋಡು (ಪೊಂದಳಿರೊಳ್ ಒಂದವಿಂದಿಯಲ್ಲದದೊಂದು ನಾಡೆಯುಂ ಅಂದಂಬಡೆದು ಪೊಳೆವ ಪೊಂದಳಿರುಂ: ಆದಿಪು, ೪. ೪೧ ವ)

ಒಂದಿದ
[ಗು] ನಂಬಿಕಸ್ಥನಾದ (ಒದವಿದ ಬೇಟವಪೊುಡೆನಗತ್ತಳಗಂ ಬಗೆವೇೞ್ವೊಡೆನ್ನ ಮೇಳದ ಕೆಳೆಯರ್ಕಳಿಲ್ಲ .. .. ಓತು ಮಾತಡಕಲೊಂದಿದ ದೂದವರಿಲ್ಲ ನೆಟ್ಟನೆ: ಪಂಪಭಾ, ೪. ೭೯)

ಒಂದಿ ನಿಲ್
[ಕ್ರಿ] ಸೇರಿ ನಿಲ್ಲು, ಸಜ್ಜಾಗಿ ನಿಲ್ಲು (ಇತ್ತ ತಪದೊಳ್ ನರಂ ಇಂತು ಒಂದಿ ನಿಲೆ ತಪದ ಬಿಸುಪಿಂ ಬೆಂದೞಿದುದು ವನದೊಳುಳ್ಳ ತಪಸಿಯರ ತಪಂ: ಪಂಪಭಾ, ೮. ೧೦)

ಒಂದಿ ಬಾರದಂ
[ನಾ] ಕೂಡಿ ಬರದವನು (ಅಖಿಳಶಾಸ್ತ್ರವಿಶಾರದನಪ್ಪನುಂ ಗೆಲಲ್ಕರಿಯನುಂ ಒಂದಿ ಬಾರದನುಂ ಅಂಕದ ಕರ್ಣನೆ: ಪಂಪಭಾ, ೯. ೬೧)

ಒಂದಿನಿಸು
[ನಾ] ಒಂದಿಷ್ಟು, ಕೊಂಚ (ಪವನಸುತಂಗೆ ಪಾಸಟಿಗಳೊರ್ವರುಂ ಇಲ್ಲದಱಿಂದಂ ಆಂತ ಕೌರವಬಲದ ಉರ್ಕನೊಂದಿನಿಸು ಮಾಣಿಸಿ ಪೋಪಂ: ಪಂಪಭಾ, ೧೨. ೧೨೧)

ಒಂದು
[ಕ್ರಿ] ಲೇಪಿತವಾಗು (ಈ ಜಗನಮಿದೇಕೆ ಹೇಮರಶನಾಧ್ವನಿಯಿಲ್ಲದೆ ಮೂಗುವಟ್ಟುದು ಈ ಬಗೆಯೋಲ್ ಅಲಕ್ತಕದ್ರವದೊಳೊಂದದೆ ನಿಂದುವು ಪಾದಪಂಕಜಂ: ಪಂಪಭಾ, ೪. ೬೨); [ನಾ] ಒಂದು ಎಂಬ ಸಂಖ್ಯೆ (ಒಂದುಂ ಎಡಂಬಡುಂ ಪೊರೆಯುಂ ಇಲ್ಲ ಅವರ್ಗೆ ಎಂಬುದಂ ಎಯ್ದೆ ನಂಬಿ ನಾಡಂ ದಯೆಗೆಯ್ದು ನೀಂ ಕುಡುವಿನಂ: ಪಂಪಭಾ, ೯. ೪೩); [ಕ್ರಿ] ಕೂಡು, ಸೇರು (ಮುತ್ತಿನ ಪಚ್ಚೆ ಮಾಣಿಕದ ವಜ್ರದ ಕೇೞಿಯೊಳ್ ಒಂದಿ ಸಾಂದಿನೊಳ್ ಕತ್ತುರಿಯೊಂದು ಕೋೞ್ಗೆಸಱೊಳ್: ಪಂಪಭಾ, ೧೪. ೨೦); [ನಾ] ಬುದ್ಧಿ (ಪರಿಕಿಪುದು ಒಂದಱಿಂದೆ ಎರಡಂ ಓತುಕೊಳ್ವುದು ಮೂಱಱಿಂದೆ ನಾಲ್ಕರಿದಱಿದು ಅಯ್ದಱಿಂದೆ ನೆಱೆ ಕಲ್ವುದು ನಿರ್ಣಯಂ ಆಱಱೊಳ್ ಪರಿಣತನಪ್ಪುದು ಏೞಱೊಳಂ ಒಂದದೆ ನಿಲ್ವುದು: ಪಂಪಭಾ, ೧೩. ೬೬)

ಒಂದುಗುಂದು
[ಕ್ರಿವಿ] ಒಂದೂ [ಸ್ವಲ್ಪವೂ] ಕಡಿಮೆಯಾಗದೆ (ಪ್ರಯತ್ನದೆ ಬಿಗಿದಿರ್ದ ಎರೞ್ದೊಣೆ ಮಿಸುಪ್ಪ ಅಸಿ ಖೇಟಕಂ ಇಂತಿವು ಒಂದುಗುಂದದೆ ನಿಲೆ ನೋೞ್ಪ ನೋಟಕರ್ಗೆ ಸೌಮ್ಯಭಯಂಕರನಾದಂ ಅರ್ಜುನಂ: ಪಂಪಭಾ, ೭. ೭೯)

ಒಂದು ತಲೆಯಾಗೋಡು
[ಕ್ರಿ] ಒಂದೆ ದಿಕ್ಕಿಗೆ ತಲೆತಿರುಗಿಸಿಕೊಂಡು ಓಡು (ಭೋರ್ಗರೆದಾರ್ದ ಪಾಂಡವ ಪತಾಕಿನಿಯುಮಂ ಒಂದು ತಲೆಯಾಗೋಡುವ ಕೌರವ್ಯಧ್ವಜಿನಿಯುಮಂ ಬೇಱೊಂದು ಮೊನೆಯೊಳ್ ಕಾದುತಿರ್ದ ಅಶ್ವತ್ಥಾಮಂ ಕಂಡು: ಪಂಪಭಾ, ೧೨. ೩೦ ವ)


logo