logo
भारतवाणी
bharatavani  
logo
Knowledge through Indian Languages
Bharatavani

Pampana Nudigani (Kannada)

Please click here to read PDF file Pampana Nudigani (Kannada)

ಲಂಕಾಧಿಪತಿ
[ನಾ] ಲಂಕೆಯ ಒಡೆಯ, ರಾವಣ (ತನ್ನ ದೋರ್ಗರ್ವದ ಅಗುರ್ವಂ ಪ್ರಾಕಟಂ ಮಾಡುವ ಬಗೆಯೊಳಿದಂ ಪತ್ತಿ ಕಿೞ್ತೊತ್ತಿ ಪೊತ್ತು ಎತ್ತಿದೊಡೆ ಇತ್ತಂ ಮೆಚ್ಚಿ ಲಂಕಾಧಿಪತಿಗೆ ಬರವಂ ರಾಗದಿಂ ನೀಳಕಂಠಂ: ಪಂಪಭಾ, ೭. ೭೪)

ಲಂಗಿಸು
[ಕ್ರಿ] [ಲಂಘಿಸು] ಹಾರು, ನೆಗೆ (ಪೊಗೆ ಪುಗೆ ಕಣ್ಣಂ ಸಿಂಗಂಗಳ್ ಅಳುರೆ ಗರ್ಜಿಸಿ ಲಂಗಿಸಿ ಪುಡಪುಡನೆ ಪುೞ್ಗಿ ಸತ್ತುವು ಪಲವುಂ: ಪಂಪಭಾ, ೫. ೯೨)

ಲಂಪಟ
[ನಾ] ಆಸಕ್ತ, ಕಾಮುಕ (ವಿಷಯಸುಖಾಸ್ವಾದನದೊಳ್ ಲಂಪಟರಿದೇಕೆಯೋ ನರಪಶುಗಳ್: ಆದಿಪು, ೧೪. ೧೨೫);

ಲಂಪಳ
[ನಾ] ವಿಷಯಾಸಕ್ತ (ಓವೋ ಲಂಪಳರಪ್ಪೆಮ್ಮಂದಿಗರಂ ಬಗೆವಂದದೆ ಕೊಂದಿಕ್ಕವೆ ಸಕಳವಿಯವಿಷಮವಿಷಂಗಳ್: ಆದಿಪು, ೪. ೭೩)

ಲಂಪಳಿಕೆ
[ನಾ] ಲಂಪಟತೆ (ಬಿಸುಡಂ ಮುನ್ನಿನ ತನ್ನ ಲಂಪಳಿಕೆಯಂ ಮತ್ತಂ ಜರಾಜರ್ಜರಂ: ಆದಿಪು, ೨. ೪೫)

ಲಂಬ
[ಕ್ರಿ] ಜೋಲುಬಿದ್ದಿರುವ (ಉತ್ತುಂಗ ಪೀನನಿಜಾಂಸಾರ್ಪಿತ ಲಂಬಹಾರನವನಾ ಪಾಂಡ್ಯಂ: ಪಂಪಭಾ, ೩. ೫೪)

ಲಂಬಣ
[ನಾ] ಹಾರ (ಸರಿಗೆಗಿವು ಲಂಬಣಕ್ಕಿವು ಬರಗಲೆಗಿವು ಮುಗುಳ್ಗಳೆಮ್ಮ ಮೇಖಳೆಗಿವು ನೂಪುರರಚನೆಗಿಂತೆವೆಂದು ಅದರದಿಂದಂ ಕೊಯ್ದರಾಯ್ದು ದಿವಿಜಾಂಗನೆಯರ್: ಆದಿಪು, ೭. ೬೯)

ಲಂಬಣಿಗೆ
[ನಾ] ಲಂಬಣ (ಮಣಿಮಕುಟಂ ಶಿಖರಂ ಲಂಬಣಿಗೆಯ ಪೊಸಮುತ್ತು ನಿರ್ಝರಂ ಮಣಿಕಟಕಂ ಮಣಿಕಟಕಮಾಗೆ ತದ್ಗಿರಿಗೆಣೆಯಾದಂ ತನ್ನ ಪೆಸರೊಳಂ ವಿಜಯಾರ್ಧಂ: ಆದಿಪು, ೧೩. ೧೩)

ಲಂಬಮಾನ
[ಗು] ಜೋತುಬಿದ್ದಿರುವ (ಅದು ಅಭ್ಯುದಯಸುಖ ನಿಳಯಂ ಅದು ಮೋಕ್ಷದ ನೆರೆಮನೆ ಲಂಬಮಾನ ಮುಕ್ತಾದಾಮಂ: ಆದಿಪು, ೬. ೩೬)

ಲಂಬಸ್ತನ
[ನಾ] ದೊಡ್ಡಮೊಲೆ (ನಾಭಿವಿಲಂಬಮಾನ ಲಂಬಸ್ತನವಿಸ್ರಸ್ತ ಅಂತರೀಯ ಉತ್ತರೀಯ ವೃದ್ಧಧಾತ್ರೀನರ್ತನ ನಿರೀಕ್ಷಣ ಜನತಾಜನಿತಹಾಸನಿವಾಸಮುಂ: ಆದಿಪು, ೮. ೩೫ ವ)


logo