logo
भारतवाणी
bharatavani  
logo
Knowledge through Indian Languages
Bharatavani

Pampana Nudigani (Kannada)

Please click here to read PDF file Pampana Nudigani (Kannada)

ನಂಜು
[ನಾ] ವಿಷ (ಮನದೊಲವರದಿಂದ ಈ ಯಮತನಯನ ಕುಡುವಗ್ರಪೂಜೆ ಮತ್ಸನ್ನಿಧಿಯೊಳ್ ನಿನಗೆ ಅಶನಿಯ ಮಿೞ್ತುವ ನಂಜಿನ ದೊರೆಯೆಂದೊಣರ ನಂದಗೋಪಾಲಸುತಾ: ಪಂಪಭಾ, ೬. ೫೧)

ನಂಜುಗುಡಿದರಂತೆ
[ನಂಜು+ಕುಡಿದರಂತೆ] ವಿಷ ಕುಡಿದವರ ಹಾಗೆ (ದಿವ್ಯವಚನಮಂ ಅದಂ ಅಂತೇನುಂ ಬಗೆಯದೆ ಕುಡಿದು ಅಜ್ಞಾನತೆಯಿಂ ನಂಜುಗುಡಿದರಂತಿರೆ ಕೆಡೆದಂ: ಪಂಪಭಾ, ೮. ೪೦)

ನಂಜುನೀರ್
[ನಾ] ವಿಷಯುಕ್ತ ನೀರು (ನಂಜುನೀರ್ ಪಿಡಿದು ನುಂಗುವುದಲ್ಲಿಯ ಮೀಂಗಳ್: ಆದಿಪು, ೫. ೮೮)

ನಂದ
ಸಂತೋಷಗೊಳ್ಳಲಿ (ಅತಿಮಧುರಂ ಒರ್ಮೊದಲೊಗೆದುದು ಜಯ ಜೀಯ ನಂದ ವರ್ಧಸ್ವ ರವಂ: ಆದಿಪು, ೨. ೬೪)

ನಂದಗೋಪಾಲಸುತ
[ನಾ] ನಂದಗೋಪಾಲನ ಮಗ, ಶ್ರೀ ಕೃಷ್ಣ (ಮನದೊಲವರದಿಂದ ಈ ಯಮತನಯನ ಕುಡುವಗ್ರಪೂಜೆ ಮತ್ಸನ್ನಿಧಿಯೊಳ್ ನಿನಗೆ ಅಶನಿಯ ಮಿೞ್ತುವ ನಂಜಿನ ದೊರೆ ಎಂದು ಒಣರ ನಂದಗೋಪಾಲಸುತಾ: ಪಂಪಭಾ, ೬. ೫೧)

ನಂದನ
[ನಾ] ಮಗ (ರಾಜ್ಯಮಂ ತೃಣದಿಂದಂ ಲಘುವಾಗೆ ಬಗೆದು ಬಗೆದರ್ ತಾಮುಂ ತಂದೆಯ ಬಗೆದುದನೆ ಎಂದೊಡೆ ಅಗುಂದಲೆ ಪೊಗೞಲ್ಕೆ ಚಕ್ರಿನಂದನರಳವಂ: ಆದಿಪು, ೪. ೮೮); [ನಾ] ಉದ್ಯಾನವನ (ಇದಂ ಪುಗಲಿಂ ಗಡಿಂ ಎಂದು ಬೇಟಕಾಱರಂ ಇರದೆ ಊಱಿ ಸಾಱಿ ಜಡಿವಂತೆ ಎಸೆಗುಂ ಸಹಕಾರಕೋಮಳ ಅಂಕುರಪರಿತುಷ್ಟ ಪರಪುಷ್ಟಗಳ ಧ್ವನಿ ನಂದನಂಗಳೊಳ್: ಪಂಪಭಾ, ೨. ೧೩)

ನಂದನವನ
[ನಾ] [ಜೈನ] ಮೇರುಪರ್ವತದ ಮೇಲಿರುವ ನಾಲ್ಕು ವನಗಳಲ್ಲಿ ಒಂದು, ಉಳಿದ ಮೂರು: ಭದ್ರಶಾಲ, ಸೌಮನಸ ಮತ್ತು ಪಾಂಡುಕ (ಇದು ಭದ್ರಶಾಲನಂದನಂ ಅದು ನನ್ದನವನಂ ಅದಲ್ತೆ ಸೌಮನಸಂ ಅದೇಂ ತುದಿಯೊಳ್ ಪಾಂಡುಕವೆಸೆದಿರ್ಪಿದೊ: ಆದಿಪು, ೨. ೨೯)

ನಂದನವನಪ್ರಸ್ಥ
ಗು] ಉದ್ಯಾನವನ್ನೊಳಗೊಂಡ (ಅನೇಕ ಸಹಕಾರ ಅಶೋಕ ಆನೋಕಹ ನಂದನವನಪ್ರಸ್ಥಮಂ ಇಂದ್ರಪ್ರಸ್ಥಮಂ ಎಯ್ದೆವಂದು: ಪಂಪಭಾ, ೫. ೨೨ ವ)

ನಂದಲೀ
[ಕ್ರಿ] [ನಂದಲು+ಈ] ಆರಲು ಅವಕಾಶ ನೀಡು (ಹೋಮಾಗ್ನಿಯಂ ಎಱಂಕೆಯ ಗಾಳಿಯಿಂ ನಂದಲೀಯದುರಿಪುವ ರಾಜಹಂಸೆಗಳುಮಂ .. .. ನೋಡಿ ತಪೋವನದ ತಪೋಧನರ ತಪಃಪ್ರಭಾವಕ್ಕೆ ಚೋದ್ಯಂಬಟ್ಟು: ಪಂಪಭಾ, ೧. ೧೧೫ ವ)

ನಂದಿಸು
[ಕ್ರಿ] ಆರಿಸು (ಅನ್ನೆಗಂ ಕಪ್ಪಂಗವಿಯಾಗಿ ಕವಿವ ದ್ರುಪದವಿಳಯಾನಿಳನಂ ದ್ರೋಣಂ ಮಹಾದ್ರೋಣ ಪುಷ್ಕಲಳಾವರ್ತಕಂಗಳೆಂಬ ವಿಳಯಕಾಳ ನೀಳಜಳಧರ ವರ್ಷಂಗಳಿಂ ನಂದಿಸೆಯುಂ: ಪಂಪಭಾ, ೧೨. ೨೦ ವ); [ಕ್ರಿ] ಪ್ರಾಣ ತೆಗೆ (ಪತಿ ಮುಚ್ಚೆಯೊಳಿಚ್ಚೆಯೆ ಕೆಟ್ಟು ಜೋಲ್ದೊಡೆ ಆದಮೆ ನಸುನೊಂದು ನಂದಿಸದೆ ತನ್ನನೆ ನಿಂದಿಸಿದಂ ದಿನೇಶಜಂ: ಪಂಪಭಾ, ೧೨. ೧೧೭)


logo