logo
भारतवाणी
bharatavani  
logo
Knowledge through Indian Languages
Bharatavani

Pampana Nudigani (Kannada)

Please click here to read PDF file Pampana Nudigani (Kannada)

ತಂಡ
[ನಾ] ಗುಂಪು (ಕಣ್ಗಳಿಂ ಕೆಂಡದ ತಂಡಂಗಳುಂ ಉರಿಯ ತಂಡಂಗಳುಂ ಸೂಸೆ: ಪಂಪಭಾ, ೩. ೧೬ ವ); ಪಕ್ಷ (ಪೆರ್ಚುಗೆ ಭರತಕುಲಂ ನೆಲೆವೆರ್ಚುಗೆ ನಿಮ್ಮೆರಡು ತಂಡಂ ಒದವಿದ ನಣ್ಪಿಂ ಕರ್ಚುಗೆ ಕಲುಷಂ: ಪಂಪಭಾ, ೧೩. ೬೭)

ತಂಡಂಗೊಳ್
[ಕ್ರಿ] ಗುಂಪುಗೂಡು (ಪೊಱಮಟ್ಟಿದಿರೊಳ್ ಕಂಡಂ ನೆರೆದು ನಿಗುಂಬಿಸಿ ತಂಡಂಗೊಂಡಿರ್ದ ನರರ ಖಚರರ ಗುಂಡಂ: ಆದಿಪು, ೪. ೩)

ತಂಡುಳ
[ನಾ] ಅಕ್ಕಿಯ ಕಾಳು (ವಾರ್ಧಿಭೂತಳನಾಥಂಗೆ ಅನುರಾಗಮಂ ಬಳೆಯಿಸಲ್ಕೆ ಅರ್ಘ್ಯಕ್ರಿಯಾ ತಂಡುಲಂಗಳಿವೆಂದು ಆದರದಿಂದೆ ಕೊಂಡನವಱೊಳ್ ಪತ್ತೆಂಟು ರತ್ನಂಗಳಂ: ಆದಿಪು, ೧೨. ೧೨೦)

ತಂತನ್ಮಾನ
[ಗು] ಮಾರ್ಪೊಳೆ, ಪ್ರತಿಬಿಂಬಿಸು (ತಂತನ್ಯಮಾನದೀಪ್ತಿ ಸಂತಾನಾಮೃತ ನಾನಾನೀರಜ ರಜಃಪಿಂಜರಿತ ಜಳಜಳಾಶಯಂಗಳೊಳಂ: ಆದಿಪು, ೬. ೧೦೧ ವ)

ತಂತಿ
[ನಾ] ಲೋಹದ ತೆಳುವಾದ ಎಳೆ (ಬೆರಲೊಳ್ ಬೀಣೆಯ ತಂತಿಗಳೊರಸಿದ ಕೆಂಗಲೆಗಳ್: ಪಂಪಭಾ, ೬. ೧೦)

ತಂತ್ರ
[ನಾ] ವ್ಯೂಹ (ತಮ್ಮ ಬೆಸದಿಂ ತಂತಮ್ಮ ಠಾಣಾಂತರಂಗಳೊಳ್ ಇರ್ದ ಅಂಗಜತಂತ್ರದಂತೆಸೆವಿನಂ ಚೆಲ್ವಾದುವಿಮ್ಮಾವಿನೊಳ್: ಆದಿಪು, ೧೧. ೯೬); ಸೈನ್ಯ (ವಾಯುದೇವಂ ಬಂದು ಏಂ ಮಂತ್ರಂ ಪೇೞೆನೆ ಕುಡು ರಿಪುತಂತ್ರಕ್ಷಯಕರನಂ ಎನಗೆ ಹಿತನಂ ಸುತನಂ: ಪಂಪಭಾ, ೧. ೧೨೪)

ತಂತ್ರಂಗಳ್
[ನಾ] ವಿವಿಧ ಬಗೆಯ ಸೈನ್ಯಗಳು (ಮೌಲ, ಭೃತ್ಯ ಸುಹೃತ್ ಶ್ರೇಣಿ ಮಿತ್ರ ಆಟವಿಕ ತಂತ್ರಂಗಳ್ ಪಣ್ಣಿದ ಜಂತ್ರಂಗಳಂತೆ ಕೞಕುೞಮಾದುವು: ಪಂಪಭಾ, ೧೩. ೨೧ ವ) [ಇವು ಕ್ರಮವಾಗಿ ಪಾರಂಪರಿಕ ಸೈನಿಕರು, ಸಂಬಳ ತೆಗೆದುಕೊಳ್ಳುವ ಸೈನಿಕರು, ಸ್ನೇಹಿತ ರಾಜರ ಕಡೆಯವರು, ಯುದ್ಧಸಮಯದಲ್ಲಿನ ತಾತ್ಕಾಲಿಕ ಸೈನಿಕರು, ಶತ್ರುಗಳ ವಿರೋಧಿ ಬಣದ ಸೈನಿಕರು, ಕಾಡುಜನರಾದ ಸೈನಿಕರು]

ತಂತ್ರಾವಾಪ
[ನಾ] [ತಂತ್ರ+ಆವಾಪ] ತಂತ್ರಗಳನ್ನು ಹೂಡವುದು (ನಿರಂತರಂ ತಂತ್ರಾವಾಪ ಚಿಂತಾಂತರಾಯಪ್ರಾಯ ಸುಖಲವದೊಳ್ ಈ ಮಹೀರಾಜ್ಯದೊಳ್ ನಿಱಿಸುವುದುಂ: ಆದಿಪು, ೮. ೮ ವ)

ತಂತ್ರಿ
[ನಾ] ತಂತಿ (ಕಿನ್ನರೀಕರಕಿಸಲಯಚಳನಸಮುತ್ಪನ್ನ ಕಾಕಳೀಕಳರವಮಿಳಿತ ಮಧುಕರತಂತ್ರೀಸಮಂಚಿತವಿಪಂಚೀ ಮಂದ್ರತಾರಮಧುರಮೂರ್ಚ್ಛನಾಸನಾಥಪ್ರಯೋಗಂಗಳುಮಂ: ಆದಿಪು, ೧೧. ೭೪ ವ)

ತಂತ್ರೀನಾದ
[ನಾ] ತಂತಿವಾದ್ಯದ ದನಿ (ಸುರಯುವತಿ ತಂತ್ರೀನಾದಂ ಕೊಳೆ ಬೀಣೆಯ ದಂಡಿಗೆಯುಂ ತಳಿರ್ತುದೆಂಬೊಂದು ಶಂಕೆಯಂ ಪುಟ್ಟಿಸಿದಳ್: ಆದಿಪು, ೭. ೨೧)


logo