logo
भारतवाणी
bharatavani  
logo
Knowledge through Indian Languages
Bharatavani

Pampana Nudigani (Kannada)

Please click here to read PDF file Pampana Nudigani (Kannada)

ಭಂಗ
[ನಾ] ಅವಮಾನ (ಭರತಾವನೀಶ್ವರಂ ಗುರು ಪಿರಿಯಣ್ಣಂ ಚಕ್ರವರ್ತಿ ಮಹಿಮಾಕರಂ ಈ ದೊರೆಯನುಂ ಅಳವೞಿಯೆ ವಸುಂಧರೆಯೊಳ್ ತಂದಿಕ್ಕಿ ಭಂಗಮಂ ಮಾಡುವೆನೇ: ಆದಿಪು, ೧೪. ೧೧೨); [ನಾ] ಮುರಿಯುವುದು (ತುಂಗವನ್ಯಮತಂಗಜ ದಂತಾಘಾತ ನಿಪಾತಿತಸಲ್ಲಕೀ ಭಂಗಮಂ .. .. ನೃಪನೆಯ್ದಿದಂ ಉದ್ಯತ್ಛೃಂಗಮನಾ ಶತಶೃಂಗಮಂ: ಪಂಪಭಾ, ೧. ೧೧೫)

ಭಂಗಿ
[ನಾ] ನಿಲವು (ಭಂಗಿಗಳೊಳೆಮ್ಮೊಳಾದೀ ಸಂಗಡಮಂ ನೀಮೆ ಮನದೆಗೊಂಡೆಮ್ಮ ಕಿಸುರ್ ಪಿಂಗುಗೆ ಅಗಲ್ವೆಡೆಯೊಳ್: ಆದಿಪು, ೧೧. ೧೩೩); [ನಾ] ತಿರುವು (ಕೆಂಪು ಕೆಂಪು ಕೊನೆ ಸೆಳ್ಳುಗುರ್ಗಳ್ ಕುಡಿ ತೋಳ್‌ನಯಂ ನಯಂ ನೆಲೆ ನೆಲೆ ಭಂಗಿ ಭಂಗಿ : ಪಂಪಭಾ, ೫. ೧೨)

ಭಂಗುರ
[ಗು] ಚಂಚಲವಾದ (ತುಂಗತರಂಗ ಭಂಗುರ ಪಯೋಧಿಪರೀತ ಮಹಾಮಹೀತಳಾಲಿಂಗಿತಕೀರ್ತಿ ಕೇಳ್ದು ಬಡಪಾರ್ವನ ಪುಯ್ಯಲಂ ಒರ್ಮೆ: ಪಂಪಭಾ, ೬. ೨)

ಭಂಡಾರಿಗ
[ನಾ] ಕೋಶಾಗಾರದ ಮುಖ್ಯಾಧಿಕಾರಿ, ಚಕ್ರವರ್ತಿಯ ಏಳು ಜೀವರತ್ನಗಳಲ್ಲಿ ಒಂದು (ಬುದ್ಧಿಸಾಗರನೆಂಬ ಪುರೋಹಿತನುಂ ಕಾಮವೃಷ್ಟಿಯೆಂಬ ಭಂಡಾರಿಗನುಂ: ಆದಿಪು, ೧೫. ೩ ವ)

ಭಕ್ಷ
[ನಾ] ಆಹಾರ (ನಿಡಿಯರ್ ಬಲ್ಲಾಯದ ಬಲ್ದಡಿಗರ್ ವಂದಿರ್ದರಯ್ವರಾಲವ ಕೆೞಗಿಂ ತೊಡರ್ದರ್ ನಮ್ಮಯ ಭಕ್ಷದೊಳ್: ಪಂಪಭಾ, ೩. ೧೨)

ಭಕ್ಷ್ಯ
[ನಾ] ತಿಂಡಿ, ಆಹಾರ (ಶಾರ್ದೂಲ ವರಾಹ ಗೋಲಾಂಗೂಲ ನಕುಳಂಗಳಂ ನೋಡುತ್ತುಂ ಅವರ್ಕೆ ಭಕ್ತ್ಯಾಪೂಪಂಗಳಂ ತರಿಸಿ ನೀಡುತ್ತುಂ ಇರ್ದು: ಆದಿಪು, ೫. ೨ ವ)

ಭಗವತಿಯೇಱು
[ನಾ] [ಭಗವತಿಯ+ಏಱು] ದೇವಿಯ ಯುದ್ಧ, ದೇವಿ ಮೈಮೇಲೆ ಬಂದಾಗ ಉಂಟಾಗುವ ಉರುಬು (ಭಗವತಿಯೇಱುವೆರ್ವ ತೆಱದಿನಾಯ್ತಿವರೇಱು: ಪಂಪಭಾ, ೧೦. ೧೩)

ಭಗ್ನೋತ್ಸಾಹ
[ನಾ] ಉತ್ಸಾಹವನ್ನು ಕಳೆದುಕೊಂಡವನು (ಕ್ಷುತ್ಪಿಪಾಸಾಶೀತಾತಪಪ್ರಮುಖ ಪರೀಷಹಂಗಳಂ ಸೈರಿಸಲಾಱದೆ ಭಗ್ನೋತ್ಸಾಹರುಂ ದೂರೋತ್ಸಾರಿತ ಅಭಿಮಾನಿಗಳುಂ ಆಗಿ: ಆದಿಪು, ೯. ೮೮ ವ)

ಭಗವತ್ಕೃತ
[ಗು] [ಜೈನ] ತೀರ್ಥಂಕರನಿಂದ ಆದ (ವಿತತಾಷಾಢದ ಬಹುಳ ಪ್ರತಿಪದ್ದಿನದಂದು ಕೀರ್ತಿ ನೆಗೞ್ದಿರೆ ಭಗವತ್ಕೃತಯುಗಮಾದುದರಿಂದಂ ಕೃತಯುಗಮೆಂಬರ್ ಪುರಾಣವಿದರಿದನೀಗಳ್: ಆದಿಪು, ೮. ೬೬)

ಭಗವದ್ರೂಪ
[ನಾ] [ಜೈನ] ಗಣಧರರೂಪ (ಭಗವದರುಹನ ಸಮಕ್ಷದೊಳ್ ಅಗಣ್ಯಪುಣ್ಯಪ್ರಭಾವದಿಂದಂ ಕೊಂಡಂ ಭಗವದ್ರೂಪಮಂ ಇಂದ್ರಾದಿಗಳೆಲ್ಲಂ ಪೊಗೞೆ ಕಾಲಲಬ್ಧಿಯನಾಗಳ್: ಆದಿಪು, ೧೦. ೪೮)


logo