logo
भारतवाणी
bharatavani  
logo
Knowledge through Indian Languages
Bharatavani

Pampana Nudigani (Kannada)

Please click here to read PDF file Pampana Nudigani (Kannada)

ಮನಸ್ಸಿನಿಂದ ಮೈಥುನಸುಖ
ಅನುಭವಿಸುವರು (ಅರ್ಧಮಾಸನಿರ್ಯತ್ ಸುರಭಿನಿಶ್ವಾಸನುಂ ಕಾಯಪ್ರವೀಚಾರನುಂ .. .. ಆಗಿ: ಆದಿಪು, ೨. ೬೯ ವ)

ಮಂಗಳ
[ನಾ] ಮಂಗಳಕರ ಗೀತೆ (ಮಂಗಳಮನೆ ಪಾಡುತ್ತುಂ ಮಂಗಳಧಾರಿಣಿಯರಾಗಿ ಮುಂದಂ ನಡೆವಾಶಾಂಗನೆಯರಿಂದೆ: ಆದಿಪು, ೭. ೪೮)

ಮಂಗಳಂಗಳ್
[ನಾ] ಮಂಗಳ ವಸ್ತುಗಳು (ತದ್ಗುಹಾಕೂಟ ನಿವಾಸಿಯಪ್ಪ ನಾಟ್ಯಮಾಲಾಮರಂ ಸುವರ್ಣಪೂರ್ಣ ಕುಂಭಾದಿ ಮಂಗಳಂಗಳಿನಿದಿರ್ಗೊಳೆ ಗುಹಾದ್ವಾರದಿಂ ಪೊಱಮಟ್ಟಾಗಳ್: ಆದಿಪು, ೧೩. ೮೦ ವ)

ಮಂಗಳಕಾರಣ
[ನಾ] ಶುಭಕ್ಕೆ ಕಾರಣವಾದ (ಮಂಳಕಾರಣ ಪಂಚಪದಂಗಳಂ .. .. ಅಕ್ಷಯ ಮಂತ್ರಪದಂಗಳನೋದುವುದು ನೆಱೆಯೆ ನಿಶ್ಚಲಮತಿಯಿಂ: ಆದಿಪು, ೨. ೫೪)

ಮಂಗಳಗೀತಿ
[ನಾ] ಮಂಗಳ ಸಂಗೀತ (ಪಾಸಱೆ ಸಿಂಹಪೀಠಂ ಅಳಿನಿರುತಿ ಮಂಗಳಗೀತಿ ಭೂತಳಂ ಪಾಸು ಮೃಗವ್ರಜಂ ಪರಿಜನಂ ಪೊದಱ್ ಓಲಗಸಾಲೆ: ಪಂಪಭಾ, ೭. ೨೯)

ಮಂಗಳತೂರ್ಯ
[ನಾ] ಮಂಗಳವಾದ್ಯ (ಮಂಗಳತೂರ್ಯನಾದಂ ಎಸೆಯುತ್ತಿರ್ಪನ್ನೆಗಂ ಚಕ್ರಿ ರಾಗಿಸಿ ಕೆಯ್ನೀರ್ ಎಱೆದಂ ಗುಣಾರ್ಣವ ಮಹೀಪಾಲಂಗಂ ಆ ಕನ್ನೆಯಂ: ಪಂಪಭಾ, ೫. ೨೫)

ಮಂಗಳಧಾರಿಣಿ
[ನಾ] ಮಂಗಳದ್ರವ್ಯಗಳನ್ನು ಹಿಡಿದವಳು (ಮಂಗಳಮನೆ ಪಾಡುತ್ತುಂ ಮಂಗಳಧಾರಿಣಿಯರಾಗಿ ಮುಂದಂ ನಡೆವಾಶಾಂಗನೆಯರಿಂದೆ: ಆದಿಪು, ೭. ೪೮)

ಮಂಗಳಪಾಠಕ
[ನಾ] ಹೊಗಳುಭಟ್ಟ (ಆಗಳ್ ಮಜ್ಜನಾವಸರ ಮಂಗಳಪಾಠಕ ಮಧುರನಿನದಮನಾಲಿಸುತ್ತುಂ: ಆದಿಪು, ೮. ೭೦ ವ)

ಮಂಗಳಭಂಗ
[ನಾ] ಶುಭಕ್ಕೆ ಉಂಟಾಗುವ ವಿಘ್ನ ಅಪಶಕುನ (ಒಯ್ಯನೆ ಮಂಗಳಭಂಗ ಭೀತಿಯಂ ತಳ್ವದೆ ಮಾಡೆ ಬಾಷ್ಪಜಳಮಂ ಕಳೆದು: ಪಂಪಭಾ, ೭. ೬೮)

ಮಂಗಳರಶ್ಮಿ
[ನಾ] ಮಂಗಳಕರವಾದ ಕಿರಣ (ಫಣೀಂದ್ರಾಳಯದಿಂದಂ ಉರ್ಚಿದ ಫಣಾಮಣಿ ಮಂಗಳರಶ್ಮಿಯೋ ಕರಂ ಮೇಳಿಸಿದಪ್ಪುದು ಎನ್ನೆರ್ದೆಯಂ: ಪಂಪಭಾ, ೧. ೯೬)


logo