logo
भारतवाणी
bharatavani  
logo
Knowledge through Indian Languages
Bharatavani

Pampana Nudigani (Kannada)

Please click here to read PDF file Pampana Nudigani (Kannada)

ಝಂಕರಣ
[ನಾ] ಝೇಂಕಾರ (ಸರಸಿಜವನಂಗಳಲರ್ವಿನಂ ಇರಲಾಱದೆ ಬೇಗಮೆಱಗುವಳಿನೀನಿವಹದ ಝಂಕರಣಕ್ಕೆ ಕಾಯ್ಪುಗೊಂಡು ಎೞ್ದು ತೊೞಲ್ದಪುವು ನಿನ್ನ ವಿಜಯಗಜಂಗಳ್: ಆದಿಪು, ೧೨. ೫೧)

ಝಣಝಣಾಯಮಾನ
[ಗು] ಝಣಝಣ ಎನ್ನುವ (ಆತ್ಮೀಯ ಘನಜಘನದ ನುಣ್ಪಿನೊಳ್ ನುಣ್ಪುಮೆಗೆತ್ತು ಝಣಝಣಾಯಮಾನ ಮಣಿಕಿಂಕಿಣೀವಿರಾಜಿತ: ಆದಿಪು, ೪. ೪೧ ವ)

ಝಲ್ಲರಿ
[ನಾ] ಒಂದು ಚರ್ಮವಾದ್ಯ (ಆಗಳ್ ಕುರುಧ್ವಜಿನಿಯುಂ ಅನೇಕ ಶಂಖ ಕಾಹಳ ಭೇರೀ ಪಣವ ಝಲ್ಲರೀ ಮೃದಂಗ ತೂರ್ಯಂಗಳ್ ಅಂತ ಕಾಲಾಂತಕ ವಿಕಟಾಟ್ಟಹಾಸಂಗಳ್ ಎಂಬಂತೆ ಮೊೞಗೆ: ಪಂಪಭಾ, ೧೧. ೩೩ ವ)

ಝಷ
[ನಾ] ಮೀನು (ಚಳತ್ಕದಳಿಕಾಮಾಳಂ ಝಷಾನೀಕಂ ಅಚ್ಚರಿಯಂ ಬಾಹುಬಲೀಶ್ವರಂಗೆ ಪಡೆದತ್ತು ಆತ್ಮೀಯ ಸೈನ್ಯಾರ್ಣವಂ: ಆದಿಪು, ೧೪. ೯೨)

ಝೇಂಕರಿಸು
[ಕ್ರಿ] ಶಬ್ದ ಮಾಡು, ಆರ್ಭಟಿಸು (ಓರಂತು ತಗುಳ್ದು ಝೇಂಕರಿಸಿದೊಡೆ ಎಲ್ವಡಗಾಗೆ ಮೋದಲೆಂದಿರ್ದ ಎಡೆಯೊಳ್ ಗುರು ತನ್ನ ಮಗನಂ ಎಡೆವುಗವೇೞ್ದಂ: ಪಂಪಭಾ, ೨. ೭೩)


logo