logo
भारतवाणी
bharatavani  
logo
Knowledge through Indian Languages
Bharatavani

Pampana Nudigani (Kannada)

Please click here to read PDF file Pampana Nudigani (Kannada)

ಹೋಮಾನಲ
[ನಾ] ಹೋಮದ ಬೆಂಕಿ (ನಿಟ್ಟಿಸೆ ಹೋಮಾನಲನೊಳ್ ಪುಟ್ಟಿದ ನಿನಗಕ್ಕ ಪರಕೆಯಾವುದೊ: ಪಂಪಭಾ, ೩. ೪೮)

ಹೋಯಜಬಾಪ್
[ಅ]ಹೋ ಅಜ ಬಾಪ್, ಆಶ್ಚರ್ಯಮೆಚ್ಚಿಕೆಗಳ ಉದ್ಗಾರಗಳು ಮೊಸಳೆ (ಛಾಯಾಲಕ್ಷ್ಯಮನೊಡ್ಡಿಯುಂ ಆಯದ ನೀರೊಳಗೆ ತನ್ನನಡಸಿದ ನೆಗೞಂ ಬಾಯೞಿವಿನಂ ಇಸಿಸಿಯುಂ ಅರೆ ಹೋಯಜ ಬಾಪ್ಪೆಂದು ಹರಿಗನಂ ಗುರು ಪೊಗೞೆಪಂಪಭಾ, ೨. ೬೦)

ಹ್ರಸ್ವ
[ಗು]ಕಿರಿದಾದ, ನೀಳವಲ್ಲದ (ಅನುಪೂರ್ವ ಧನುರಾಕರವಂಶನುಂ ಋಜುಪರಿಪೂರ್ಣಹ್ರಸ್ವಗ್ರೀವನುಂ ಮಹಾವ್ಯೂಢೋರಸ್ಕನುಂ:ಆದಿಪು, ೧೨. ೫೬ ವ)

ಹ್ರೀ
[ನಾ][ಜೈನ] ಒಬ್ಬ ದೇವತೆ (ಶ್ರೀ ಹ್ರೀ ಧೃತಿ ಕೀರ್ತಿ ಬುದ್ಧಿ ಲಕ್ಷ್ಮಿಗಳೆಂಬ ಅಱುವರುಮಂ ಆತ್ಮೀಯ ಗುಣಗಣಮಣಿ ವಿಭೂಷಣಂಗಳಿಂ ಜಿನಜನನಿಯಂ ಅಲಂಕರಿಸಲುಂ .. .. ಸೌಧರ್ಮೇಂದ್ರಂ ಬೆಸಸುವುದುಂ:ಆದಿಪು,೭. ೩ ವ)

ಱಾಟಣ
[ನಾ] ನೀರನ್ನು ಮೇಲೆತ್ತುವ ಸಾಧನ, ರಾಟಾಳ (ನಿನಗೀ ಖಳಸಂಸೃತಿಯೆಂಬುದೊಂದು ಱಾಟಣದೊಳಗಮ್ಮ ನೀಂ ಮೊಗಪೆಯಾಗದೆ ತಾಳ್ದಪವರ್ಗಮಾರ್ಗಮಂ: ಆದಿಪು, ೩. ೭೧)

ಱೋಡಾಡು
[ಕ್ರಿ] ಅಪಹಾಸ್ಯಮಾಡು (ಎನಗರಸಿಯಾಣೆ ನಿನ್ನೊಡನೆನಗೆ ಏಗೆಟ್ಟಪುದೆಂದು ಱೋಡಾಡಲ್: ಪಂಪಭಾ, ೮. ೬೮)


logo