logo
भारतवाणी
bharatavani  
logo
Knowledge through Indian Languages
Bharatavani

Pampana Nudigani (Kannada)

Please click here to read PDF file Pampana Nudigani (Kannada)

ಅಕ್ಕುಂ
[ಕ್ರಿ] [√ಆಗು] ಆಗುತ್ತದೆ (ಘೋರತಪೋವೃತ್ತಿಯನಾಂತ ಪೆಂಪು ಅತಿಬಳಂಗಕ್ಕುಂ ಪೆಱರ್ಗಕ್ಕುಮೇ: ಆದಿಪು, ೧. ೮೧)

ಅಕ್ಕೆ
[ಕ್ರಿ] ಆಗಲಿ (ಸುರನದಿಯ ನೀರೊಳ್ ಮಿಂದು ಇನನಂ ನೋಡಿ ನಿನ್ನ ದೊರೆಯನೆ ಮಗನಕ್ಕೆ ಎಂದಾಹ್ವಾನಂಗೆಯ್ಯಲೊಡಂ: ಪಂಪಭಾ, ೧. ೯೧)

ಅಕ್ಕೆಮ
ಆಯ್ತಲ್ಲವೇ (ಚಕ್ರಂ ಪುಟ್ಟಿದೊಡೀಗಳ್ ಚಕ್ರೇಶ್ವರನೆಂಬ ಪೆಸರುಮಾಯ್ತಕ್ಕೆಮ ತಾಂ ಚಕ್ರೇಶನಾದೊಡಂ ತನ್ನಾಕ್ರಮಣಮಂ ಎನ್ನೊಳೇಕೆ ಕೆಮ್ಮನೆ ತೋರ್ಪಂ: ಆದಿಪು, ೧೪. ೭೯)

ಅಕ್ರಮ
[ನಾ] ಕ್ರಮಹೀನತೆ (ಬರಲ್ಕೆವೇೞ್ಪುದನೞಿದೆಂ ವಿಕ್ರಮಮನುೞಿದೆಂ ಎನತೊಂದು ಅಕ್ರಮಮಂ ಸೈರಿಸೊಂದು ಸೂೞ್ ಚಕ್ರಧರಾ: ಆದಿಪು, ೧೨. ೧೧೩)

ಅಕ್ಷಪಾತ
[ನಾ] ಕಣ್ಣ ನೋಟ (ಜಳಧರಸಮಯನಿಶಾಸಂಚಲಿತ ವಿದ್ಯುತ್ ಪಿಂಗಳಾಕ್ಷಪಾತಂಗಳಿಂ ದೆಸೆಗಳಂ ನುಂಗುವಂತೆ ಮುಳಿದು ನೋಡಿ: ಪಂಪಭಾ, ೧೩. ೭೫ ವ)

ಅಕ್ಷಕ್ರೀಡೆ
[ನಾ] ಪಗಡೆಯಾಟ (ತನಗೆ ಸಾವಂ ಸಮಕಟ್ಟುವಂತೆ ಪಿಂಗಾಕ್ಷಂ ಅಕ್ಷಕ್ರೀಡೆಯಂ ಶಕುನಿಯೊಳ್ ಸಮಕಟ್ಟಿ: ಪಂಪಭಾ, ೬. ೬೯ ವ)

ಅಕ್ಷಮಾಲಿಕೆ
[ನಾ] ಜಪಸರ (ಸರಿಗೆಯೊಳ್ ಸಮೆದ ಅಕ್ಷಮಾಲಿಕೆ ಪೊನ್ನ ಮುಂಜಿ ತೊಳಪ್ಪ ಕಪ್ಪುರದ ಭಸ್ಮರಜಃ ತ್ರಿಪುಂಡ್ರಕಮೊಪ್ಪೆ: ಪಂಪಭಾ, ೬. ೮)

ಅಕ್ಷಯ ತೃತೀಯೆ
[ನಾ] [ಜೈನ] ಅಕ್ಕ ತದಿಗೆ, ಶ್ರೇಯಾಂಸನು ಆದಿಜಿನನಿಗೆ ಕಬ್ಬಿನ ಹಾಲ ಭಿಕ್ಷೆ ನೀಡಿದ ದಿನಕ್ಕೆ ಬಂದ ಹೆಸರು (ಅಕ್ಷಯದಾನಂ ನಿಮಗಕ್ಕಕ್ಷುಣ್ಣಮಿದೆಂದು ಪರಮ ಮುನಿ ಪರಸೆ ಬೞಿಕ್ಕಕ್ಷಯತೃತೀಯೆಯಿಂದಖಿಲಕ್ಷಿತಿಗಂ ನೆಗೞ್ದುದಲ್ತೆ ತತ್ಪುಣ್ಯದಿನಂ: ಆದಿಪು, ೧೦. ೬)

ಅಕ್ಷಯ ದಾನ
[ನಾ] [ಜೈನ] ಭಿಕ್ಷೆಯಿಟ್ಟವರಿಗೆ ಯತಿಗಳು ಮಾಡುವ ಆಶೀರ್ವಾದ (ಅಕ್ಷಯದಾನಂ ನಿಮಗಕ್ಕೆ ಅಕ್ಷುಣ್ಣಂ ಇದೆಂದು ಪರಮದಾನಿ ಪರಸೆ: ಆದಿಪು, ೧೦. ೬)

ಅಕ್ಷರ
[ಕ್ರಿವಿ] ಮಾತಿಲ್ಲದೆ (ದಕ್ಷಿಣಕಟಮನೆ ಸಿವುಱುವ ದಕ್ಷಿಣರದನದೊಳೆ ಹಸ್ತಮಂ ಪೇಱುವ ಚೆಲ್ವು ಈಕ್ಷಣಹರಂ ಎನೆ ಜಯಮಂ ಅಕ್ಷರಮಱಿಪಿದುದು ಭರತರಾಜಮದೇಭಂ: ಆದಿಪು, ೧೨. ೫೯)


logo