logo
भारतवाणी
bharatavani  
logo
Knowledge through Indian Languages
Bharatavani

Pampana Nudigani (Kannada)

Please click here to read PDF file Pampana Nudigani (Kannada)

ಅಕ್ಷಸೂತ್ರ
[ನಾ] ಜಪಸರ (ಪರಶುಫಳ ಅಕ್ಷಸೂತ್ರ ವರದೋಚಿತಚಿಹ್ನ ಚತುರ್ಭುಜಂ ಮನೋಹರ ವೃಷಲಾಂಛನಂ: ಆದಿಪು, ೧. ೮)

ಅಕ್ಷಿನಿಮೇಷ
[ಕ್ರಿ] ಕಣ್ಣ ರೆಪ್ಪೆ ಮಿಟುಕಿಸುವುದು (ತಪ್ತತಪನೀಯಚ್ಛಾಯನುಂ ಸಪ್ತಹಸ್ತೋಚ್ಛ್ರಯನುಂ ನಿದ್ರಾಲಸ ಅಕ್ಷಿನಿಮೇಷ ಜರಾ ಶೋಕ ವಿಷಾದ ವಿರಹಿತನುಂ: ಆದಿಪು, ೬. ೬೯ ವ)

ಅಕ್ಷಿಪಕ್ಷ್ಮ
[ನಾ] ಕಣ್ಣ ರೆಪ್ಪೆ (ನಡೆ ನೋೞ್ಪವರ್ಗೆ ಅಕ್ಷಿಪಕ್ಷ್ಮವಿಕ್ಷೇಪಣಮೊಂದೆ ಮಾಡುವುದು ಅವಳ್ ಮನುಜಾಂಗನೆಯೆಂಬ ಭೇದಮಂ: ಆದಿಪು, ೩. ೨೦)

ಅಕ್ಷಿವಿಕ್ಷೇಪ
[ನಾ] ಕಣ್ಣ ನೋಟ (ಪೊಳೆಯುತ್ತಿರ್ಪ ಅಕ್ಷಿವಿಕ್ಷೇಪದ ಪೊಳಪುಗಳಿಂದ ಆನನಶ್ರೀವಿಲಾಸಂಗಳಿಂ ಅಂಗೋಪಾಂಗದೊಳ್ ಸಂಗಳಿಸುವ ಪಲವುಂ ಭಂಗಿಯಿಂ: ಆದಿಪು, ೧೧. ೧೩೯)

ಅಕ್ಷಿಪಕ್ಷ್ಮವಿಕ್ಷೇಪಣ
[ನಾ] ಕಣ್ಣ ರೆಪ್ಪೆ ಮಿಟುಕಿಸುವುದು (ನೋೞ್ಪವರ್ಗೆ ಅಕ್ಷಿಪಕ್ಷ್ಮವಿಕ್ಷೇಪಣಮೊಂದೆ ಮಾಡುವುದವಳ್ ಮನುಜಾಂಗಾಂಗನೆಯೆಂಬ ಭೇದಮಂ: ಆದಿಪು, ೩. ೨೦)

ಅಕ್ಷುಣ್ಣ
[ಗು] ಕೊರತೆಯಿಲ್ಲದೆ, ಕಡಿಮೆಯಿಲ್ಲದ (ಅಕ್ಷಯದಾನಂ ನಿಮಗಕ್ಕಕ್ಷುಣ್ಣಮಿದೆಂದು ಪರಮ ಮುನಿ ಪರಸೆ ಬೞಿಕ್ಕಕ್ಷಯತೃತೀಯೆಯಿಂದಖಿಲ ಕ್ಷಿತಿಗಂ ನೆಗೞ್ದುದಲ್ತೆ ತತ್ಪುಣ್ಯದಿನಂ: ಆದಿಪು, ೧೦. ೬)

ಅಕ್ಷೂಣ
[ಗು] ಕಡಿಮೆಯಿಲ್ಲದ, ಬಲಿಷ್ಠ (ಇಳಾಭಾರಕ್ಷಮಾಕ್ಷುಣನಂ ಅಂತು ಸರ್ವಲಕ್ಷಣ ಸಂಪೂರ್ಣನಪ್ಪ ಮಗನನಮೋಘಂ ಪಡೆವೆಂ: ಪಂಪಭಾ, ೧. ೧೩೪ ವ)

ಅಕ್ಷೊಹಿಣಿ
[ನಾ] ಅಕ್ಷೌಹಿಣಿ; ೨೧೮೭೦ ಆನೆ, ೨೧೮೭೦ ರಥ, ೬೫೬೧೦ ಕುದುರೆ ಮತ್ತು ೧೦೯೩೫೦ ಪದಾತಿಯಿರುವ ಸೈನ್ಯ; ಪಂಪಭಾರತ ದಲ್ಲಿ ಹೇಳಿರುವ ಸಂಖ್ಯೆ ಹೀಗಿದೆ: ೯೦೦೦ ಆನೆ, ೯೦೦೦೦೦ ರಥ, ೯೦೦೦೦೦೦೦ ಕುದುರೆ ಮತ್ತು ೯೦೦೦೦೦೦೦೦೦ ಕಾಲಾಳುಗಳ ಸೈನ್ಯ (ಕರಿಗಳ್ .. .. ಒಂಬತ್ತು ಸಾಸಿರಂ ಅಂತೊಂದು ಗಜಕ್ಕೆ ನೂಱು ರಥಂ ಅಂತಾ ಸ್ಯಂದನಕ್ಕೊಂದಱೊಳ್ ತುರಗಂ ನೂಱು ಅನಿತುಂ ತುರಂಗದೞಂ ಒಂದೊಂದರ್ಕೆ ನೂಱಾಳ್ ತಗುಳ್ದಿರೆ ಬಲ್ಲರ್ ನಡೆ ನೋಡಿ ಕೂಡೆ ಪಡೆದತ್ತು ಅಕ್ಷೋಹಿಣೀಸಂಖ್ಯೆಯಂ: ಪಂಪಭಾ, ೯. ೯೫)

ಅಕ್ಷೋಹಿಣಿಪತಿ
[ನಾ] ಒಂದೊಂದು ಅಕ್ಷೋಹಿಣಿಪತಿಗೆದ್ದ ನಾಯಕ: ಕೌರವರ ಹನ್ನೊಂದು ಅಕ್ಷೋಹಿಣಿಯ ನಾಯಕರು ಜಯದ್ರಥ, ಜಯತ್ಸೇನ, ಸುದಕ್ಷಿಣ, ಶಲ್ಯ, ಶಕುನಿ, ಧೃಷ್ಟಕೇತು, ನೀಳ, ಭಗದತ್ತ, ಶ್ರುತಾಯುಧ, ನಿಯತಾಯುಧ, ಅಚ್ಯುತಾಯುಧ (ಪನ್ನೊಂದಕ್ಷೆ ಅಕ್ಷೋಹಿಣಿಪತಿಗಳುಂ ಗಾಂಗೇಯ ದ್ರೋಣ ಅಶ್ವತ್ಥಾಮ ಕೃಪ ಕೃತವರ್ಮ ಪ್ರಭೃತಿಗಳುಂ: ಪಂಪಭಾ, ೧೦. ೨೭ ವ)

ಅಖಂಡ
[ಗು] ಸಮಗ್ರವಾದ (ಆಸೇತೋ ರಾಮಚಾಪ ಅಟನಿತಟಯುಗ ಟಂಕ ಅಂಕಿತ ಆಖಂಡಖಂಡಾತ್: ಪಂಪಭಾ, ೧೪. ೨೭)


logo