logo
भारतवाणी
bharatavani  
logo
Knowledge through Indian Languages
Bharatavani

Pampana Nudigani (Kannada)

Please click here to read PDF file Pampana Nudigani (Kannada)

ಅಕಾರಾದಿ ಹಕಾರಾಂತ
[ಗು] ಸಂಸ್ಕೃತ ವರ್ಣಮಾಲೆಯ ಮೊದಲಕ್ಷರವಾದ ಅ ಇಂದ ಕೊನೆಯದಾದ ಹವರೆಗೆ [ಕನ್ನಡದಲ್ಲಾದರೆ ಇದು ಅಕಾರಾದಿಳಕಾರಾಂತ] (ಅಂತಕಾರಾದಿ ಹಕಾರಾಂತಸ್ವರವ್ಯಂಜನಭೇದಭಿನ್ನ ಶುದ್ಧಾಕ್ಷರಂಗಳುಮಂ ಆಯೋಗವಾಹಕಚತುಷ್ಕಮುಮಂ ಸಂಯೋಗಾಕ್ಷರಂಗಳುಮಂ ಬ್ರಹ್ಮಿಗೆ ದಕ್ಷಿಣಹಸ್ತದೊಳ್ ಉಪದೇಶಂಗೆಯ್ದು: ಆದಿಪು, ೮. ೫೯ ವ)

ಅಕಾಲಕಾಲ
[ನಾ] ಅಕಾಲಪ್ರಳಯ (ಪ್ರಕುಪಿತಮೃಗಪತಿಶಿಶುಸನ್ನಿಕಾಶರ್ ಅತಿ ವಿಕಟಭ್ರೂಭಂಗರ್ ನಕುಲಸಹದೇವರ್ ಇರ್ವರುಂ ಅಕಾಲಕಾಲಾಗ್ನಿರೂಪಮಂ ಕೆಯ್ಕೊಂಡರ್: ಪಂಪಭಾ, ೭. ೮)

ಅಕಾಲಚಕ್ರ
[ನಾ] ಅಪಮೃತ್ಯು (ಆವಂಗಕಾಲಚಕ್ರಮನೋವದೆ ಮಾಡಲ್ಕೆ ಚಕ್ರಮಿದು ಬಗೆದುದೊ: ಆದಿಪು, ೧೪. ೫)

ಅಕುಲೀನ
[ನಾ] ಸದ್ವಂಶದಲ್ಲಿ ಹುಟ್ಟದವನು (ಕರಿಪತಿಯನೇಱಿ ಕೋಡಗಮಿರೆ ಕಂಡುದಱಿಂದಂ ಆದಿಭೂಪರ್ ಕಿಡೆ ಬೇಡರುಂ ಅಕುಲೀನರುಂ ಅತಿದುಶ್ಚರಿತ್ರರುಂ ಭೂಪರಪ್ಪರ್: ಆದಿಪು, ೧೫. ೩೭)

ಅಕೃತ್ಯ
[ನಾ] ಕೃತಜ್ಞತೆಯಿಲ್ಲದವನು (ದಂಡಮಂ ನಿನಗೆ ಮಾಡಿದ ಅಕೃತ್ಯರಂ ಅಂತು ಮಾಣ್ಬುದೇ ಬಗೆ: ಪಂಪಭಾ, ೮. ೮೮)

ಅಕೃಷ್ಟಪಚ್ಯ
[ಗು] ಬೇಸಾಯವಿಲ್ಲದೆ ಬೆಳೆಯುವ (ಕಲ್ಪವೃಕ್ಷಪರಿಕ್ಷಯದೊಳ್ ಪ್ರಜಾಜೀವನೋಪಾಯ ಹೇತುಗಳ್ ಅಕೃಷ್ಟಪಚ್ಯಂಗಳಾಗಿ: ಆದಿಪು, ೬. ೭೨ ವ)

ಅಕ್ಕಟ
[ಅ] ವಿಷಾದಸೂಚಕ ಉದ್ಗಾರ (ಅರಗಿನ ಮನೆಯೊಳ್ ಪಾಂಡವರುರುದೞ್ಗಿದರಕ್ಕಟಯ್ಯೋ: ಪಂಪಭಾ, ೬. ೭)

ಅಕ್ಕರ
[ನಾ] [ಅಕ್ಷರ] ವಿದ್ಯೆ (ಚಾಗದ ಭೋಗದ ಅಕ್ಕರದ ಗೇಯದ ಗೊಟ್ಟಿಯ ಅಲಂಪಿನಿಂಪುಗಳ್ಗಾಗರಮಾದ ಮಾನಸರೆ ಮಾನಸರ್: ಪಂಪಭಾ, ೨. ೨೯); [ನಾ] ಅಕ್ಷರ, ಲಿಪಿರೂಪದ ವರ್ಣ (ಮೆಯ್ಯೊಳ್ ಅತ್ತಂ ಇತ್ತಂ ತೆಱೆದಿರ್ದ ಪುಣ್ಗಳ್ ಎಸೆವ ಅಕ್ಕರದಂತಿರೆ ನೋಡಿ ಕಲ್ಲಿಂ ಎಂಬಂತೆವೊಲಿರ್ದಂ: ಪಂಪಭಾ, ೧೧. ೪೬)

ಅಕ್ಕರಗೊಟ್ಟಿ
[ನಾ] ವಿದ್ವಾಂಸರ ಮೇಳ (ಅಕ್ಕರಗೊಟ್ಟಿಯುಂ ಚದುರರೊಳ್ವಾತುಂ: ಪಂಪಭಾ, ೪. ೩೧)

ಅಕ್ಕಿ
[ನಾ] ಅಕ್ಷತೆಕಾಳು (ತಳಿರ್ಗಳ ತೊಂಗಲಿಂದಂ ಅಲರೋಳಿಗಳಲ್ಲುಗುವಂತೆ ಕೆಂದಳಂಗಳಿಂ ಉದಿರ್ವ ಅಕ್ಕಿಗಳ್: ಆದಿಪು, ೪. ೫೯); [ನಾ] ಬತ್ತದೊಳಗಿನ ಬೆಳ್ಳನೆ ಕಾಳು (ನಮಗಕ್ಕಿಗೊಟ್ಟು ಮಡಗೂೞುಣ್ಬಂದಮಂ ಪೋಲದೇ: ಆದಿಪು, ೧೪. ೩೨)


logo