logo
भारतवाणी
bharatavani  
logo
Knowledge through Indian Languages
Bharatavani

Pampana Nudigani (Kannada)

Please click here to read PDF file Pampana Nudigani (Kannada)

ಅಂಭೋದಪಥ
[ನಾ] ಆಕಾಶ (ಸುರಾಸುರರ ಅಂಭೋದಪಥಕ್ಕೆ ಅಳಂಕರಣಮಾಗುಯ್ದರ್: ಆದಿಪು, ೯. ೭೩)

ಅಂಭೋದಮಾರ್ಗ
[ನಾ] ಆಕಾಶ (ಅಂಭೋದಮಾರ್ಗಂ ಪೊಸತೆ ತೊಳೆದುದೀಗಳ್ ಪಾಲೊಳೆಂಬಂತು: ಆದಿಪು, ೮. ೩೫)

ಅಂಭೋಧರ
[ನಾ] ಮೋಡ (ಪಕ್ವಬಿಂಬಾಧರಂ ಕೋಮಳವಂಶ ಶ್ಯಾಮಂ ಅಂಬೋಧರರವನಳಿನೀಕುಂತಲಂ: ಆದಿಪು, ೮. ೫೧)

ಅಂಭೋಧರಧ್ವನಿ
[ನಾ] ಗುಡುಗು (ಮುಂದಣ ಕಜ್ಜದ ಬಿಣ್ಪುಮಂ ಅಱಿದು ಅಂಭೋರುಹನಾಭಂ ಶುಂಭತ್ ಅಂಭೋಧರಧ್ವನಿಯಿನಿಂತೆಂದಂ: ಪಂಪಭಾ, ೬. ೨೨ ವ)

ಅಂಭೋಧರಸ್ತನಿತ
[ನಾ] ಗುಡುಗು (ಆ ಸಮರಸನ್ನಾಹ ಭೇರೀನಿನಾದಮಂಭೋಭಾರಗಂಭೀರ ಅಂಭೋಧರಸ್ತನಿತ ಬಹುಸ್ನಿಗ್ಧಂಗಳಪ್ಪ ಮದಸ್ತಂಭೇರಮ ಬೃಂಹಿತಂಗಳಿಂದಂ: ಆದಿಪು, ೧೪. ೮೬ ವ)

ಅಂಭೋಧಿಪಥ
[ನಾ] ಸಮುದ್ರಮಾರ್ಗ (ಕೇತನಚಂಚಲಾಂಚಳ ನಿಚಯದಿಂದಂ ಅಂಭೋಧಿಪಥಮುಂ ಅತಿಚಕಿತವಿದ್ವಿಷ್ಟದೃಷ್ಟಿ ಪಥಮುಂ ನಿರವಕಾಶಮಾಗೆಯುಂ: ಆದಿಪು, ೧೩. ೭೭ ವ)

ಅಂಭೋಧಿವೇಲೆ
[ನಾ] ಸಮುದ್ರದ ತೀರ (ಅಮೃತಾಂಶುವಿನ ಉದಯದೊಳ್ ಅಂಭೋಧಿವೇಲೆ ಭೋರ್ಗರೆವವೊಲ್ ಒರ್ಮೊದಲೆಸೆದುವು .. .. ಸುರದುಂದುಭಿಗಳ್: ಪಂಪಭಾ, ೧. ೧೪೬)

ಅಂಭೋನಿಧಿ
[ನಾ] ಸಮುದ್ರ (ಸುರಾಸುರರಿಂ ಆ ಗೋವಿಂದನಿಂ ಮುನ್ನೆ ಕೋಳ್ಪಡೆದು ಅಂಭೋನಿಧಿಯಂತೆ ಬಂದು ನೆಗೞ್ದು ಇಂದ್ರಪ್ರಸ್ಥಮಂ ಧರ್ಮಜಂ: ಪಂಪಭಾ, ೪. ೯)

ಅಂಭೋರಾಶಿ
[ನಾ] ಸಮುದ್ರ (ಸಾರವಸ್ತುಗಳಿಂ ನೆಱೆದಂಭೋರಾಶಿಯೆ ಕಾದಿಗೆ ಕಾವನುಂ ಸೀರಪಾಣೀ ವಿಳಾಸದಿಂ ಆಳ್ದಂ: ಪಂಪಭಾ, ೪. ೩೨)

ಅಂಭೋರುಹ
[ನಾ] ತಾವರೆ (ನೆರೆಯಲರ್ದ ಅಂಭೋರುಹದ ಅಲರ್ದುಱುಗಲಂ ಅಲೆದೊಗೆದುವು ಎಸೆಯೆ ಜಲದೇವತೆಗಳ್ ನಿಱಿವಿಡಿಯಲ್ ನಿಮಿರ್ಚಿದ ಕುಱುವಡಿಯ ತರಂಗದಂತೆ ಬಂಬಲ್ದೆರೆಗಳ್: ಪಂಪಭಾ, ೫. ೫೭)


logo