logo
भारतवाणी
bharatavani  
logo
Knowledge through Indian Languages
Bharatavani

Pampana Nudigani (Kannada)

Please click here to read PDF file Pampana Nudigani (Kannada)

ಅಂಬುಜ
[ನಾ] ನೀರಲ್ಲಿ ಹುಟ್ಟಿದುದು, ತಾವರೆ (ಆಗಳ್ ಆ ವಿಕಚಾಂಬುಜಸೌರಭಮನೊಸೆದು ಸೇವಿಸುವಾ ಪೆಣ್ದುಂಬಿಗಳ ಸರಮನೆತ್ತಿ ತಱುಂಬುತ್ತುಂ ಬಂದುದಾ ಪ್ರಭಾತಸಮೀರಂ: ಪಂಪಭಾ, ೧೨. ೧೦೫)

ಅಂಬುಜನಿಳಯೆ
[ನಾ] ಲಕ್ಷ್ಮಿ (ನಿಂದ ಶಿಲೆ ತಪನತಪ್ತಮಿದೆಂದು ಅಂಬುಜನಿಳಯೆ ಪದ್ಮವಿಷ್ಟರಮಂ .. .. ಪಡೆದು ಪದೆಪಂ ಮೆರೆದಳ್: ಆದಿಪು, ೯. ೮೫)

ಅಂಬುಜಪತ್ರಾಂಬು
[ನಾ] ತಾವರೆಯ ಎಲೆಯಿಂದ ಮಾಡಿದ [ದೊನ್ನೆಗಳಲ್ಲಿನ] ನೀರು (ದಿಕ್ಕರಿಗಳ್ ಅಂಬುಜಪತ್ರಾಂಬುವಿಂ ಬೆಡಂಗಡಸಿರೆ ಮಜ್ಜನಂಬುಗಿಪುದಂ ಸತಿ ಕಂಡೊಸೆದಳ್ ನಿಶಾಂತದೊಳ್: ಪಂಪಭಾ, ೧. ೧೪೦)

ಅಂಬುಜಮಿತ್ರ
[ನಾ] ಕಮಲದ ನಂಟ, ಸೂರ್ಯ (ಪುತ್ರನೆನ್ನ ದೊರೆಯಂ ನಿನಗಕ್ಕೆ ಎಂಬುದುಂ ಒದವಿದ ಗರ್ಭದೊಳಂಬುಜಮಿತ್ರನನೆ ಪೋಲ್ವ ಮಗನೊಗೆತಂದಂ: ಪಂಪಭಾ, ೧. ೯೪)

ಅಂಬುಜಮುಖಿ
[ನಾ] ಕಮಲಮುಖಿ (ಮುಂ ಬೇಡಿದ ವರಮಂ ಕುಡದೆ ಅಂಬುಜಮುಖಿ ಪುತ್ರನೆನ್ನ ದೊರೆಯಂ ನಿನಗಕ್ಕೆ ಎಂಬುದುಂ ಒದವಿದ ಗರ್ಭದೊಳ್: ಪಂಪಭಾ, ೧. ೯೪)

ಅಂಬುಜಸೂತ್ರ
[ನಾ] ತಾವರೆದಂಟಿನ ನೂಲು (ಸುರಿದ ಅಂಬುಜಸೂತ್ರದಿಂದೆ ಮತ್ತನಿತಱೊಳಂ ಮುಗುಳ್ಸರಿಗೆ ತೋಳ್ವಳೆ ಕಂಕಣವಾರಮೆಂದು ಬೇೞ್ಪನಿತನೆ ಮಾಡಿ: ಪಂಪಭಾ, ೨. ೧೬)

ಅಂಬುಜಾಕ್ಷಿ
[ನಾ] ಕಮಲಮುಖಿ (ಮೊಕ್ಕಳಮದಾರ್ ನಡೆ ನೋೞ್ಪೊಡಮಿಂತುಂ ಮೂಱಸಿಯವು ಮೂಱು ದೊಡ್ಡಿದುವು ಮೂಱೆಡೆ ತೆಳ್ಳಿದುವಂಬುಜಾಕ್ಷಿಯಾ: ಪಂಪಭಾ, ೪. ೭೨)

ಅಂಬುಜೋದರ
[ನಾ] [ಅಂಬುಜ+ಉದರ] ಹೊಕ್ಕುಳಲ್ಲಿ ಕಮಲವುಳ್ಳವನು (ಅಂಬುಜೋದರಂ ನಯದ ವಿನಯದ ಮಾತು ನೀನೆಂದಂತು ತೊಱೆಗೆ ನೀರಡಕಲುಂ ಆದಿತ್ಯಂಗೆ ಸೊಡರಿಡಲುಂ ಇಂದ್ರಂಗೆ .. .. ಕಜ್ಜಂಬೇೞ್ವುದು: ಪಂಪಭಾ, ೯. ೧೮ ವ)

ಅಂಬುದ
[ನಾ] ಮೋಡ (ಅಂತು ನೀಲ ಅಂಬುದ ಶ್ಯಾಮನುಂ ಕನಕಪಿಂಗಳ ಜಟಾಬಂಧಕಳಾಪನುಂ.. .. ಆಗಿ: ಪಂಪಭಾ, ೧. ೬೯ ವ)

ಅಂಬುದಘೋಷ
[ನಾ] ಗುಡುಗು (ಕಾಳಾಂತ ಪವನಹತಿ ಕಲ್ಲೋಳವಿಳ ಜಳಧಿನಿನದಮೋ ನಿರ್ಘಾತಾಭೀಳತರ ರಭಸಮೋ ಲಯಕಾಳಾಂಬುದಘೋಷಮೋ ನೆಲಂ ಮೊೞಗಿದುದೋ: ಆದಿಪು, ೧೨. ೯೧)


logo