logo
भारतवाणी
bharatavani  
logo
Knowledge through Indian Languages
Bharatavani

Pampana Nudigani (Kannada)

Please click here to read PDF file Pampana Nudigani (Kannada)

ಅಂಬುದಪಥ
[ನಾ] ಆಕಾಶ (ಅಂತು ಗಗನತಳಮಂ ತಱುಂಬುವಂತೆ ನೆಗೆದ ವಜ್ರವೇದಿಕೆಯುಮಂ ಅಂಬುದಪಥಕ್ಕೆ ಆಲಂಬಮಿರ್ಪಂತಿರ್ದ ಲವಣಾಂಬುರಾಶಿಯಂ ನೋಡಿ: ಆದಿಪು, ೧೨. ೭೦ ವ)

ಅಂಬುದಾಗಮ
[ನಾ] ಮೋಡಗಳು ಆಗಮಿಸುವ ಕಾಲ, ಮಳೆಗಾಲ (ಅಂಬುದಾಗಮದ ಕೋಗಿಲೆಯಂತಿರೆ ಮೂಗುವಟ್ಟು: ಆದಿಪು, ೩. ೨೬)

ಅಂಬುದುಡು
[ಕ್ರಿ] [ಅಂಬು+ತುಡು] ಬಾಣ ಹೂಡು (ನದೀಪುತ್ರಂಗೆ ಪೇೞಾರ್ ಚಲಂಬಟ್ಟುಂ ಮಾರ್ಮಲೆದು ಅಂಬುದೊಟ್ಟುಂ ಉೞಿವರ್ ಸಂಗ್ರಾಮರಂಗಾಗ್ರದೊಳ್: ಪಂಪಭಾ, ೧೦. ೧೧೭)

ಅಂಬುಧರ
[ನಾ] ಮೋಡ (ಸಿರಿಯ ಶರೀರದ ರೂಪಿನ ನರರ ಐಶ್ವರ್ಯದ ಪೊದಳ್ಕೆಗಳ್ ಕರಗುವವೋಲ್ ಶರದಂಬುಧರಂ ಭೋಂಕೆನೆ ಕರಗಿದೊಡೆ: ಆದಿಪು, ೪. ೬೪)

ಅಂಬುಧಿನಿನಾದ
[ನಾ] ಸಮುದ್ರಘೋಷ (ಪರಸುವ ಪುರಜನದ ಒದವಿದ ಪರಕೆಗಳ ಅಂಬುಧಿನಿನಾದಮಂ ಮಿಗೆ ತಮ್ಮಯ್ವರುಂ ಒಡನೆ ಮೆಱೆದು: ಪಂಪಭಾ, ೫. ೨೩)

ಅಂಬುನಿಧಿ
[ನಾ] ಜಲರಾಶಿ (ಎನಿತಾನುಂ ಅಂಬುನಿಧಿಗಳನನೇಕ ನಾಕಂಗಳಲ್ಲಿ ಕುಡಿದುಂ ಪೋಯ್ತಿಲ್ಲೆನಗೆ ನರಭೋಗಂ: ಆದಿಪು, ೯. ೫೭)

ಅಂಬುಪಾಯಿ
[ಗು] ನೀರನ್ನು ಕುಡಿಯುವ (ವಿವಿಧಮೂಲ ಪಲಾಶಿಗಳುಂ ಸರೋವರ ನದೀನಿರ್ಝರ ಅಂಬುಪಾಯಿಗಳುಮಾಗಿ: ಆದಿಪು, ೯. ೯೩ ವ)

ಅಂಬುರಾಶಿ
[ನಾ] ಸಮುದ್ರ (ಪೊಲಸುನಾಱುವ ಮೆಯ್ಯನೆ ಕರ್ಚಲೆಂದು ಚೆಚ್ಚರಂ ಅಪರ ಅಂಬುರಾಶಿಗೆ ಇೞಿವಂತಿರೆ ಇೞಿದಂ ಕಮಳೈಕಬಾಂಧವಂ: ಪಂಪಭಾ, ೧೧. ೫೧)

ಅಂಬುರುಹ
[ನಾ] ಕಮಲ, ತಾವರೆ (ಕೆಡೆದಂ ಪದ್ಮಜಂ ಆಸನಾಂಬುರುಹದಿಂದೆ ಅಗಳ್ ಸುರೇಂದ್ರಾಚಳಂ ನಡುಗಿತ್ತು: ಪಂಪಭಾ, ೧೦. ೨೬)

ಅಂಬುವಾಹ
[ನಾ] ಮೋಡ (ರಾಗದಿಂ ಇನರಶ್ಮಿಯೆಂಬ ಕಸಮಂ ಕಳೆದು ಅಂಬರಮೆಂಬ ಪಾೞಂ ಏಱಿದುದು ಅಸಿತಾಂಬುವಾಹಕುಳಮೆಂಬ ಕುಟುಂಬಕದಂಬಕೋತ್ಕರಂ: ಆದಿಪು, ೬. ೭೧)


logo