logo
भारतवाणी
bharatavani  
logo
Knowledge through Indian Languages
Bharatavani

Pampana Nudigani (Kannada)

Please click here to read PDF file Pampana Nudigani (Kannada)

ಅಂಬಾಲೆ
[ನಾ] ವಿಚಿತ್ರವೀರ್ಯನ ಹೆಂಡತಿ (ಅಂಬಾಲೆ ಮದ್ರೂಪಮಂ ಕಂಡು ಮೊಗಮಂ ಪಾಂಡುರಂ ಮಾಡಿದಳಪ್ಪುದಱಿಂದಾಕೆಗೆ ಪಾಂಡುರೋಗಸಂಗತನುಮನೇಕ ಭದ್ರಲಕ್ಷಣಲಕ್ಷಿತನುಂ ಅತ್ಯಂತಪ್ರತಾಪನುಮಾಗಿ ಪಾಂಡುರಾಜನೆಂಬ ಮಗನಕ್ಕುಂ: ಪಂಪಭಾ, ೧. ೮೫ ವ)

ಅಂಬಿಕೆ
[ನಾ] ತಾಯಿ (ಅಂಬಿಕೆ ಸರಸ್ವತಿ ಮತ್ ಮುಖಪದ್ಮರಂಗದ ಏೞ್ಗೆಯಂ ಎಡೆಗೊಂಡು ಕೊಂಡುಕೊನೆದು ಈಗೆ ಅರಿಗಂಗೆ ವಿಶುದ್ಧಬುದ್ಧಿಯಂ: ಪಂಪಭಾ, ೧. ೫)

ಅಂಬಿಗ
[ನಾ] ಬೆಸ್ತ (ಪಿಂದೆ ಕಡಂಗಿ ತೇರನೆಸಗೆಂಬನನಂಬಿಗಂ ಆಜಿರಂಗದೊಳ್ ಮುಂದೆ ಸಮಾನನಾಗಿ ಬೆಸದಿರ್ಪವನುಂ ತುಱುಕಾಱನಾಗೆ: ಪಂಪಭಾ, ೧೨. ೯೪)

ಅಂಬಿನಮೊನೆ
[ನಾ] ಬಾಣಯುದ್ಧ (ಸುರಪನ್ನಗಕಿನ್ನರ ಸೈನ್ಯಮೆಲ್ಲಂ ಅಂಬಿನಮೊನೆಯೊಳ್ ಪಡಲ್ವಡೆ ಲತಾಭವನಂ ಕೃತಕಾಚಳಂಗಳ್ ಎಂಬಿನಿತುಂ ಅವು ಅೞ್ಗಿ ತೞ್ಗೆ: ಪಂಪಭಾ, ೫. ೧೦೪)

ಅಂಬಿರಿವಿಟ್ಟು ಪಾಯ್
[ಕ್ರಿ] ಪ್ರವಾಹವಾಗಿ ಹರಿ (ಸುರಿವ ಬಿಸುನೆತ್ತರ ಸರಿಯೊಳಮಂಬಿನ ಸರಿಯೊಳಂಬಿರಿವಿಟ್ಟು ಪಾಯ್ವ ಮದಗಜಂಗಳ ಮದಜಲದೊಳಂ: ಪಂಪಭಾ, ೧೦. ೭೦ ವ)

ಅಂಬಿರಿವಿಡು
[ಕ್ರಿ] ಧಾರಾಕಾರವಾಗಿ ಸುರಿ (ತೊರೆದ ಕುಚಯುಗಂಗಳವು ಅಂದು ಅಂಬಿರಿವಿಡೆ ಮೊಲೆವಾಲಂ: ಪಂಪಭಾ, ೯. ೭೪)

ಅಂಬು
[ನಾ] ನೀರು (ಸಲಿಲಂ ಜೀವನಂ ಅಂಬು: ಅಭಿಧಾವ, ೧. ೪. ೧); [ನಾ] ಬಾಣ (ತಪಕೆ ಬಿಲ್ಲುಮಂಬುಂ ದೊರೆಯೇ: ಪಂಪಭಾ, ೮. ೩)

ಅಂಬುಕ
[ನಾ] ಜಲ, ನೀರು (ಉಗ್ರ ವೈರಿಸಂಘಾತ ಕರೀಂದ್ರರುಂದ್ರ ಕಟಕೂಟ ಪರಿಚ್ಯುತ ಭೃಂಗಮಾಳಿಕಾ ಪೀತಮದಾಂಬುಕಂ: ಪಂಪಭಾ, ೧೪. ೩)

ಅಂಬುಖಾತಿಕೆ
[ನಾ] ನೀರು ತುಂಬಿದ ಕಂದಕ (ವಿಳಸನವಿದಗ್ಧ ಖೇಚರನಿಳಿಂಪದಂಪತಿಯಿಂ ಅಂಬುಖಾತಿಕೆ ರಯ್ಯಂ: ಆದಿಪು, ೧೦. ೨೬)

ಅಂಬುಗಾಣಿಸು
[ಕ್ರಿ] ಬಾಣಪ್ರಯೋಗಿಸು, ಎದುರಿಸು (ಬಲದೇವನನುಮತದೊಳ್ ಪೆಱಗಂ ತಗುಳ್ವ ಯಾದವಬಲಂ ಉಂಟಪ್ಪೊಡೆ ಅದನಂಬುಗಾಣಿಸಲ್ ನೀನೆ ಸಾಲ್ವಯ್: ಪಂಪಭಾ, ೫. ೨೦ ವ)


logo