logo
भारतवाणी
bharatavani  
logo
Knowledge through Indian Languages
Bharatavani

Pampana Nudigani (Kannada)

Please click here to read PDF file Pampana Nudigani (Kannada)

ಅಂಧಕಾರ
[ನಾ] ಕತ್ತಲೆ (ಇದು ದಲ್ ಘೋರಾಂಧಕಾರಕ್ಕೆ ಮಾಡಿದ ಕೂಪಂ: ಪಂಪಭಾ, ೧೩. ೭೨)

ಅಂಧನೃಪ
[ನಾ] ಕುರುಡು ರಾಜ, ಧೃತರಾಷ್ಟ್ರ (ತನಗೆ ಸಂತಸಂ ಪೆರ್ಚಿಯುಂ ಅಂದು ಇನಿಸು ಅಂಧನೃಪಂ ತನ್ನಯ ಜನದೊಳ್ ಕೆಲನಱಿಯೆ ಕೃತಕಶೋಕಂಗೆಯ್ದಂ: ಪಂಪಭಾ, ೩. ೮)

ಅಂಧರಾಣ್ನಂದನ
[ನಾ] [ಅಂಧರಾಜ್+ನಂದನ] ಕುರುಡ ರಾಜನ ಮಗ, ದುರ್ಯೋಧನ (ಅಂದರಾಣ್ನಂದನನಲ್ಲದುಂತು ತಲೆಯುರ್ಚುಗುಮೇ ರಣರಂಗಭೂಮಿಯೊಳ್: ಪಂಪಭಾ, ೧೩. ೭೫)

ಅಂಬರ
[ನಾ] ವಸ್ತ್ರ (ಮಜ್ಜನಭೋಜನತಾಂಬೂಲ ಅಂಬರ ಅನುಲೇಪನಭೂಷಣಾದಿ ವಿವಿಧವಿಶೇಷಸತ್ಕಾರಂಗಳಿಂ ಸಂತಸಂಬಡಿಸಿ: ಆದಿಪು, ೪. ೨೫ ವ); [ನಾ] ಆಕಾಶ ಮತ್ತು ಬಟ್ಟೆ ಎಂಬ ಶ್ಲೇಷೆ (ತುಂಬಿದ ರಕ್ತತೆಯಿಂ ನಿಜಬಿಂಬಂ ವಾರುಣಿಯನೊಸೆದು ಸೇವಿಸೆ ನಾಣ್ಗೆಟ್ಟಂಬೋಲ್ ತೇಜಂ ಮಸುಳ್ವಿನಂ ಅಂಬರಮಂ ಬಿಸುಟಂ ಆಗಳಂಬುಜಮಿತ್ರಂ: ಪಂಪಭಾ, ೩. ೨೩); [ನಾ] ಆಕಾಶ (ಆ ರಥದೊಳ್ ಒಡಂಬಡೆ ಪೂಡಿದ ನಾಲ್ನೂಱು ಗೊಂಕುಱುಗೞ್ತೆಯುಂ ಅಂಬರಸ್ಥಲಮನಡರ್ವ ಗೃಧ್ರಧ್ವಜಮುಂ ಅಂಜನಪುಂಜದಂತಾಗಿ: ಪಂಪಭಾ, ೧೨. ೭ ವ)

ಅಂಬರಚರ
[ನಾ] ಖೇಚರ (ಆಂ ಅಂಬರಚರನಾದಂದು ನಾಲ್ವರೊಳಲ್ಲಿ ಮೂವರುಂ ಮಂತ್ರಿಗಳಂತೇನಾದರ್: ಆದಿಪು, ೫. ೭೪)

ಅಂಬರತಲ
[ನಾ] ಆಕಾಶ (ಬದ್ದವಣದ ಪಱೆಗಳ್ ಕಿವಿ ಸದ್ದಂಗಿಡೆ ಮೊೞಗೆ ದೇವದುಂದುಭಿರವಮೊಂದು ಉದ್ದಾನಿ ನೆಗೞೆ ಮುಗುಳ ಅಲರ ಒದ್ದೆ ಕರಂ ಸಿದ್ಧಮಾದುದು ಅಂಬರತಲದೊಳ್: ಪಂಪಭಾ, ೧೨. ೨೧೮)

ಅಂಬರಪಟಳ
[ನಾ] ಆಕಾಶದ ಮೇಲ್ಛಾವಣಿ (ಘಟೆಯ ದೞದ ಉಲಿವು ಲಯಘನಘಟೆಗಳ ಮೊೞಗೆನಿಸೆ ಪೊಟ್ಟಗೆ ಒಡೆದತ್ತು ರಟತ್ ಪಟು ಪಟಹ ಶಂಖ ಭೇರಿಯ ಚಟುಳಿತದಿಂದ ಅತಳಪಟಂ ಅಂಬರಪಟಳಂ: ಪಂಪಭಾ, ೧೦. ೬೭)

ಅಂಬರಾಂಬರ
[ನಾ] ದಿಗಂಬರ ಯತಿ (ಒರೊರ್ವರೆ ವಿಹರಿಪುದಂ ಬಿಸುಟು ಅಂಬರಾಂಬರರ್ ತಮ್ಮ ಸಮುದಯಂ ಬೆರಸಿರ್ಪರ್: ಆದಿಪು, ೧೫. ೩೨)

ಅಂಬುರಾಶಿ
[ನಾ] ಸಮುದ್ರ (ಆದಿಪುರುಷ ಜನ್ಮೋತ್ಸವ ಸುಧಾಂಬುರಾಶಿಯೊಳ್ ಕೂಡಿ ಮೂಡಿ ಮುೞ್ಕಾಡುವುದಂ ನೋಡಿ: ಆದಿಪು, ೭. ೧೧೫ ವ)

ಅಂಬರೇಚರ
[ನಾ] ಖೇಚರ (ಸಾಳತಮಾಳಕಾನನಭರೋದ್ಧತ ಸಿಂಧುರಕಂಠ ಗರ್ಜನಾಭೀಳಮಂ ಅಂಬರೇಚರವಧೂ ಕರಪಲ್ಲವ ಸಂಚಳಲ್ಲತಾಂದೋಳಮಂ: ಪಂಪಭಾ, ೭. ೭೬)


logo