logo
भारतवाणी
bharatavani  
logo
Knowledge through Indian Languages
Bharatavani

Pampana Nudigani (Kannada)

Please click here to read PDF file Pampana Nudigani (Kannada)

ಅಂತುಟು
[ಗು] ಅಷ್ಟು (ಅವನೀವಂತುಟಂ ಈಯದಂತುಟಂ ಅದಟನದಂ ಬಲ್ಲಂತು ಕಾಲ್ಗುತ್ತಿ ನೋಡು: ಪಂಪಭಾ, ೯. ೨೬)

ಅಂತೆ
[ಅ] ಹಾಗೆ, ಹೋಲಿಕೆಯನ್ನು ತೋರಿಸುವ ಪದ (ಬಸಂತದೊಳ್ ಕಕಳಿಕೆಗರ್ಚಿದ ಕೋಗಿಲೆಯಂತೆ: ಆದಿಪು, ೨. ೯)

ಅಂತೆಂಬಂ
[ನಾ] ಹಾಗೆ ಹೇಳಿಕೊಳ್ಳುವವನು (ಅಂತೆಂಬಂ ಆರ್ಗೆ ಪಿರಿದುಂ ಭ್ರಾಂತು ದಲೇಂ ದ್ರೋಣನೆಂಬನೇಂ ಪಾರ್ವನೆ ಪೇೞಿಂತೆನಗೆ ಕೆಳೆಯನೇ: ಪಂಪಭಾ, ೨. ೪೭)

ಅಂತೆವೊಲ್
[ಅ] ಅದರಂತೆ, ಹೋಲಿಕೆಯ ಪದ (ಕೃಶಾನುವ ನೆೞಲಳುರುವಂತೆವೊಲ್ ಕನ್ನಡಿಯಂ: ಆದಿಪು, ೭. ೩೨)

ಅಂತ್ರ
[ನಾ] ಕರುಳು (ಆಮಂತ್ರಿತ ಡಾಕಿನೀ ದಶನಘಟ್ಟನಜಾತ ವಿಭೀಷಣಂ ಮದೇಭ ಅಂತ್ರನಿಯಂತ್ರಿತ ಅಶ್ವಶವ ಮಾಂಸರಸಾಸವ ಮತ್ತಯೋಗಿನೀತಂತ್ರಂ: ಪಂಪಭಾ, ೧೨. ೧೨೦)

ಅಂದ
[ನಾ] ರೀತಿ (ಇದಱಂದಂ ಬಿಸವಂದಂಮಿಂತಿದು ಅಮರೇಂದ್ರಾವಾಸದೊಂದಂದಂ: ಆದಿಪು, ೪. ೫); ಚೆಲುವು (ಜವ್ವನದ ವಿಳಾಸದಂದದ ಬೆಡಂಗಿನ ಪೆಂಡಿರೆ ಪೆಂಡಿರ್: ಪಂಪಭಾ, ೪. ೮೫); [ನಾ] ಉದ್ದೇಶ (ನೀವಿರ್ವರುಂ ಬಂದಂದಮುಮಂ ಮನೆವಾೞ್ತೆಯಂ ಪೇೞಿಂ ಎಂದೊಡೆ: ಪಂಪಭಾ, ೯. ೧೧ ವ)

ಅಂದಂಬೆಱು
[ಕ್ರಿ] ಅಂದಂಬಡೆ (ನಿನ್ನನಾ ಕೋಮಳೆಯಂದಂಬೆತ್ತ ಸುತ್ತುಂಗುರುಳಳವಡಿಸಲ್: ಆದಿಪು, ೪. ೨೧)

ಅಂದಿಗ
[ನಾ] ಅಂತಹವನು (ಓವೋ ಲಂಪಳರಪ್ಪ ಎಮ್ಮಂದಿಗರಂ ಬಗೆವಂದದೆ ಕೊಂದಿಕ್ಕವೆ ಸಕಳವಿಷಯ ವಿಷಮವಿಷಂಗಳ್: ಆದಿಪು, ೪. ೭೩)

ಅಂದು
[ನಾ] ಆ ಸಮಯದಲ್ಲಿ (ಮೃದುಮಧುರವಚನ ರಚನೆಯೊಳ್ ಉದಾತ್ತಂ ಅರ್ಥಪ್ರತೀತಿಯಂ ಕೇಳ್ವ ಜನಕ್ಕೆ ಇದಿರೊಳ್ ಕುಡದಂದು ಅದು ಕಬ್ಬದೊಳಿರ್ದುಂ ಕವಿಯ ಮನದೊಳಿರ್ದಂತೆ ವಲಂ: ಆದಿಪು, ೧. ೧೯); [ನಾ] ಆ ಪಕ್ಷದಲ್ಲಿ (ಬಾಹ್ಯಾರ್ಥ ಶೂನ್ಯಂಗಳಪ್ಪುದಱಿಂ ಅಂತ್ಯಂಗಳಕ್ಕುಮಾದಂದು ಅಸತ್ಯೇತರವಿಭಾಗಂಗಳಂ ಪಡೆಯಲಾಗದು: ಆದಿಪು, ೨. ೧೦ ವ)

ಅಂಧಕದ್ವಿಷ
[ನಾ] ಅಂಧಕನ ಶತ್ರು, ಈಶ್ವರ (ಆತಂಗೆ ಅಮರಾಪಗೆ ಮೆಚ್ಚಿ ಪಾಯ್ವುದುಂ ಗಗನದಿಂ ಅಂಧಕುದ್ವಿಷಜಟಾಟವಿಯೊಳ್ ಬೞಿಕಾದ ಶೈಳದೊಳ್ ಸೊಗಯಿಸೆ ಪಾಯ್ದುದು: ಪಂಪಭಾ, ೪. ೧೩)


logo