logo
भारतवाणी
bharatavani  
logo
Knowledge through Indian Languages
Bharatavani

Pampana Nudigani (Kannada)

Please click here to read PDF file Pampana Nudigani (Kannada)

ಅಂತರ್ವತ್ನಿ
[ನಾ] ಬಸುರಿ ಹೆಂಗಸು (ಚೋದ್ಯಮಿದೆಂದು ಮರಲ್ದು ಬಣ್ಣಿಸಿದರ್ ಇಂದ್ರನ ಕಾಂತೆಯರ್ ಅಂತರ್ವತ್ನಿಯಂ ಆ ನೃಪಪತ್ನಿಯಂ: ಆದಿಪು, ೭. ೩೧)

ಅಂತರ್ವರ್ತಿಯಾಗು
[ಕ್ರಿ] ಒಳಗೆ ಹೊಗು (ತನ್ನೊಡನೆಯ ಬಲಮೆಲ್ಲಮಂ ಪಡುವಣ ಸೋಪಾನಂಗಳಿಂದಂ ಬೆಂಕೆ ಭೋಂಕನಳುರದಂತು ಬೇಗಂ ಮ್ಲೇಚ್ಛಖಂಡ ಅಂತರ್ವರ್ತಿಯಾಗೆ ಮುನ್ನಂ ಕಳಿಪಿ: ಆದಿಪು, ೧೩. ೩೫ ವ)

ಅಂತವಾಸ
[ನಾ] ಊರಿನ ಹತ್ತಿರದ ಶಿಬಿರ (ಅಮರ್ದಿನ ಕಡಲೊಳಗಿರ್ಪಂತಿರ್ದಂ ಅಂತವಾಸದೊಳಾಗಳ್: ಆದಿಪು, ೧೧. ೨೮)

ಅಂತಸ್ಸಾರ
[ನಾ] ಅಂತಸ್ಸತ್ವ (ನೀಮೆ ಗಂಭೀರರ್ ಅಂತಸ್ಸಾರರಿರ್ ನೀಮಿರೆ ಪೆಱರೊಳರೇ ಸಕ್ಕಿಮಾಡಲ್ಕೆ: ಆದಿಪು, ೯. ೧೧೫)

ಅಂತಸ್ಸ್ಥಿತ
[ಗು] ಒಳಗಿದ್ದ (ಅದಱ ಮುದ್ರಿಕೆಯನೊಡೆದು ಅಂತಸ್ಸ್ಥಿತಕಾರ್ಯಪತ್ರಮಂ ಬಾಜಿಸಿ ನೋಡಿ ವಿಸ್ಮಯಾಕ್ರಾಂತಚಿತ್ತನಾಗಿ: ಆದಿಪು, ೪. ೮೬ ವ)

ಅಂತಿಕ
[ಗು] ಹತ್ತಿರ, ಸಮೀಪ (ಗುರುಪದಪದ್ಮಾಂತಿಕದೊಳ್ ಪರಮೇಶ್ವರದೀಕ್ಷೆಯಂ ಮನಂ ಬಿಡೆ ಕೊಂಡು ಈ ಧರೆಯಂ ಪೊಗೞಿಸಿದಂ: ಆದಿಪು, ೧೪. ೧೩೯)

ಅಂತಿಲ್ಲದ
[ಗು] ಅಪರಿಮಿತವಾದ, ಹೇಳಲಾರದ (ಭರತೇಶ್ವರಂ ಸಕಳಾಂತಃಪುರಸಹಿತಮಲ್ಲಿ ವಿಶ್ರಮಿಸಿ ವನಾಭ್ಯಂತರಮಂ ತೊೞಲೆ ಮನಕ್ಕಂತಿಲ್ಲದ ಮುದಮನುಂಟುಮಾಡಿದುದು ಬನಂ: ಆದಿಪು, ೧೧. ೮೩)

ಅಂತು
[ನಾ] ಕೊನೆ, ತುದಿ (ವನಾಭ್ಯಂತರಮಂ ತೊೞಲೆ ಮನಕ್ಕೆ ಅಂತು ಇಲ್ಲದ ಮುದಮನುಂಟುಮಾಡಿದುದು ಬನಂ: ಆದಿಪು, ೧೧. ೮೩); ಹಾಗೆ (ಅಂತು ಕಂಡು ಮನಂಗೊಂಡೆತ್ತಿಕೊಂಡು ಮನೆಗೆ ತಂದು: ಪಂಪಭಾ, ೧. ೯೬ ವ ಮತ್ತು ೧. ೯೭)

ಅಂತುಟೆ
[ಗು] ಹಾಗೆಯೇ (ಅಱಿಮರುಳಂತುಟೆ ಸೊರ್ಕಿನ ತೆಱನಂತುಟೆ ಮನಮೊಱಲ್ದು ಎರ್ದೆಯುರಿವುದು ಮೆಯ್ಯೆಱಗುವುದು ಪದೆವುದು ಆನಿದನಱಿಯನಿದೇಕೆಂದು ಕನ್ನೆ ತಳವೆಳಗಾದಳ್; ಪಂಪಭಾ, ೪. ೭); [ಅಂತುಟು+ಎ] ಅಷ್ಟೇ, ಅಂತಹುದೇ (ಮುದುಪರ ಬಿಲ್ಬಲ್ಮೆಯುಂ ಇಱಿವ ಅದಟುಂ ಬಗೆವಾಗಳ್ ಅಣ್ಣನೆಂದಂತುಟೆ: ಪಂಪಭಾ, ೧೦. ೨೪)

ಅಂತುವರಂ
ಕೊನೆಯವರೆಗೆ (ಭುವನೇಶ್ವರ ನಿಜರೂಪಸ್ತವ ವಸ್ತುಸ್ತವ ಗುಣಸ್ತವಳನಂತುವರಂ ಬಣ್ಣಿಸಲಮರೇಂದ್ರ ವಾಸುಕಿ ಪ್ರಭುಗಳಾರ್ತರಿಲ್ಲ ಎನ್ನಳವೇ: ಆದಿಪು, ೧೦. ೫೨)


logo