logo
भारतवाणी
bharatavani  
logo
Knowledge through Indian Languages
Bharatavani

Pampana Nudigani (Kannada)

Please click here to read PDF file Pampana Nudigani (Kannada)

ಅಂತರ್ಧಾನಕ್ಕೆ ಸಲ್
[ಗು] ಮಾಯವಾಗು (ತಥಾಸ್ತುವೆಂದು ತನ್ನಂಶಮನಾಕೆಯ ಗರ್ಭದೊಳವತರಿಸಿ ಯಮಭಟ್ಟಾರಕಂ ಅಂತರ್ಧಾನಕ್ಕೆ ಸಂದಂ : ಪಂಪಭಾ, ೧. ೧೧೯)

ಅಂತರ್ನಿಗೂಢ
[ಗು] ಒಳಗೆ ತುಂಬಿಕೊಂಡ (ಧರಣೇಂದ್ರನಿದಿರೊಳ್ ಅವರ್ ಅಂತರ್ನಿಗೂಢಕೋಪಾವಲೇಪರುಂ ಈಷತ್ ಆರೋಪಿತಭ್ರೂಚಾಪರುಂ ಆಗಿ: ಆದಿಪು, ೯. ೧೦೪ ವ)

ಅಂತರ್ನಿಹಿತ
[ಗು] ಒಳಗಿರುವ (ನಾಮಗ್ರಹಣಮಾತ್ರದಿಂದಮೆ ಸಮಸ್ತವಸ್ತು ವಿಸ್ತಾರಾಂತರ್ನಿಹಿತ ವಸ್ತುಸಮರ್ಪಣ ಪರಾಯಣನಪ್ಪ ಕಾಮವೃಷ್ಟಿಯೆಂಬ ಗೃಹಪತಿರತ್ನಮುಂ: ಆದಿಪು, ೧೧. ೩ ವ)

ಅಂತರ್ಬಹೀರೂಪ
[ನಾ] ಒಳಗಿನ ಮತ್ತು ಹೊರಗಿನ ಆಕಾರ (ಆವುದಂತರ್ಬಹೀರೂಪಂ ವಿಶದದರ್ಶನಾವಗಮ್ಯಂ ಅದೆಲ್ಲಮಸತ್ಯಾವಭಾಸಿ: ಆದಿಪು, ೨. ೯ ವ)

ಅಂತರ್ಭೇದ
[ನಾ] ರಹಸ್ಯ ಭೇದೋಪಾಯ (ಅಂತರ್ಭೇದದೊಳಂತು ಛಿದ್ರಿಸಿದರಾ ಗಾಂಗೇಯರಂ ಕೊಂದರ್ ಇದಿಂತೀಗಳ್ ಪುಸಿದು ಈ ಘಟೋದ್ಭವನಂ: ಪಂಪಭಾ, ೧೨. ೪೭)

ಅಂತರ್ಮಂಡಲಸಾಧನ
[ನಾ] ಒಳದೇಶ [ಅಂತರಂಗ]ವನ್ನು ಸ್ವಾಧೀನಪಡಿಸಿಕೊಳ್ಳುವ ಕಾರ್ಯ (ನಿನಗರಸ ಬಹಿರ್ಮಂಡಲಮನೆ ಸಮಱಲ್ಕಿನಿತು ಬರಿಸಮುಂ ಪೋದುವು ಕೇಳಿನಿಸು ಅಂತರ್ಮಂಡಲಸಾಧನಮುಂಟೆಂದು ಅಱಿಪಿದುದುಮಂ ಇನ್ನಱಿಪುವೆವೇ: ಆದಿಪು, ೧೪. ೧೫)

ಅಂತರ್ಮುಹೂರ್ತ
[ನಾ] [ಜೈನ] ಒಂದು ಮುಹೂರ್ತಕ್ಕಿಂತ ಕಡಿಮೆಯ ಕಾಲ [೪೮ ನಿಮಿಷ] (ಬೞಿಯಂ ಅಂತರ್ಮುಹೂರ್ತದೊಳ್ ಆಹಾರ ಶರೀರ ಇಂದ್ರಿಯೋಚ್ಛ್ವಾಸ ಭಾಷಾ ಮನಃಪರ್ಯಾಪ್ತಿಗಳೊಳ್ ನೆರೆದು: ಆದಿಪು, ೫. ೮೩ ವ)

ಅಂತರ್ವಂಶಿಕ
[ನಾ] ರಾಣಿವಾಸದ ಮೇಲ್ವಿಚಾರಕ (ಮಂಡಳಿಕ ಮಹಾಸಾಮಂತ ಮಂತ್ರಿಪ್ರಧಾನ ಪುರೋಹಿತ ಅಂತರ್ವಂಶಿಕಾದಿ ಪರಿವಾರ ಪರಿವೃತಂ: ಆದಿಪು, ೨. ೨ ವ)

ಅಂತರ್ವಣ
[ನಾ] ಕಾಡಿನ ಮಧ್ಯ ಪ್ರದೇಶ (ವಜ್ರವೇದಿಕೋತ್ತುಂಗ ತೋರಣದ್ವಾರದ ಅಂತರ್ವಣ ತುಂಗ ಕುಜಂಗಳ ನೆೞಲ್ಗಳೊಳ್: ಆದಿಪು, ೧೨. ೬೮ ವ)

ಅಂತರ್ವಂಶಿಕ
[ನಾ] ರಾಣಿವಾಸದ ಮುಖ್ಯಸ್ಥ (ಆಸ್ಥಾನಮಂಡಪದೊಳ್ ಅತಿಪ್ರಚಂಡಮಂಡಳಿಕ ಮಹಾಸಾಮಂತ ಮಂತ್ರಿಪ್ರಧಾನಪುರೋಹಿತ ಅಂತರ್ವಂಶಿಕಾ ಪರಿವಾರಪರಿವೃತಂ: ಆದಿಪು, ೨. ೨ ವ)


logo