logo
भारतवाणी
bharatavani  
logo
Knowledge through Indian Languages
Bharatavani

Pampana Nudigani (Kannada)

Please click here to read PDF file Pampana Nudigani (Kannada)

ಅಂತರದ್ವೀಪ
[ನಾ] ಬೇರೆ ಬೇರೆಯಾಗಿರುವ ದ್ವೀಪಗಳು? (ಐವತ್ತಾಱಂತರದ್ವೀಪಂಗಳು ಏಕಕೋಟಿಪ್ರಮಾಣಸ್ಥಾಲಿಗಳುಂ: ಆದಿಪು, ೧೫. ೩ ವ)

ಅಂತರಾಂತರ
[ನಾ] ನಡುನಡುವೆ (ಆ ಜಂಬೂದ್ವೀಪದ ನಟ್ಟ ನಡುವೆ .. .. ಅಂತರಾಂತರ ನಿರಂತರ ಕಾಂತ ಸೋಮ ಯಮ ವರುಣ ಕುಬೇರ ಪ್ರಮುಖ ಲೋಕಪಾಲಾಭಿಯೋಗ್ಯ ದಿಗ್ಗಜೇಂದ್ರದೇವ ವಿಹಾರ ಪ್ರಾಸಾದಾಭಿರಾಮಮುಂ: ಆದಿಪು, ೧. ೪೯ ವ)

ಅಂತರಾಯ
[ನಾ] [ಜೈನ] ಮೋಕ್ಷಸಂಪಾದನೆಗೆ ಬರುವ ಅಡ್ಡಿ (ತ್ರಿಗುಪ್ತಿಗುಪ್ತ ಸಮಾಧಿಗುಪ್ತರೆಂಬ ಯತಿಪತಿಗಳಧ್ಯಯನಂ ನಿನಗನಿಷ್ಟಮಪ್ಪುದಱಿಂ ಅಧ್ಯಯನಾಂತರಾಯಮಂ ಮಾಡಲೆಂದು: ಆದಿಪು, ೩. ೩೮ ವ)

ಅಂತರಾಯಪಂಚಕ
[ನಾ] [ಜೈನ] ಐದು ಬಗೆಯ ಅಂತರಾಯಗಳು (ಚಕ್ಷುಅಚಕ್ಷು ಅವಧಿ ಕೇವಲದರ್ಶನಾವರಣೀಯ ಚತುಷ್ಕಮುಮಂ ದಾನ ಲಾಭ ಭೋಗ ಉಪಭೋಗ ವೀರ್ಯಾಂತರಾಯಪಂಚಕಮುಮಂ ನಿರ್ಮೂಳಮಪ್ಪಂತೆ: ಆದಿಪು, ೧೦. ೧೪ ವ)

ಅಂತರಾಯಮಾಣ
[ಗು] ಅಡ್ಡಿಗಳಿಂದ ಕೂಡಿದ (ಸಕಳವಿಷ್ಟಪ ಪ್ರಣೂತನಂ ಈತನಂ ಅಂತರಾಯಮಾಣ ಪರಮಾನಂದ ಸಮಯದೊಳ್ .. .. ನಿಱಿಸುವುದುಂ: ಆದಿಪು, ೮. ೮)

ಅಂತರಾಳ
[ನಾ] ಒಳಭಾಗ (ರಾಜಹಂಸ ಪಾರಾವತ ಮಿಥುನಂಗಳ್ ಉತ್ತುಂಗ ಪ್ರಾಸಾದಶಿಖರ ಮಣಿಗವಾಕ್ಷ ಅಂತರಾಳ ವಿವಿಧ ಗೃಹಾಂತರಗತಂಗಳಾದುವು: ಪಂಪಭಾ ಪರಿಷತ್ತು, ೪. ೪೯ ವ)

ಅಂತರಿತ
[ಗು] ಹುದುಗಿಹೋದ (ನಾಲ್ಕುಂ ಮಹೀವೀಥೀ ಮಧ್ಯಂಗಳೊಳ್ ರತ್ನತೋರಣಶತಾಂತರಿತಂಗಳುಂ ನಿಜೇಂದ್ರ ರುಂದ್ರ ಸಿದ್ಧಾಭ್ಯರ್ಚಿತಂಗಳುಂ: ಆದಿಪು, ೧೦. ೩೪ ವ)

ಅಂತರಿಸು
[ಕ್ರಿ] ನಡುವೆ, ಎಡೆ ಬಿಡು (ಎನ್ನಂ ಅಂತರಿಸದೆ ತೊಟ್ಟು ಬೇಗಂ ಇಸು ವೈರಿಯನೀಗಳೆ ಕೊಂದಪೆಂ ರಸಾಂಬರಧರಣೀ ವಿಭಾಗದೊಳಗಾವೆಡೆವೊಕ್ಕೊಡಂ: ಪಂಪಭಾ, ೧೨. ೨೦೩)

ಅಂತರೀಯ
[ನಾ] ಉಟ್ಟುಕೊಳ್ಳುವ ವಸ್ತ್ರ (ನಾಭಿವಿಲಂಬಮಾನ ಲಂಬಸ್ತನವಿಸ್ರಸ್ತ ಅಂತರೀಯೋತ್ತರೀಯ ವೃದ್ಧಧಾತ್ರೀ ನರ್ತನನಿರೀಕ್ಷಣ ಜನತಾಜನಿತಹಾಸನಿವಾಸಮುಂ: ಆದಿಪು, ೮. ೩೫ ವ)

ಅಂತರ್ಗತ
[ನಾ] ಮನಸ್ಸು, ಸ್ವಗತ (ಮಹಾಪ್ರಸಾದಂ ಎಂದು ದುರ್ಯೋಧನಂ ಪೋದಂ ಇತ್ತ ಗಾಂಗೇಯಂ ತನ್ನ ಅಂತರ್ಗತದೊಳ್: ಪಂಪಭಾ, ೧೦. ೧೦ ವ)


logo