logo
भारतवाणी
bharatavani  
logo
Knowledge through Indian Languages
Bharatavani

Pampana Nudigani (Kannada)

Please click here to read PDF file Pampana Nudigani (Kannada)

ಅಂತಕನಂದನ
[ನಾ] ಯಮನ ಮಗ, ಯುಧಿಷ್ಠಿರ (ಯಾಗವಿಧಿಯಂ ನಿರ್ವರ್ತಿಸಿ ನೆರೆದ ರಾಜಕುಲಮೆಲ್ಲಮಂ ಪೂಜಿಸಿ ವಿಸರ್ಜಿಸಿದಾಗಳ್ ಮುರಾಂತಕಂ ಅಂತಕನಂದನನಂ ಇಂತೆಂದಂ: ಪಂಪಭಾ, ೬. ೬೫ ವ)

ಅಂತಕಸರ್ಪ
[ನಾ] ಯಮನೆಂಬ ಹಾವು (ಅಂತಕಸರ್ಪಂ ಕೊಳೆ ಬರ್ದುಕುವನ್ನರಾರ್ ಸಂಸೃತಿಯೊಳ್: ಆದಿಪು, ೩. ೬೫)

ಅಂತಕಾತ್ಮಜ
[ನಾ] ಯಮನ ಮಗ, ಧರ್ಮರಾಯ (ಸಮಸ್ತಧಾತ್ರಿಯುಮಂ ಆಳಿಪೆವು ಎಂದುಲಿವಂತೆ ಪಕ್ಕಿಗಳ್ ಚಿಲಿಮಿಲಿಯೆಂಬ ಪೊೞ್ತಱೊಳೆ ಬಂದು ಉಱದೆ ಒಡ್ಡಿದಂ ಅಂತಕಾತ್ಮಜಂ: ಪಂಪಭಾ, ೧೧. ೩೩)

ಅಂತಕಾನನ
[ನಾ] ಯಮನ ಬಾಯಿ (ವಿಂಧ್ಯ ಮಳಯ ಹಿಮವನ್ನಿವಾಸಿಗಳಪ್ಪ ಪರ್ವತರಾಜರುಮಂ ಭೀಮಸೇನಂ ಅಂತಕಾನನಮಂ ಎಯ್ದಿಸಿದಂ: ಪಂಪಭಾ, ೧೩. ೪೧ ವ)

ಅಂತಕಾಲ
[ನಾ] ಕೊನೆಗಾಲ, ಸಾವು (ಅಂತು ಗರ್ಭನಿರ್ಭರ ಪ್ರದೇಶದೊಳ್ ಅರಾತಿಗಳ್ಗೆ ಅಂತಕಾಲಂ ದೊರೆಕೊಳ್ವಂತೆ ಪ್ರಸೂತಿಕಾಲಂ ದೊರೆಕೊಳೆ: ಪಂಪಭಾ, ೧. ೧೨೬ ವ)

ಅಂತಪಾಳ
[ನಾ] ಗಡಿಕಾಪಿನವರು (ದೇವಮಾತೃಕ ಸಾಧಾರಣಾನೂಪ ಜಾಂಗಳಭೇದಂಗಳುಮಂ ಅಂತಪಾಳ ಪಾಳಿತದುರ್ಗಪರಿವೃತ ಅಂತಗಳುಂ: ಆದಿಪು, ೮. ೬೩ ವ)

ಅಂತಪ್ಪ
[ಗು] ಅಂತಹ, ಹಾಗಿರುವ (ಅಂಜನಪುಂಜದಂತಪ್ಪ ಮೆಯ್ಯುಂ ಸಿಡಿಲಡೆಸಿದಂತಪ್ಪ ದಾಡೆಯುಂ: ಪಂಪಭಾ, ೮. ೪೨ ವ)

ಅಂತರ
[ನಾ] ಮೇರೆ, ಎಲ್ಲೆ (ಮೇರುವೆ ಮಂದಿರೆಯುಂ ಬೀರದ ಬಿಯದಂತರಕ್ಕೆ ಕಿಱಿದೆಂದು ಚಿಂತಿಪ ಪ್ರಿಯಗಳ್ಳಂ: ಪಂಪಭಾ, ೧. ೪೮) ; [ನಾ] ವ್ಯತ್ಯಾಸ, ಭೇದ (ಕರಿಗಂ ಪರಮಾಣುಗಂ ಅಂತರಮಾವುದೊ ನಿಮಗಂ ಅಸುರವೈರಿಗಂ ಏನಂತರಮಂತೇ: ಪಂಪಭಾ, ೧೦. ೭)

ಅಂತರಂಗ
[ನಾ] ಮನಸ್ಸು (ಮದನನಲರ್ಗಣೆ ಬರ್ದುಕಿತ್ತು ಎನಿಸುತ್ತೊಳಪೊಕ್ಕಳ್ ಭೋಂಕೆನೆ ನಿಖಿಳಜನಾಂತರಂಗಮಂ ರಂಗಮುಮಂ: ಆದಿಪು, ೯. ೧೯); ಮನಸ್ಸುಳ್ಳವನು [ಗು] (ಅನಂಗಮತಂಗಜ ಕೋಳಾಹಳಾಕುಳೀಕೃತಾಂತರಂಗನಾಗಿ: ಪಂಪಭಾ, ೪. ೭೪ ವ)

ಅಂತರಕರಣ
[ನಾ] [ಜೈನ] ಕೆಡಿಸಿಕೊ (ಕಿಱಿಕಿಱಿದು ಬೇಗದಿಂ ತನ್ನ ಪರಿಣಾಮವಿಶೇಷದಿಂ ಚತುಸ್ಸಂಜ್ವಲನ ನವನೋಕಷಾಯಂಗಳೆಂಬ ಪದಿಮೂಱು ಪ್ರಕೃತಿಗಳುಮಂ ಅಂತರಕರಣಂ ಮಾಡಿ: ಆದಿಪು, ೧೦. ೧೪ ವ)


logo