logo
भारतवाणी
bharatavani  
logo
Knowledge through Indian Languages
Bharatavani

Pampana Nudigani (Kannada)

Please click here to read PDF file Pampana Nudigani (Kannada)

ಅಂಡಕೋಶ
[ನಾ] ಬೀಜಕೋಶ, ವೃಷಣ (ಸಮಸಂಕ್ಷಿಪ್ತ ಪ್ರಚ್ಛನ್ನವಾಯುಪ್ರವೇಶನುಂ ಅಪಿಂಜೋತ್ಪನ್ನಾಂಡಕೋಶನುಂ: ಆದಿಪು, ೧೨. ೫೬ ವ)

ಅಂಡುಗೊಳ್
[ಕ್ರಿ] ಹತ್ತಿರವಿರು (ಮತ್ತೊರ್ವಳ್ ಅತಿಸಂಭ್ರಮ ತ್ವರಿತದಿಂ ಮೇಖಳಾಕಳಿತ ರುಚಿರಲುಳಿತಾಧರಪಲ್ಲವೆ ನೋೞ್ಪ ದಂಡುಗಳೊಳಂಡುಗೊಂಡು ಸೊರ್ಕಿದಾನೆ ಬರ್ಪಂತೆ ಬಂದು: ಪಂಪಭಾ, ೪. ೩೬ ವ)

ಅಂತ
[ನಾ] ಗಡಿ, ಸೀಮೆ (ದೇವಮಾತೃಕ ಸಾಧಾರಣಾನೂಪ ಜಾಂಗಳಭೇದಂಗಳುಂ ಅನಂತಪಾಳಪಾಳಿತದುರ್ಗಪರಿವೃತ ಅಂತಗಳುಂ: ಆದಿಪು, ೮. ೬೩ ವ); [ನಾ] ತುತ್ತ ತುದಿ (ಅಂತು ಭರತಕುಲತಿಲಕರಪ್ಪ ಇರ್ವರ್ ಮಕ್ಕಳಂ ಪೆತ್ತು ಕೊಂತಿ ಸಂತಸದ ಅಂತಮನೆಯ್ದಿರ್ಪುದುಂ: ಪಂಪಭಾ, ೧. ೧೨೮ ವ)

ಅಂತಂ
[ನಾ] ಕೊನೆ, ಮುಗಿವು (ರಾಜಸೂಯಾಂತಂ ಕಳಹಮೆಂಬುದಂ ಬಗೆದು ತಾನುಂ ಕಲಹಪ್ರಿಯನಪ್ಪುದಱಿಂದಂ ಅನಿತೆ ನುಡಿದು ಮಾಣ್ದ: ಪಂಪಭಾ, ೬. ೧೮ ವ)

ಅಂತಂ ಬರ್
[ಕ್ರಿ] ಕೊನೆಗೊಳ್ಳು (ಆ ಮಧುರಾಕಾರ ಲತಾಕೋಮಳೆ ತನಗಾಗಳ್ ಆಯುರಂತಂ ಬರೆ ಸೌದಾಮಿನಿವೊಲ್ ಭೋಂಕೆನೆ ಸುರಕಾಮಿನಿ ರಂಗದೊಳ್ ಅದೃಶ್ಯೆಯಪ್ಪುದುಂ: ಆದಿಪು, ೯. ೪೧)

ಅಂತಂ ಮಾಡು
[ಕ್ರಿ] ಕೊಲ್ಲು, ಮುಗಿಸಿಬಿಡು (ಅಂಜಲಿಕಾಸ್ತ್ರಮಂ ಅಮೋಘಾಸ್ತ್ರಧನಂಜಯಂ ಆಕರ್ಣಾಂತಂಬರಂ ತೆಗೆದು ಆ ಕರ್ಣಾಂತಂ ಮಾಡಲ್ ಬಗೆದು: ಪಂಪಭಾ, ೧೨. ೨೧೨ ವ)

ಅಂತಃಪುರ
[ನಾ] ರಾಣಿವಾಸದ ಜನ (ಚೆಲ್ವೆಸೆದುದು ಷಣ್ಣವತಿಸಹಸ್ರ ಅಂತಃಪುರಮವಯವದೊಳೆ ಭರತಚಕ್ರವರ್ತಿಯ ಕೆಲದೊಳ್: ಆದಿಪು, ೧೧. ೩೯)

ಅಂತಃಪುರದಾಸೇರಕ
[ನಾ] ಅಂತಃಪುರದ ದಾಸೀಪುತ್ರ (ಅಂತಃಪುರದಾಸೇರಕನನೇಱಿ ಕಿಂಚಿದಾಕುಂಚಿತಾಗ್ರ ತರ್ಜನೀನಿಶಿತಾಂಕುಶಂ ಅಂತಃಪುರಪ್ರಮದವನವಿಷ್ಟನಾಗಿ: ಆದಿಪು, ೮. ೪೧ ವ)

ಅಂತಃಪ್ರತಿಹಾರಿ
[ನಾ] ಅಂತಃಪುರದ ದ್ವಾರಪಾಲಕ (ವಿಚಿತ್ರವೇತ್ರಲತಾ ಶೋಭಿತತಳಕಮಳೆಯರ್ ಅಂತಃಪ್ರತಿಹಾರಿಯರಾದರ್ ಅಮರಕಾಂತೆಯರರೆಬರ್: ಆದಿಪು, ೭. ೧೪)

ಅಂತಕತನಯ
[ನಾ] ಯಮನ ಮಗ, ಧರ್ಮರಾಯ (ಅೞ್ಕಱಂ ತನಗೆರ್ದೆಯೊಳ್ ಚೋದಿಸೆ ಪರಸಿದಂ ಆಶೀರ್ವಾದ ಪರಂಪರೆಯಿಂ ಆಗಳ್ ಅಂತಕತನಯಂ: ಪಂಪಭಾ, ೧೩. ೧)


logo