logo
भारतवाणी
bharatavani  
logo
Knowledge through Indian Languages
Bharatavani

Pampana Nudigani (Kannada)

Please click here to read PDF file Pampana Nudigani (Kannada)

ಅಂಗದ
[ನಾ] ಭುಜಕೀರ್ತಿ, ತೋಳಬಂದಿ (ಫಣಾಮಣಿಯುಂ ಮಣಿಕುಂಡಲ ಅಂಗದಪ್ರಮುಖವಿಭೂಷಣಮುಂ ನಿಜಾಂಗರುಚಿಯೊಳ್ ಪೆಣೆದಿರೆ: ಆದಿಪು, ೯. ೧೧೦)

ಅಂಗನಾಯಕ
[ನಾ] ಅಂಗದೇಶದ ದೊರೆ, ಕರ್ಣ (ಬೇಗಂ ಇಸು ವೈರಿಯನೀಗಳೆ ಕೊಂದಪೆಂ ರಸಾಂಬರಧರಣೀ ವಿಭಾಗದೊಳಗಾವೆಡೆವೊಕ್ಕೊಡಂ ಅಂಗನಾಯಕಾ: ಪಂಪಭಾ, ೧೨. ೨೦೩)

ಅಂಗನೃಪ
[ನಾ] ಅಂಗರಾಜ್ಯದ ದೊರೆ, ಕರ್ಣ (ಅಂದು ಭೋಂಕನೆ ಕಂಡಂ ಗಂಗಾಂಗನೆಯಂ ಕಾಣ್ಬವೊಲ್ ಅಂಗನೃಪಂ ಮುಂದೆ ನಿಂದ ಕೊಂತಿಯನಾಗಳ್: ಪಂಪಭಾ, ೯. ೭೩)

ಅಂಗಮಹೀಶ
[ನಾ] ಅಂಗರಾಜ್ಯಾಧಿಪತಿ, ಕರ್ಣ (ತನ್ನೀವಳವಿಂ ಪಾರ್ವಂಗಂ ಅಳಿಪಿ ಬೇಡಿದ ಪಾರ್ವಂಗಂ ಪಿರಿದನಿತ್ತಂ ಅಂಗಮಹೀಶಂ: ಪಂಪಭಾ, ೯. ೭೨)

ಅಂಗರಾಗ
[ನಾ] ಮೈಗೆ ಹಚ್ಚಿಕೊಳ್ಳುವ ಪರಿಮಳದ್ರವ್ಯ (ಮಱುದೆವಸಂ ಲತಾಲಲಿತೆ ಕೀಚಕನಲ್ಲಿಗೆ ಕಾಮನೊಂದು ಸೆಱೆಯೆನಿಪ ಅಂಗರಾಗಮಂ ಇಳೇಶ್ವರವಲ್ಲಭೆಯಟ್ಟಲ್ ಉಯ್ದೊಡೆ: ಪಂಪಭಾ, ೮. ೭೩)

ಅಂಗಲತಾ
[ನಾ] ದೇಹವೆಂಬ ಬಳ್ಳಿ (ಅಂಗಲತಾಲಾಲಿತಸಾಂದ್ರ ಚಂದನರಸಂ ಬೆಳ್ದಿಂಗಳ್ ಎಂಬೊಂದು ಪಂಬಲ ಬಂಬಲ್ಗೆಡೆಯಾಗೆ ಬೆಳ್ಪಸದನಂ ಕಣ್ಗೊಪ್ಪಿತಾ ಕಾಂತೆಯಾ: ಪಂಪಭಾ, ೧. ೧೩೭)

ಅಂಗವಲ್ಲಭ
[ನಾ] ಅಂಗರಾಜ್ಯದ ದೊರೆ, ಕರ್ಣ (ಇನ್ನುಂ ಈ ಒಡಲೊಳಿರ್ದುದು ನಾಣಿಲಿಜೀವಂ ಎಂದೊಡೆ ಆವೆಡೆಯೊಳೆ ನಿನ್ನೊಳೆನ್ನ ಕಡುಗೂರ್ಮೆಯುಂ ಅೞ್ಕಱುಂ ಅಂಗವಲ್ಲಭಾ: ಪಂಪಭಾ, ೧೩. ೪)

ಅಂಗಮಹೀತಳ
[ನಾ] ಅಂಗದೇಶ (ಮಂಗಳವಱೆಗಳ್ ಶುಭವಚನಂಗಳ್ ಚಮರರುಹಂಗಳ್ ಆ ಶ್ವೇತಚ್ಛತ್ರಂಗಳ್ ಅಮರ್ದೆಸೆಯೆ ಕರ್ಣಂಗೆ ಅಂಗಮಹೀತಳವಿಭೂತಿಯಂ ನೆಱೆಯಿತ್ತಂ: ಪಂಪಭಾ, ೨. ೮೪)

ಅಂಗರಾಗ
[ನಾ] ಸುಗಂಧ (ಲತಾಲಲಿತೆ ಕೀಚಕನಲ್ಲಿಗೆ ಕಾಮನೊಂದು ಕೈಸೆಱೆಯೆನಿಪ ಅಂಗರಾಗಮಂ ಇಳೇಶ್ವರವಲ್ಲಭೆಯಟ್ಟಲ್ ಉಯ್ದೊಡೆ: ಪಂಪಭಾ, ೮. ೭೩)

ಅಂಗಹಾರ
[ನಾ] ನೃತ್ಯ, ನಟನೆಯ ಮುದ್ರೆ, ಅಂಗಚಲನೆಯ ಮೂಲಕ ಭಾವಾಭಿವ್ಯಕ್ತಿ (ಕರಣಂ ರೇಚಕಂ ಅಂಗಹಾರಂ ಇನಿತೆಂದು ಓದುತ್ತುಂ ಇರ್ಪ ಓದು ಅದತ್ತಿರಲಿ ಈ ನಾಟ್ಯರಸಂ ಸಮಸ್ತ ಸುರವೃಂದಾಧೀಶನಿಂದಂ ಪೊನಲ್ವರಿದತ್ತು: ಆದಿಪು, ೭. ೧೨೦)


logo