logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

AB
ನಾಮವಾಚಕ
ಎಬಿ; ಎ ಮತ್ತು ಬಿ ಎರಡೂ ಅಂಟಿಜನ್‍ಗಳನ್ನೊಳಗೊಂಡ (ಎಬಿಓ ವ್ಯವಸ್ಥೆಗೆ ಸೇರಿದ) ಮಾನವ ರಕ್ತದ ಒಂದು ಗುಂಪು.

aba
ನಾಮವಾಚಕ
  • ಆಬ; ಒಂಟೆ ಯಾ ಮೇಕೆಯ ಉಣ್ಣೆಯಿಂದ ಮಾಡಿದ ಬಟ್ಟೆ.
  • ಆಬ: ಜೋಂಗಿ; ಅರಬ್ಬರು ತೊಡುವ ತೋಳಿಲ್ಲದ ನಿಲುವಂಗಿ.

  • abac
    ನಾಮವಾಚಕ
    (ಬ್ರಿಟಿಷ್‍ ಪ್ರಯೋಗ) = nomogram.

    abaca
    ನಾಮವಾಚಕ
  • ಆಬಕ; ಮನಿಲ ನಾರು; ಹಿಲಿಪೀನಿನ ಭೂತಾಳೆ ನಾರು.
  • ಮನಿಲನಾರಿನ ಗಿಡ.

  • abaci
    ನಾಮವಾಚಕ
    abacusನ ಬಹುವಚನ.

    aback
    ಕ್ರಿಯಾವಿಶೇಷಣ ಪದಗುಚ್ಛ
    taken aback
  • ಹಿಂದಕ್ಕೆ; ಹಿಂದುಗಡೆಗೆ; ಹಿಮ್ಮೊಗವಾಗಿ.
  • (ಹಡಗಿನ ಚೌಕಹಾಯಿಗಳ ವಿಷಯದಲ್ಲಿ) ಇದುರುಗಾಳಿಯಿಂದ ಹಾಯಿಗಂಬಕ್ಕೆ ಒತ್ತಿ, ಅದುಮಿ, ನೂಕಿ.

  • abactinal
    ಗುಣವಾಚಕ
    (ನಕ್ಷತ್ರ ಮೀನಿನಂಥ ತ್ರಿಜ್ಯೀಯ ಪ್ರಾಣಿಗಳ ವಿಷಯದಲ್ಲಿ) ಬೆಂಗಡೆಯ; ಬೆನ್ನು ಭಾಗದಲ್ಲಿರುವ; ಬಾಯಿಗೆ ವಿರುದ್ಧ ದಿಕ್ಕಿನಲ್ಲಿರುವ.

    abacus
    ನಾಮವಾಚಕ
    (ಬಹುವಚನ abaci ಉಚ್ಚಾರಣೆ ಆಬಸೈ, ಯಾ abacuses)
  • ಮಣಿಚೌಕಟ್ಟು; ಮಣಿ-ಚೌಕ, ಪಟ; ಲೆಕ್ಕಮಾಡಲು ಬಳಸುವ ಸಾಧನ. Figure: abacus_1
  • (ವಾಸ್ತುಶಿಲ್ಪ) ಬೋದಿಗೆ; ಸ್ತಂಭದ ಶೀರ್ಷಫಲಕ. Figure: abacus_2

  • Abaddon
    ನಾಮವಾಚಕ
  • ನರಕ.
  • ಸೈತಾನ.

  • abaft
    ಕ್ರಿಯಾವಿಶೇಷಣ
    (ನೌಕಾಯಾನ) (ಹಡಗಿನ) ಹಿಂಗೋಟಿನ ಕಡೆಗೆ; ಹಿಂಭಾಗದ ಕಡೆ.


    logo