logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

abjection
ನಾಮವಾಚಕ
ಕೀಳುದೆಸೆ; ಹೀನಸ್ಥಿತಿ; ದೀನಾವಸ್ಥೆ; ಅಧೋಗತಿ; ದುರ್ದಶೆ.

abjectly
ಕ್ರಿಯಾವಿಶೇಷಣ
  • ಕಡುಹೀನವಾಗಿ; ನೀಚತನದಿಂದ; ತುಚ್ಛವಾಗಿ.
  • ಅತಿ ದೈನ್ಯದಿಂದ; ಗುಲಾಮೀ ಮನೋಭಾವದಿಂದ.

  • abjectness
    ನಾಮವಾಚಕ
  • ಅತಿ ಹೀನ ಸ್ಥಿತಿ; ನೀಚಸ್ಥಿತಿ.
  • ಗುಲಾಮೀ ಮನೋಭಾವ; ದಾಸ್ಯ, ದೈನ್ಯ–ಮನೋಭಾವ.

  • abjudge
    ಸಕರ್ಮಕ ಕ್ರಿಯಾಪದ
    ನ್ಯಾಯಾಲಯದ ತೀರ್ಮಾನದಂತೆ ಹಿಂದಕ್ಕೆ ತೆಗೆದುಕೊಂಡುಬಿಡು.

    abjuration
    ನಾಮವಾಚಕ
  • ಪರಿತ್ಯಾಗ; ಯಾವುದನ್ನೇ ತ್ಯಜಿಸುವುದು.
  • ಪರಿತ್ಯಾಗ–ಶಪಥ, ವಚನ ಪರಿತ್ಯಾಗ ಮಾಡುವಾಗ ತೆಗೆದುಕೊಳ್ಳುವ ಪ್ರಮಾಣವಚನ.

  • abjure
    ಸಕರ್ಮಕ ಕ್ರಿಯಾಪದ
  • (ಅಭಿಪ್ರಾಯ, ನಂಬಿಕೆ, ಧ್ಯೇಯ, ಬಾಧ್ಯತೆ, ಹಕ್ಕು, ಮೊದಲಾದವನ್ನು) ಪ್ರಮಾಣಪೂರ್ವಕ ಯಾ ಆಣೆಯಿಟ್ಟು ತ್ಯಜಿಸು.
  • (ಸ್ವದೇಶ ಮೊದಲಾದವನ್ನು) ಎಂದೆಂದಿಗೂ ಯಾ ಶಾಶ್ವತವಾಗಿ ತ್ಯಜಿಸುವುದಾಗಿ–ಆಣೆ ಇಡು, ಪ್ರಮಾಣ ಮಾಡು, ಶಪಥಮಾಡು.
  • (ಯಾವುದನ್ನೇ) ತೊರೆ; ಬಿಡು; ತ್ಯಜಿಸು.

  • abkari
    ನಾಮವಾಚಕ
  • ಮಾದಕದ್ರವ್ಯಗಳ ತಯಾರಿಕೆ ಯಾ ಮಾರಾಟ.
  • ಅಬ್ಕಾರಿ ಸುಂಕ.

  • ablactation
    ನಾಮವಾಚಕ
    (ಮಗುವಿಗೆ ಯಾ ಕರುವಿಗೆ) ಮೊಲೆ ಬಿಡಿಸುವಿಕೆ; ಮೊಲೆ ತಪ್ಪಿಸುವಿಕೆ; ಸ್ತನ್ಯತ್ಯಾಗ; ಮೊಲೆಹಾಲು ಬಿಡಿಸುವಿಕೆ.

    ablate
    ಸಕರ್ಮಕ ಕ್ರಿಯಾಪದ
    (ಶಸ್ತ್ರವೈದ್ಯ) ಕತ್ತರಿಸಿ ಹಾಕು; ವಿಚ್ಛೇದಿಸು; ಶಸ್ತ್ರಚಿಕಿತ್ಸೆಯಿಂದ ಅಂಗವನ್ನೋ ಅಂಗಭಾಗವನ್ನೋ ತೆಗೆದುಹಾಕು.

    ablation
    ನಾಮವಾಚಕ
  • (ಶಸ್ತ್ರವೈದ್ಯ) ವಿಚ್ಛೇದನ; ಅಂಗಚ್ಛೇದನ; ಶಸ್ತ್ರಕ್ರಿಯೆಯಿಂದ ಅಂಗವನ್ನೋ ಅಂಗಭಾಗವನ್ನೋ ಕತ್ತರಿಸಿ ತೆಗೆದು ಹಾಕುವುದು.
  • (ಭೂವಿಜ್ಞಾನ) ಸವೆತ; ಕ್ಷಯಿಸುವಿಕೆ; ನೀರಿನ ಪ್ರಭಾವದಿಂದ ಯಾ ಕರಗುವುದರಿಂದ, ಕಲ್ಲು ಬಂಡೆಯ ಯಾ ಹಿಮನದಿಯ ಯಾ ನೀರ್ಗಲ್ಲಿನ ಹೊರಮೈ ಸವೆಯುವುದು.
  • (ಆಕಾಶಯಾನ) ಹೆರೆತ; ಅಪಕ್ಷರಣ; ಘರ್ಷಣೆಯಿಂದ ಆಕಾಶನೌಕೆ ಮೊದಲಾದವುಗಳ ಹೊರಮೈ ಸವೆತ.


  • logo