logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

aboil
ಗುಣವಾಚಕ
ಕುದಿಯುವ; ಕುದಿಯುತ್ತಿರುವ.

abolish
ಸಕರ್ಮಕ ಕ್ರಿಯಾಪದ
(ಪದ್ಧತಿ, ಸಂಪ್ರದಾಯ, ಮೊದಲಾದವನ್ನು) ತೆಗೆದುಹಾಕು; ರದ್ದು ಮಾಡು; ನಿಲ್ಲಿಸು; ಅಂತ್ಯಗೊಳಿಸು; ಕೊನೆಗಾಣಿಸು; ಅಳಿಸು; ನಾಶಮಾಡು.

abolishable
ಗುಣವಾಚಕ
ರದ್ದು ಮಾಡಬಹುದಾದ; ಕೊನೆಗಾಣಿಸಬಹುದಾದ.

abolisher
ನಾಮವಾಚಕ
ರದ್ದುಗಾರ; ಕೊನೆಗಾಣಿಸುವವ; ನಾಶಕ.

abolishment
ನಾಮವಾಚಕ
= abolition.

abolition
ನಾಮವಾಚಕ
  • ರದ್ದತಿ; ರದ್ದಿಯಾತಿ; ನಿರ್ಮೂಲನ; ತೊಡೆದುಹಾಕುವಿಕೆ.
  • ರದ್ದತಿ; ರದ್ದಿಯಾತಿ; (ಮುಖ್ಯವಾಗಿ ಗಲ್ಲುಶಿಕ್ಷೆಗೆ ಸಂಬಂಧಿಸಿದಂತೆ) ರದ್ದು ಮಾಡಿದ್ದು; ಕೊನೆಗೊಳಿಸಿದ್ದು.
  • (ಚರಿತ್ರೆ) ಗುಲಾಮಗಿರಿ ರದ್ದತಿ; 18 ಮತ್ತು 19ನೇ ಶತಮಾನಗಳಲ್ಲಿ ನೀಗ್ರೋ ಗುಲಾಮಗಿರಿ ಪದ್ಧತಿಯನ್ನು ರದ್ದು ಮಾಡಿದ ಚಳವಳಿ.

  • abolitionary
    ಗುಣವಾಚಕ
  • ರದ್ದತಿಯನ್ನು ಸಮರ್ಥಿಸುವ.
  • ರದ್ದತಿಗೆ ಸಂಬಂಧಪಟ್ಟ.
  • ನಾಶಕರವಾದ; ನಿರ್ಮೂಲನಕರ.

  • abolitionism
    ನಾಮವಾಚಕ
    (ಗುಲಾಮಗಿರಿ) ರದ್ದತಿ ವಾದ; ನಿರ್ಮೂಲನ ವಾದ.

    abolitionist
    ನಾಮವಾಚಕ
    (ಗುಲಾಮಗಿರಿ) ರದ್ದತಿವಾದಿ; ನಿರ್ಮೂಲನವಾದಿ.

    abomasum
    ನಾಮವಾಚಕ
    (ಬಹುವಚನ abomasa)(ಜೀವವಿಜ್ಞಾನ) ಚತುರ್ಥ ಜಠರ; ಚತುರ್ಥಾಮಾಶಯ; ರೋಮಂಥಗಳ (ಮೆಲಕು ಹಾಕುವ ಪ್ರಾಣಿಗಳ) ನಾಲ್ಕನೆಯ ಹೊಟ್ಟೆ.


    logo