logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

aboriginality
ನಾಮವಾಚಕ
ಮೂಲ ನಿವಾಸಿತ್ವ; ಆದಿವಾಸಿತ್ವ; ಸ್ಥಳೀಕತೆ.

aboriginally
ಕ್ರಿಯಾವಿಶೇಷಣ
ಮುಮ್ಮೊದಲಿನಿಂದ; ಆದಿಕಾಲದಿಂದ; ಪ್ರಾರಂಭಕಾಲದಿಂದ; ಪ್ರಪ್ರಾಚೀನ ಕಾಲದಿಂದ.

aborigine
ನಾಮವಾಚಕ
(ಸಾಮಾನ್ಯವಾಗಿ ಬಹುವಚನದಲ್ಲಿ ಉಚ್ಚಾರಣೆ ಆಬರಿಜಿನಿ()ಸ್‍)
  • = 2aboriginal.
  • ಸ್ಥಳೀಯ ಸಸ್ಯಗಳು ಯಾ ಪ್ರಾಣಿಗಳು; ಒಂದು ಸ್ಥಳದಲ್ಲಿ ಯಾ ದೇಶದಲ್ಲಿ ಮೊದಲಿನಿಂದಲೂ ಇದ್ದ ಯಾ ಇರುವ ಸಸ್ಯಗಳು ಯಾ ಪ್ರಾಣಿಗಳು.

  • aborning
    ಕ್ರಿಯಾವಿಶೇಷಣ
    (ಅಮೆರಿಕನ್‍ ಪ್ರಯೋಗ) ಹುಟ್ಟುತ್ತಾ; ಉತ್ಪತ್ತಿಯಾಗುತ್ತಾ.

    aborning
    ಆಖ್ಯಾತಕ ಗುಣವಾಚಕ
    (ಅಮೆರಿಕನ್‍ ಪ್ರಯೋಗ) ಹುಟ್ಟುತ್ತಿರುವ; ಉತ್ಪತ್ತಿಯಾಗುತ್ತಿರುವ.

    abort
    ಅಕರ್ಮಕ ಕ್ರಿಯಾಪದ ಸಕರ್ಮಕ ಕ್ರಿಯಾಪದ
  • ಮೈಯಿಳಿ; ಗರ್ಭಪಾತವಾಗು; ಗರ್ಭಸ್ರಾವವಾಗು: she aborted ಅವಳಿಗೆ ಮೈಯಿಳಿಯಿತು.
  • (ಜೀವವಿಜ್ಞಾನ) ಗೊಡ್ಡಾಗು; ಬರಡಾಗು.
  • (ಜೀವವಿಜ್ಞಾನ) (ಸಸ್ಯಗಳು, ಪ್ರಾಣಿಗಳು, ಅವುಗಳ ಅಂಗಗಳು, ಜಾತಿಗಳ ವಿಷಯದಲ್ಲಿ) ಮುರುಟಿಕೊ; ಕುರುಟುಬೀಳು; ಚಿರುಟಿಹೋಗು; ಸ್ವಭಾವಿಕ ಬೆಳವಣಿಗೆ–ಕುಂಠಿತವಾಗು, ತಡೆ ಹೊಂದು.
  • (ರೂಪಕವಾಗಿ) (ಯೋಜನೆ, ಹಂಚಿಕೆ, ಪ್ರಯತ್ನ, ಮೊದಲಾದವು) ಕೆಟ್ಟುಹೋಗು; ವ್ಯರ್ಥವಾಗು; ವಿಫಲವಾಗು; ಎಣಿಸಿದಂತೆ ನಡೆಯದೆ ಹೋಗು.
  • (ವಿಮಾನ, ಕ್ಷಿಪಣಿ, ಮೊದಲಾದವುಗಳ ವಿಷಯದಲ್ಲಿ) ವಿಫಲಗೊಳ್ಳು; ಅಯಶಸ್ವಿಯಾಗು; ಉದ್ದಿಷ್ಟಯಾನವನ್ನು ಯಾ ಕಾರ್ಯವನ್ನು ಮಾಡದೆ ಹೋಗು.

  • abort
    ನಾಮವಾಚಕ
  • (ವಿಮಾನಯಾನ, ಕ್ಷಿಪಣಿ ಉಡಾವಣೆ, ಮೊದಲಾದವುಗಳ) ವೈಫಲ್ಯ; ಕಾರ್ಯ ನಡೆಸದೆ ಯಾ ನಡೆಸುವುದರೊಳಗೆ ಅಯಶಸ್ವಿಯಾಗುವುದು.
  • (ಅಂಥ ಯಾನಗಳ) ರದ್ದತಿ; ಅಂತ್ಯಗೊಳಿಕೆ.

  • aborted
    ಗುಣವಾಚಕ
  • ಅಕಾಲಪ್ರಸೂತ; ಅಕಾಲಜನಿತ.
  • ಸಾಕಷ್ಟು ಬೆಳೆಯದ; ಪೀಚಾದ; ಬೆಳವಣಿಗೆ ಮಟ್ಟಾದ.
  • (ಜೀವವಿಜ್ಞಾನ) ಪೂರ್ಣಗೊಳ್ಳದ; ಅಂಕುರಾವಸ್ಥೆಯ: thorns are aborted branches ಮುಳ್ಳುಗಳು ಪೂರ್ಣಗೊಳ್ಳದ ರೆಂಬೆಗಳು.

  • abortifacient
    ನಾಮವಾಚಕ
    ಗರ್ಭಸ್ರಾವಕ; ಮೈಯಿಳಿಸುವ ಔಷಧ ಮೊದಲಾದವು.

    abortifacient
    ಗುಣವಾಚಕ
    (ಔಷಧಿ ಮೊದಲಾದವುಗಳ ವಿಷಯದಲ್ಲಿ) ಗರ್ಭಸ್ರಾವಕ; ಗರ್ಭಸ್ರಾವಗೊಳಿಸುವ.


    logo