logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

X
ಸಂಕೇತ
(ಚಲನಚಿತ್ರಗಳ ವಿಷಯದಲ್ಲಿ) ವಯಸ್ಕರಿಗೆ ಮಾತ್ರ ತಕ್ಕುದಾದುದು ಎಂಬುದನ್ನು ಸೂಚಿಸುವ ಸಂಕೇತ.

X, x
ನಾಮವಾಚಕ
(ಬಹುವಚನ Xs ಅಥವಾ X’s).
  • ಇಂಗ್ಲಿಷ್‍ ವರ್ಣಮಾಲೆಯ 24ನೆಯ ಅಕ್ಷರ.
  • (ಬೀಜಗಣಿತ, ಸಾಮಾನ್ಯವಾಗಿ $x$) ಮೊದಲನೆಯ ಅಜ್ಞಾತ ಮೊತ್ತದ ಸಂಕೇತ.
  • (ರೇಖಾಗಣಿತ) ಪ್ರಥಮ ಸ್ಥಾನ ನಿರ್ದೇಶ, ನಿರ್ದೇಶಾಂಕ (coordinate).
  • ಅಜ್ಞಾತ ಅಥವಾ ಅನಿರ್ದಿಷ್ಟ ವ್ಯಕ್ತಿ, ಸಂಖ್ಯೆ, ಮೊದಲಾದವು.
  • (ರೋಮನ್‍ ಸಂಖ್ಯೆಯಾಗಿ) 10 (ಉದಾಹರಣೆಗೆ XI = 11, XV=15, XX=20, XL = 40, XC = 90).
  • ಸ್ಥಾನಸೂಚಕ ಗುರುತು: X marks the spot X ಗುರುತು ಸ್ಥಳವನ್ನು ಸೂಚಿಸುತ್ತದೆ.
  • ತಪ್ಪು (ಸೂಚಿಸುವ) ಗುರುತು.
  • ಚುಂಬನ, ಓಟು, ಅನಕ್ಷರಸ್ಥನ ಸಹಿ,ಮೊದಲಾದವನ್ನು ಸೂಚಿಸುವ ಗುರುತು. ${\rm A}4=297\times 210$ ಮಿಲಿಮೀಟರ್‍. ${\rm A}5=210\times 148$ ಮಿಲಿಮೀಟರ್‍.

  • X-chromosome
    ನಾಮವಾಚಕ
    (ಜೀವವಿಜ್ಞಾನ) ಎಕ್ಸ್‍ ಕ್ರೋಮಸೋಮ್‍; ಹೆಣ್ಣು ಜೀವಕೋಶಗಳಲ್ಲಿ ಜೋಡಿಯಾಗಿರುವ, ಗಂಡು ಜೀವಕೋಶಗಳಲ್ಲಿ ವೈ (Y) ಕ್ರೋಮಸೋಮ್‍ ಜೊತೆಗೆ ಇರುವ, ಲೈಂಗಿಕ ಕ್ರೋಮಸೋಮು.

    X-ray
    ನಾಮವಾಚಕ
    (x-ray ಎಂದೂ ಬಳಕೆ).
  • (ಬಹುವಚನದಲ್ಲಿ) ಕ್ಷ ಕಿರಣಗಳು; ಎಕ್ಸ್‍ ಕಿರಣಗಳು; ನೇರಳಾತೀತ ಕಿರಣಗಳಿಗಿಂತ ಕಡಮೆ ತರಂಗದೂರ ಉಳ್ಳ, ಕಾರ್ಬನ್‍, ಹೈಡ್ರೊಜನ್‍, ಆಕ್ಸಿಜನ್‍, ನೈಟ್ರೊಜನ್‍ಗಳಂಥ ಕಡಮೆ ಪರಮಾಣು ತೂಕದ ಧಾತುಗಳಿಂದಾದ, ಘನ ಪದಾರ್ಥದ ಮೂಲಕ ಹಾದುಹೋಗಬಲ್ಲ ವಿದ್ಯುತ್ಕಾಂತ ತರಂಗಗಳು.
  • ಎಕ್ಸ್‍ರೇ ಚಿತ್ರ; ಕ್ಷ ಕಿರಣಚಿತ್ರ; ದೇಹದ ಯಾವುದೇ ಭಾಗವನ್ನು ಎಕ್ಸ್‍ ಕಿರಣಗಳಿಗೊಡ್ಡಿ ಫಿಲ್ಮ್‍ ಮೇಲೆ ಪಡೆದ, ಮೂಳೆ ಮುಂತಾದ ಅಧಿಕ ಪರಮಾಣು ತೂಕದ ಧಾತುಗಳಿಂದ ರೂಪುಗೊಂಡ ದೇಹಭಾಗಗಳನ್ನು ಎತ್ತಿ ತೋರಿಸುವ ಚಿತ್ರ.

  • X-ray
    ಸಕರ್ಮಕ ಕ್ರಿಯಾಪದ
    (x-ray ಎಂದೂ ಬಳಕೆ). (ದೇಹದ ಯಾವುದೇ ಭಾಗದ ವಿಷಯದಲ್ಲಿ)
  • ಎಕ್ಸ್‍-ರೇ ಅಥವಾ ಕ್ಷ ಕಿರಣಗಳಿಗೆ – ಒಡ್ಡು.
  • ಎಕ್ಸ್‍-ರೇ ತೆಗೆ; ಕ್ಷ ಕಿರಣಚಿತ್ರ ತೆಗೆ.

  • X-ray astronomy
    ನಾಮವಾಚಕ
    ಎಕ್ಸ್‍-ರೇ, ಕ್ಷ ಕಿರ ಖಗೋಳಶಾಸ್ತ್ರ; ಖಾಗೋಳಿಕ ಕಾಯಗಳಿಂದ ಬರುವ ಎಕ್ಸ್‍ ಕಿರಣಗಳನ್ನು ಗ್ರಹಿಸುವ ಮೂಲಕ ಖಾಗೋಳಿಕ ಮಾಹಿತಿಯನ್ನು ಪಡೆದು ಅಭ್ಯಸಿಸುವ, ಖಗೋಳವಿಜ್ಞಾನ ಶಾಖೆ.

    X-ray crystallography
    ನಾಮವಾಚಕ
    ಎಕ್ಸ್‍-ರೇ, ಕ್ಷಕಿರ – ಸ್ಫಟಿಕವಿಜ್ಞಾನ; ಸ್ಫಟಿಕಗಳಲ್ಲಿ ಕ್ರಮಬದ್ಧವಾಗಿ ಅಳವಡಿಸಿಕೊಂಡಿರುವ ಪರಮಾಣುಗಳು ತಮ್ಮ ಮೇಲೆ ಎರಗುವ ಎಕ್ಸ್‍ ಕಿರಣಗಳನ್ನು ವಿವರ್ತಿಸುವವಾದ್ದರಿಂದ ಅದನ್ನು ಉಪಯೋಗಿಸಿಕೊಂಡು ಸ್ಫಟಿಕಗಳ ಅಧ್ಯಯನ ಮಾಡುವ ಸ್ಫಟಿಕವಿಜ್ಞಾನ ಶಾಖೆ.

    X-ray tube
    ನಾಮವಾಚಕ
    ಎಕ್ಸ್‍-ರೇ, ಕ್ಷ ಕಿರಣ–ನಳಿಕೆ; ಇಲೆಕ್ಟ್ರಾನ್‍ಗಳನ್ನು ವೇಗೋತ್ಕರ್ಷದಿಂದ ಹೆಚ್ಚು ಶಕ್ತಿಶಾಲಿಗಳನ್ನಾಗಿ ಮಾಡಿ, ಅವನ್ನು ಲೋಹದ ಗುರಿವಸ್ತುವಿಗೆ ಸಂಘಟ್ಟಿಸುವುದರಿಂದ ಕ್ಷ ಕಿರಣಗಳನ್ನು ಉತ್ಪತ್ತಿ ಮಾಡುವ ಸಾಧನ.

    x.d.
    ಸಂಕ್ಷಿಪ್ತ
    ex dividend.

    xanthate
    ನಾಮವಾಚಕ
    ಸಾಂತಿಕ್‍ ಆಮ್ಲದ ಲವಣ ಅಥವಾ ಎಸ್ಟರು.


    logo