logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

J
ನಾಮವಾಚಕ
  • ಇಂಗ್ಲಿಷ್‍ ವರ್ಣಮಾಲೆಯ ಹತ್ತನೆಯ ಅಕ್ಷರ.
  • (ವೈದ್ಯರು ನೀಡುವ ಔಷಧ ಸೂಚಿ ಮೊದಲಾದವುಗಳಲ್ಲಿ ಕೊನೆಯಲ್ಲಿ ಬಳಸುವ) ರೋಮನ್‍ ಸಂಖ್ಯೆಯ i ಯನ್ನು ಸೂಚಿಸುವ ಅಕ್ಷರ, ಉದಾಹರಣೆಗೆ ij, uj.

  • J
    ಸಂಕ್ಷಿಪ್ತ
  • jack.
  • joule(s).
  • Judge.
  • justice.

  • j'adoube
    ಭಾವಸೂಚಕ ಅವ್ಯಯ
    (ಚದುರಂಗದ ಆಟಗಾರ ತಾನು ಕಾಯನ್ನು ಮುಟ್ಟುತ್ತಿರುವುದು ನಡೆಸುವುದಕ್ಕಾಗಿ ಅಲ್ಲವೆಂದೂ, ಅದನ್ನು ಸರಿಯಾಗಿ ಕೂರಿಸುವುದಕ್ಕಗಿ ಮಾತ್ರ ಮುಟ್ಟುತ್ತಿದ್ದೇನೆಂದೂ ಹೇಳುವ ಮಾತು) ಸರಿಯಾಗಿ ಕೂರಿಸುತ್ತಿದ್ದೇನೆ, ಅಷ್ಟೆ.

    Jaal-goat
    ನಾಮವಾಚಕ
    ಯಾಲ್‍ ಮೇಕೆ; ಇತಿಯೋಪಿಯಾ, ಉತ್ತರ ಈಜಿಪ್ಟ್‍ನ ಸೀನಾಯ್‍ ಪ್ರದೇಶ, ಅರೇಬಿಯಗಳಲ್ಲಿಯ ಐಬೆಕ್ಸ್‍ ಅಥವಾ ಕಾಡುಮೇಕೆ, ಕಾಡಾಡು.

    jab
    ಸಕರ್ಮಕ ಕ್ರಿಯಾಪದ
  • ಒರಟೊರಟಾಗಿ – ತಿವಿ, ಚುಚ್ಚು.
  • ಇರಿ.
  • (ಯಾವುದನ್ನೇ ಮೈಯೊಳಕ್ಕೆ) ದಿಢೀರನೆ ಹೆಟ್ಟು, ಚುಚ್ಚು, ನಾಟು.

  • jab
    ನಾಮವಾಚಕ
  • (ಚೂಪಾದ ವಸ್ತುವಿನಿಂದ ಅಥವಾ ಮುಷ್ಟಿಯಿಂದ ಮಾಡುವ) ತಿವಿತ; ಇರಿತ; ಹೊಡೆತ; ಗುದ್ದು.
  • (ಆಡುಮಾತು) (ಒಳಚರ್ಮದಲ್ಲಿ) ಚುಚ್ಚುಮದ್ದು ಹಾಕುವುದು; ಚುಚ್ಚುಮದ್ದು ಸೂಜಿಯ ಚುಚ್ಚು.

  • jabber
    ಕ್ರಿಯಾಪದ ಸಕರ್ಮಕ ಕ್ರಿಯಾಪದ ಅಕರ್ಮಕ ಕ್ರಿಯಾಪದ
    ಗೊಜಗುಟ್ಟು; ಮಾತನ್ನು ಬೇಗ ಬೇಗ, ಅಸ್ಪಷ್ಟವಾಗಿ ಉಚ್ಚರಿಸು.
  • ಅರ್ಥವಿಲ್ಲದೆ ಬಡಬಡಿಸು; ಬಡಬಡನೆ ಮಾತನಾಡು.
  • (ಕೋತಿ ಮೊದಲಾದವುಗಳಂತೆ) ಕಿಚಕಿಚಗುಟ್ಟು.

  • jabber
    ನಾಮವಾಚಕ
  • ಬಡಬಡಿಕೆ; ಬಡಬಡ ಮಾತು; ಗೊಜಗುಟ್ಟುವುದು; ಬಡಬಡ ಮಾತನಾಡುವುದು.
  • ಅರ್ಥವಾಗದ ಮಾತು.

  • jabberwocky
    ನಾಮವಾಚಕ
    ಅನರ್ಥ ಬರಹ ಅಥವಾ ಮಾತು; ಮುಖ್ಯವಾಗಿ ಹಾಸ್ಯ ಪರಿಣಾಮ ಉಂಟುಮಾಡುವ ಅಥವಾ ಹಾಸ್ಯಕರವಾಗಿರುವ, ಅರ್ಥಹೀನ ಬರವಣಿಗೆ ಅಥವಾ ಮಾತುಗಾರಿಕೆ.

    jabiru
    ನಾಮವಾಚಕ
    ಜ್ಯಾಬಿರೂ:
  • ಮಧ್ಯ ಹಾಗೂ ದಕ್ಷಿಣ ಅಮೆರಿಕದ ಉಷ್ಣವಲಯ ಪ್ರದೇಶದಲ್ಲಿರುವ ಬಕಪಕ್ಷಿಯ ಬಳಗದ ಒಂದು ಪಕ್ಷಿ.
  • ಯೂರೋಪ್‍, ಏಷ್ಯಾ ಮತ್ತು ಆಹ್ರಿಕಗಳಲ್ಲಿನ ಕಪ್ಪು ಕತ್ತಿನ ಅಂಥದೇ ಹಕ್ಕಿ.


  • logo