logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

ablative
ಗುಣವಾಚಕ
(ವ್ಯಾಕರಣ) ಪಂಚಮೀ ವಿಭಕ್ತಿಯ ಯಾ ಅದಕ್ಕೆ ಸಂಬಂಧಿಸಿದ.

ablative
ನಾಮವಾಚಕ
(ವ್ಯಾಕರಣ) (ಮುಖ್ಯವಾಗಿ ಲ್ಯಾಟಿನ್‍ ಭಾಷೆಯ) ಪಂಚಮೀ ವಿಭಕ್ತಿ ಯಾ ಅದರ ಪ್ರತ್ಯಯ.

ablative absolute
ನಾಮವಾಚಕ
(ಲ್ಯಾಟಿನ್‍ ವ್ಯಾಕರಣ) ನಿರುಪಾಧಿಕ ಪಂಚಮೀ ವಿಭಕ್ತಿ; ಘಟನೆಯ ಕಾಲ ಯಾ ಸಂದರ್ಭಗಳನ್ನು ಸೂಚಿಸುವ ಪಂಚಮೀ ವಿಭಕ್ತಿ.

ablative case
ನಾಮವಾಚಕ
= 2ablative.

ablaut
ನಾಮವಾಚಕ
(ಭಾಷಾಶಾಸ್ತ್ರ) ಸ್ವರವ್ಯತ್ಯಯ; ಮುಖ್ಯವಾಗಿ ಇಂಡೋ-ಯೂರೋಪಿಯನ್‍ ಭಾಷೆಗಳ ಪರಸ್ಪರ ಸಂಬಂದ್ಧ ಪದಗಳ ನಿಷ್ಪತ್ತಿಗೆ ಕಾರಣವಾಗಿ ಮೂಲಪದದಲ್ಲಿ ಆಗಿರುವ ಸ್ವರವ್ಯತ್ಯಾಸ: sing, sang, sung.

ablaze
ಕ್ರಿಯಾವಿಶೇಷಣ
  • ಉರಿಯೆದ್ದು; ಧಗಧಗಿಸುತ್ತ; ಪ್ರಜ್ವಲಿಸುತ್ತ: set it ablaze ಧಗಧಗಿಸುವಂತೆ ಮಾಡು.
  • ಉದ್ರೇಕಗೊಂಡು; ಉತ್ಸಾಹ ತುಂಬಿ; ಆವೇಶ ಹತ್ತಿ.
  • (ಕೋಪದಿಂದ) ಉರಿಯುತ್ತ; ಕಿಡಿಕಿಡಿಯಾಗಿ; ಕೆಂಡ ಕಾರುತ್ತ: her face was ablaze with anger ಅವಳ ಮುಖ ಕೋಪದಿಂದ ಉರಿಯುತ್ತಿತ್ತು. her eyes were ablaze with fury ಅವಳ ಕಣ್ಣುಗಳು ಕ್ರೋಧದಿಂದ ಕಿಡಿಕಿಡಿಯಾಗಿದ್ದವು.
  • ಬೆಳೆಗುತ್ತ; ಹೊಳೆಯುತ್ತ; ಥಳಥಳಿಸುತ್ತ; ಉಜ್ಜ್ವಲವಾಗಿ; ಪ್ರಕಾಶಮಾನವಾಗಿ: ablaze with lights ದೀಪಗಳಿಂದ ಹೊಳೆಯುತ್ತ.

  • ablaze
    ಗುಣವಾಚಕ
  • ಉರಿಯುತ್ತಿರುವ; ಧಗಧಗಿಸುವ; ಪ್ರಜ್ವಲಿಸುವ.
  • ಉದ್ರಿಕ್ತನಾದ; ಆವೇಶ ತುಂಬಿದ.
  • (ಕೋಪದಿಂದ) ಕಿಡಿಕಿಡಿಯಾದ; ಉರಿಯುತ್ತಿರುವ.

  • able
    ಗುಣವಾಚಕ
  • ಕುಶಲ; ಚತುರ; ಬುದ್ಧಿವಂತ.
  • ಶಕ್ತ; ಆಳವುಳ್ಳ; ಬಲಿಷ್ಠ; ಸಾಮರ್ಥ್ಯವುಳ್ಳ.
  • ದಕ್ಷ; ಗಟ್ಟಿಗ; ಸಮರ್ಥ.
  • (ಕಾನೂನಿನ ಪ್ರಕಾರ) ಅರ್ಹ; ಹಕ್ಕು ಯಾ ಅರ್ಹತೆಯುಳ್ಳ: able to inherit property ಆಸ್ತಿಯನ್ನು ಪಡೆಯುವ ಅರ್ಹತೆಯುಳ್ಳ.

  • -able
    ಉತ್ತರಪ್ರತ್ಯಯ
    ತಕ್ಕ, ಅರ್ಹ, ಯೋಗ್ಯ, ಸಾಧ್ಯ, ಆಗುವಂಥ, ಆಗಿರುವ ಎಂಬರ್ಥಗಳ ಗುಣವಾಚಕಗಳನ್ನು ರಚಿಸುವ ಉತ್ತರಪ್ರತ್ಯಯ: eatable ಖಾದ್ಯ; ತಿನ್ನಲು ಯೋಗ್ಯವಾದ. bearable ಸಹ್ಯ; ಸಹನಸಾಧ್ಯವಾದ. suitable ಯೋಗ್ಯವಾದ. clubbable ಸಂಘಕ್ಕೆ ಅರ್ಹನಾದ. perishable ಕೆಡುವಂಥ.

    able-bodied
    ಗುಣವಾಚಕ
    ಗಟ್ಟಿಮುಟ್ಟಾದ; ದೇಹದಾರ್ಢ್ಯವುಳ್ಳ; ದೃಢಕಾಯ; ಶಕ್ತ.


    logo