logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

ablush
ಕ್ರಿಯಾವಿಶೇಷಣ
(ನಾಚಿಕೆ ಮೊದಲಾದವುಗಳಿಂದ) ಮುಖ–ಕೆಂಪಡರಿ, ಕೆಂಪೇರಿ.

ablush
ಆಖ್ಯಾತಕ ಗುಣವಾಚಕ
(ನಾಚಿಕೆ ಮೊದಲಾದವುಗಳಿಂದ) ಮುಖ ಕೆಂಪಾದ.

ablution
ನಾಮವಾಚಕ
(ಸಾಮಾನ್ಯವಾಗಿ ಬಹುವಚನ)
  • ಶಾಸ್ತ್ರೋಕ್ತಸ್ನಾನ; ಶುದ್ಧಿಸ್ನಾನ; ಸಂಪ್ರೋಕ್ಷಣೆ; ಸಮ್ಮಾರ್ಜನೆ; ದೇಹ, ಕೈಗಳು, ಪವಿತ್ರ ಪಾತ್ರೆಗಳನ್ನು ವಿಧ್ಯುಕ್ತವಾಗಿ ತೊಳೆಯುವುದು.
  • (ಮುಖ್ಯವಾಗಿ ರೋಮನ್‍ ಕ್ಯಾಥೊಲಿಕ್‍ರಲ್ಲಿ) ಸ್ನಾನ, ಮಾರ್ಜನ–ಜಲ; ವಿಧ್ಯುಕ್ತ ಸ್ನಾನಕ್ಕಾಗಿ ಯಾ ಮಾರ್ಜನಕ್ಕಾಗಿ ಬಳಸಿದ ನೀರು.
  • (ಹಾಸ್ಯ ಪ್ರಯೋಗ) ಸಾಮಾನ್ಯ ಸ್ನಾನ; ಮಜ್ಜನ; ಮೀಹ; ಮೈತೊಳೆಯುವುದು.
  • (ಬಿಡಾರ, ಹಡಗು, ಮೊದಲಾದವುಗಳಲ್ಲಿಯ) ಸ್ನಾನದ ಮನೆ.

  • ablutionary
    ಗುಣವಾಚಕ
    ಸ್ನಾನದ; ಮಜ್ಜನದ; ಮೀಹದ.

    ably
    ಕ್ರಿಯಾವಿಶೇಷಣ
    ಶಕ್ತಿಯಿಂದ; ಸಮರ್ಥವಾಗಿ; ದಕ್ಷತೆಯಿಂದ; ಕೌಶಲದಿಂದ; ಬುದ್ಧಿವಂತಿಕೆಯಿಂದ.

    -ably
    ಉತ್ತರಪ್ರತ್ಯಯ
    -able ಅಂತ್ಯದ ಗುಣವಾಚಕಗಳಿಂದ ಕ್ರಿಯಾವಿಶೇಷಣಗಳನ್ನು ರಚಿಸಲು ಬಳಸುವ ಉತ್ತರಪ್ರತ್ಯಯ: probably.

    ABM
    ಸಂಕ್ಷಿಪ್ತ
    anti-ballistic missile.

    abnegate
    ಸಕರ್ಮಕ ಕ್ರಿಯಾಪದ
  • (ತನಗೆ ಬೇಕಾದ ಯಾವುದನ್ನೇ) ತೊರೆ; ಬಿಟ್ಟುಬಿಡು; ತ್ಯಜಿಸು; ಪರಿತ್ಯಜಿಸು.
  • (ಹಕ್ಕು ಯಾ ನಂಬಿಕೆಯನ್ನು) ತೊರೆ; ಬಿಡು; ತ್ಯಜಿಸು.

  • abnegation
    ನಾಮವಾಚಕ ಪದಗುಚ್ಛ
    self-abnegation = abnegation(3).
  • ತೊರೆಹ; ತ್ಯಾಗ; ಪರಿತ್ಯಾಗ.
  • (ಹಕ್ಕು, ಸಿದ್ಧಾಂತ, ಮೊದಲಾದವುಗಳನ್ನು) ಬಿಟ್ಟುಬಿಡುವಿಕೆ; ಪರಿತ್ಯಾಗ.
  • ಸ್ವಾರ್ಥತ್ಯಾಗ; ಸ್ವಹಿತತ್ಯಾಗ.

  • abnormal
    ಗುಣವಾಚಕ
  • ಅಪಸಾಮಾನ್ಯ; ಅಸಾಮಾನ್ಯ; ಅಸಾಧಾರಣ; abnormal pshychology ಅಪಸಾಮಾನ್ಯ ಮನೋವಿಜ್ಞಾನ.
  • ವಿಪರೀತ; ಅತಿರೇಕ.
  • ಅತಿಹೆಚ್ಚಿನ; ಅತ್ಯಧಿಕ: abnormal profits ಅತ್ಯಧಿಕ ಲಾಭ.


  • logo