logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

abet
ಸಕರ್ಮಕ ಕ್ರಿಯಾಪದ ಪದಗುಚ್ಛ
(ಸಾಮಾನ್ಯವಾಗಿ ದುಷ್ಕೃತ್ಯಕ್ಕೆ ಯಾ ದುಷ್ಕರ್ಮಿಗೆ) ಕುಮ್ಮಕ್ಕು ಕೊಡು; ಒತ್ತಾಸೆ ಕೊಡು; ಮದ್ದತು ಮಾಡು; ನೆರವಾಗು; ಸಹಾಯ ಮಾಡು; ಪ್ರೋತ್ಸಾಹಿಸು.aid and abet (ದುಷ್ಕೃತ್ಯಕ್ಕೆ ಯಾ ದುಷ್ಕರ್ಮಿಗೆ) ನೆರವು ನೀಡು; ಪ್ರೋತ್ಸಾಹ ಕೊಡು.

abetment
ನಾಮವಾಚಕ
ಕುಮ್ಮಕ್ಕು; ಒತ್ತಾಸೆ; ಮದ್ದತು; ಪ್ರೋತ್ಸಾಹ; ಕೇಡಿಗನಿಗೋ ಕೆಟ್ಟ ಕೆಲಸಕ್ಕೋ ಕೊಡುವ ಕುಮ್ಮಕ್ಕು, ದುಷ್ಪ್ರೇರಣೆ.

abetter
ನಾಮವಾಚಕ
(ಮುಖ್ಯವಾಗಿ ನ್ಯಾಯಶಾಸ್ತ್ರ) (ಕೆಟ್ಟ ಕೆಲಸಕ್ಕೆ ಯಾ ಕೆಟ್ಟ ಕೆಲಸ ಮಾಡುವವನಿಗೆ) ಕುಮ್ಮಕ್ಕುಗಾರ; ಮದ್ದತುಗಾರ; ದುಷ್ಪ್ರೇರಕ.

abettor
ನಾಮವಾಚಕ
= abetter.

ab extra
ಕ್ರಿಯಾವಿಶೇಷಣ
ಹೊರಗಿನಿಂದ.

abeyance
ನಾಮವಾಚಕ ಪದಗುಚ್ಛ
  • (ಪುನಃ ಸಿಕ್ಕಬಹುದಾದ ಹಕ್ಕು ಮೊದಲಾದವನ್ನು) ತಡೆದಿಡುವಿಕೆ; ಸ್ಥಗನ; ಸ್ಥಗಿತಗೊಳಿಸುವಿಕೆ.
  • ತಡೆಗಡೆ; ತಡೆ ಹಿಡಿದ ಸ್ಥಿತಿ; ಸ್ಥಾಗಿತ್ಯ; ಸ್ಥಗಿತ ಸ್ಥಿತಿ.

  • abeyant
    ಗುಣವಾಚಕ
    ತಡೆಹಿಡಿದಿರುವ; ಸ್ಥಗಿತಗೊಂಡಿರುವ.

    abhor
    ಸಕರ್ಮಕ ಕ್ರಿಯಾಪದ
    (ಭೂತರೂಪ ಮತ್ತು ಭೂತಕೃದಂತ abhorred, ವರ್ತಮಾನ ಕೃದಂತ abhorring) ಕಡುಹೇಸು; ತುಂಬ ಅಸಹ್ಯಪಡು; ಸಹಿಸದಿರು: Nature abhors a vacuum ನಿಸರ್ಗ ಶೂನ್ಯವನ್ನು ಸಹಿಸದು.

    abhorrence
    ನಾಮವಾಚಕ
  • ಹೇಸುವಿಕೆ; ಹೇಸಿಕೆ; ಜುಗುಪ್ಸೆ.
  • ಹೇಸಿಗೆ; ಹೇಯವಾದುದು; ಅಸಹ್ಯ; ಅಸಹನೀಯ (ವಸ್ತು, ವಿಷಯ, ಮೊದಲಾದವು): flattery is my abhorrence ಹೊಗಳಿಕೆಯೆಂದರೆ ನನಗೆ ಅಸಹ್ಯ.

  • abhorrent
    ಗುಣವಾಚಕ ಪದಗುಚ್ಛ
    abhorrent from ದೂರವಾಗಿರುವ; ಅಸಂಗತವಾಗಿರುವ; ಅಸಮಂಜಸವಾಗಿರುವ: abhorrent from the principles of law ಕಾನೂನಿನ ತತ್ತ್ವಗಳಿಗೆ ದೂರವಾಗಿರುವ, ಅಸಮಂಜಸವಾಗಿರುವ.
  • (ನಡವಳಿಕೆ ಮೊದಲಾದವುಗಳ ವಿಷಯದಲ್ಲಿ) ಹೇಯ; ಅಸಹ್ಯಕರ: ಜುಗುಪ್ಸೆ ಹುಟ್ಟಿಸುವ: it is abhorrent to me ಅದು ನನಗೆ ಅಸಹ್ಯ ಹುಟ್ಟಿಸುತ್ತದೆ.
  • ಸರಿಹೊಂದದ; ಅನುಸಾರವಾಗಿರದ; ವಿರುದ್ಧವಾಗಿರುವ: abhorrent to the principles of law ನ್ಯಾಯದ ತತ್ತ್ವಗಳಿಗೆ ವಿರುದ್ಧವಾಗಿರುವ.
  • (ಪ್ರಾಚೀನ ಪ್ರಯೋಗ) (ಯಾವುದೇ ವಿಷಯದಲ್ಲಿ) ಜುಗುಪ್ಸೆಪಡುವ: the Greeks were abhorrent of excess ಗ್ರೀಕರು ಅತಿರೇಕದ ಬಗ್ಗೆ ಜುಗುಪ್ಸೆ ಪಡುವವರಾಗಿದ್ದರು.


  • logo