logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

abhorrer
ನಾಮವಾಚಕ
  • ಹೇಸಿಗೆಪಡುವವನು; ಜುಗುಪ್ಸೆಪಡುವವನು.
  • (ಚರಿತ್ರೆ) 1680ರಲ್ಲಿ ಇಂಗ್ಲಂಡಿನ ಎರಡನೆಯ ಚಾರ್ಲ್ಸ್‍ ಸಲ್ಲಿಸಿದ ಮನವಿಪತ್ರಕ್ಕೆ ಸಹಿ ಹಾಕಿದವರ ಅಡ್ಡಹೆಸರು.

  • abidance
    ನಾಮವಾಚಕ
  • ಇರುವುದು; ನೆಲೆಸಿರುವುದು; ವಾಸವಾಗಿರುವುದು.
  • (ನಿಯಮ ಮೊದಲಾದವುಗಳ) ಪಾಲನೆ; ಅನುಕರಣೆ: abidance by rules ನಿಯಮಗಳ ಪಾಲನೆ.

  • abide
    ಸಕರ್ಮಕ ಕ್ರಿಯಾಪದ ಅಕರ್ಮಕ ಕ್ರಿಯಾಪದ ನುಡಿಗಟ್ಟು
    abide by (ಭೂತರೂಪ ಮತ್ತು ಭೂತಕೃದಂತ ಸಾಮಾನ್ಯವಾಗಿ abided ಎಂದೇ ಪ್ರಯೋಗ)
  • ಎದುರಿಸು; ತಡೆ; ಪ್ರತಿರೋಧಿಸು: abide the onrush of the foe ಶತ್ರುವಿನ ದಾಳಿಯನ್ನು ಎದುರಿಸು.
  • ಒಳಗಾಗಿರು; ಬದ್ಧವಾಗಿರು; ವಿಧೇಯನಾಗಿರು; ವಿರೋಧಿಸದೆ ಯಾ ಎದುರಾಡದೆ ಸಮ್ಮತಿಸು, ಒಪ್ಪಿಕೊ: abide the court’s judgement on it ಅದರ ಬಗ್ಗೆ ನ್ಯಾಯಾಲಯದ ತೀರ್ಪಿಗೆ ಬದ್ಧನಾಗಿರು.
  • (ಮುಖ್ಯವಾಗಿ ನಿಷೇಧಾರ್ಥಕ ಯಾ ಪ್ರಶ್ನಾರ್ಥಕ ವಾಕ್ಯಗಳಲ್ಲಿ) ತಾಳು; ಸಹಿಸು: I cannot abide ನಾನು ತಾಳಲಾರೆ. who can abide? ಯಾರು ತಾನೇ ಸಹಿಸುತ್ತಾರೆ?
  • (ಪ್ರಾಚೀನ ಪ್ರಯೋಗ) ಕಾಯು; ಸಿದ್ಧವಾಗಿರು; ನಿರೀಕ್ಷಿಸು: abide the coming of the Lord ಭಗವಂತನ ಬರವಿಗಾಗಿ ಕಾಯು.

  • abiding
    ಗುಣವಾಚಕ
    ನೆಲೆಯಾದ; ಸ್ಥಿರವಾದ; ಶಾಶ್ವತವಾದ.

    abidingly
    ಕ್ರಿಯಾವಿಶೇಷಣ
    ಸ್ಥಿರವಾಗಿ; ನೆಲೆಯಾಗಿ; ಶಾಶ್ವತವಾಗಿ.

    abience
    ನಾಮವಾಚಕ
    (ಮನಶ್ಶಾಸ್ತ್ರ) ಹಿಂಜರಿಕೆ; ಹಿಂದೆಗೆಯುವಿಕೆ; ಪರಾಙ್ಮುಖತೆ; ವಿಮುಖತೆ; ಪ್ರಚೋದಕ ವಸ್ತು ಯಾ ಪರಿಸ್ಥಿತಿಯಿಂದ ಹಿಂದೆಗೆಯುವ ಪ್ರವೃತ್ತಿ.

    abigail
    ನಾಮವಾಚಕ
    ಚೇಟಿ; ದಾಸಿ.

    ability
    ನಾಮವಾಚಕ
  • (ಯಾವುದೇ ಕೆಲಸ ಮಾಡಲು ಸಾಕಷ್ಟು ದೈಹಿಕ, ನೈತಿಕ, ಆರ್ಥಿಕ, ಮೊದಲಾದ) ಶಕ್ತಿ; ಅಳವು; ಆಪು; ಸಾಮರ್ಥ್ಯ.
  • (ಕಾನೂನುರೀತ್ಯಾ ಕ್ರಮ ಜರುಗಿಸಲು ಬೇಕಾಗಿರುವ) ಅರ್ಹತೆ; ಯೋಗ್ಯತೆ.
  • (ಸಹಜವಾಗಿ ಯಾ ಅಭ್ಯಾಸದಿಂದ ಬಂದ) ಶಕ್ತಿ; ಸಾಮರ್ಥ್ಯ.
  • ಜಾಣ್ಮೆ; ಜಾಣತನ; ಬುದ್ಧಿವಂತಿಕೆ: a man of great ability ಬಹಳ ಬುದ್ಧಿಶಾಲಿ (ವ್ಯಕ್ತಿ).
  • (ಬಹುವಚನ) ಬುದ್ಧಿಶಕ್ತಿ: a man of great abilities ಬಹಳ ಬುದ್ಧಿಶಕ್ತಿಯುಳ್ಳ ವ್ಯಕ್ತಿ.
  • (ಬಹುವಚನ) ಕೌಶಲ; ಚಾತುರ್ಯ; ವಿಶೇಷವಾದ ನೈಪುಣ್ಯ ಯಾ ಸಾಮರ್ಥ್ಯ: his manifold abilities ಅವನ ಬಹುವಿಧ ನೈಪುಣ್ಯಗಳು.

  • -ability
    ಉತ್ತರಪ್ರತ್ಯಯ
    -able ಅಂತ್ಯವಿರುವ ಗುಣವಾಚಕಗಳಿಂದ ನಾಮವಾಚಕಗಳನ್ನು ರಚಿಸಲು ಬಳಸುವ ಉತ್ತರಪ್ರತ್ಯಯ: capability.

    ab initio
    ಕ್ರಿಯಾವಿಶೇಷಣ
    ಮೊದಲಿನಿಂದ; ಆದಿಯಿಂದ; ಪ್ರಾರಂಭದಿಂದ.


    logo