logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

aberdevine
ನಾಮವಾಚಕ
ಆಬರ್ಡವೈನ್‍; ಕಂದು ಹಳದಿ ಬಣ್ಣದ ಒಂದು ಬಗೆಯ ಚಿಕ್ಕ ಹಾಡುಹಕ್ಕಿ.

Aberdonian
ನಾಮವಾಚಕ
ಆಬರ್ಡೀನಿನವನು; ಆಬರ್ಡೀನಿನಲ್ಲಿ ಹುಟ್ಟಿದವನು.

Aberdonian
ಗುಣವಾಚಕ
ಆಬರ್ಡೀನಿನ; ಆಬರ್ಡೀನಿನಲ್ಲಿ ಹುಟ್ಟಿದ.

aberglaube
ನಾಮವಾಚಕ
German ಅತಿ ನಂಬಿಕೆ; ಕುರುಡು ನಂಬಿಕೆ; ಅಂಧಶ್ರದ್ಧೆ.

Abernethy
ನಾಮವಾಚಕ
ಜೀರಿಗೆ ಬಿಸ್ಕತ್ತು; ಸೋಂಪು ಬಿಸ್ಕತ್ತು.

aberrance
ನಾಮವಾಚಕ
  • ದಾರಿಬಿಟ್ಟು ಹೋಗುವಿಕೆ; ಮಾರ್ಗಚ್ಯುತಿ.
  • ಅಪವಾದ(ವಾಗಿರುವಿಕೆ).

  • aberrancy
    ನಾಮವಾಚಕ
    = aberrance.

    aberrant
    ಗುಣವಾಚಕ
  • ದಾರಿ ತಪ್ಪಿದ; ದಾರಿಗೆಟ್ಟ; ದಾರಿ ಬಿಟ್ಟ; ಅಡ್ಡದಾರಿ ಹಿಡಿದ; ನಡತೆಗೆಟ್ಟ; ಋಜುಮಾರ್ಗ ತಪ್ಪಿದ (ನೀತಿ, ನಡತೆಗಳ ವಿಷಯದಲ್ಲಿ ರೂಪಕವಾಗಿ ಸಹ)
  • (ಮುಖ್ಯವಾಗಿ ಜೀವವಿಜ್ಞಾನ) ಅಪವಾದ ರೂಪದ; ಅಸ್ವಾಭಾವಿಕ.

  • aberrant
    ನಾಮವಾಚಕ
  • (ನೀತಿ, ನಡತೆಗಳ ವಿಷಯದಲ್ಲಿ ರೂಪಕವಾಗಿ ಸಹ) ದಾರಿಬಿಟ್ಟವನು; ಅಡ್ಡದಾರಿ ಹಿಡಿದವನು; ದಾರಿ ತಪ್ಪಿದವನು.
  • (ಮುಖ್ಯವಾಗಿ ಜೀವವಿಜ್ಞಾನ) ಅಪವಾದ; ಅಸಹಜ ಸ್ವಭಾವದ್ದು; ಸಾಮಾನ್ಯ ಸ್ವಭಾವಕ್ಕೆ ಹೊರತಾದುದು.

  • aberration
    ನಾಮವಾಚಕ
  • ದಾರಿ ತಪ್ಪುವಿಕೆ; ಮಾರ್ಗಚ್ಯುತಿ; ಪಥಭ್ರಂಶ (ರೂಪಕವಾಗಿ ಸಹ).
  • ನಿಯಮಭಂಗ; ನಿಯಮೋಲ್ಲಂಘನ.
  • ನೀತಿಗೆಡುವಿಕೆ; ನೀತಿಭ್ರಂಶ.
  • ಬುದ್ಧಿಭ್ರಮಣೆ; ಬುದ್ಧಿವಿಕಲ್ಪ.
  • ಕ್ಷಣಿಕ–ಮರವೆ, ವಿಸ್ಮೃತಿ; ತಾತ್ಕಾಲಿಕ ಮರೆವು.
  • ಅಪವಾದ(ವಾಗಿರುವಿಕೆ); ಸಾಮಾನ್ಯ ಮಾದರಿಗಿಂತ ಬೇರೆಯಾಗಿರುವಿಕೆ.
  • (ಭೌತವಿಜ್ಞಾನ) ವಿಪಥನ; ಬಿಂಬ ಪ್ರತಿಬಿಂಬ ನಿರ್ಮಾಣದಲ್ಲಿ ಬಿಂದುವಿಗೆ ಬಿಂದು ಹೊಂದದಿರುವುದು: spherical aberration ಗೋಳವಿಪಥನ. chromatic aberration ವರ್ಣವಿಪಥನ.
  • (ಖಗೋಳ ವಿಜ್ಞಾನ) ದಿಗ್‍ಭ್ರಂಶ; ದಿಕ್ಚ್ಯುತಿ; ಸ್ಥಾನಭ್ರಮೆ; ಭೂಮಿಯ ಚಲನೆಯ ಕಾರಣವಾಗಿ ವೀಕ್ಷಕನ ಸ್ಥಾನ ಬದಲಾಯಿಸುವುದರಿಂದಲೂ ಬೆಳಕಿನ ಕಿರಣಗಳು ಭೂಮಿಯನ್ನು ತಲುಪಲು ಕಾಲ ಬೇಕಾಗಿರುವುದರಿಂದಲೂ ಯಾವುದಾದರೂ ಒಂದು ಆಕಾಶಕಾಯ ತಾನಿದ್ದ ಸ್ಥಳದಲ್ಲಿ ಕಾಣದೆ ಬೇರೆ ಕಡೆಯಲ್ಲಿ ಕಾಣುವುದು.


  • logo