logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

abduction
ನಾಮವಾಚಕ
  • ಅಪಹರಣ; ಹರಣ; (ಮಗು, ಹೆಂಗಸು, ಮತದಾರ, ಕಾವಲುಗಾರ, ಮೊದಲಾದ ಯಾರನ್ನೇ) ನ್ಯಾಯ ವಿರುದ್ಧವಾಗಿ ಎತ್ತಿಕೊಂಡು ಹೋಗುವುದು, ಬಲಾತ್ಕಾರವಾಗಿ ಅಪಹರಿಸುವುದು.
  • (ತತ್ತ್ವಶಾಸ್ತ್ರ) ಸಂಭವಪಕ್ಷನ್ಯಾಯ; ಸಾಧ್ಯವಾಕ್ಯವು ಸ್ವಯಂ ಸಿದ್ಧವಾಗಿದ್ದು, ಪಕ್ಷವಾಕ್ಯವು ಕೇವಲ ಸಂಭವನೀಯವಾಗಿರುವ ತ್ರಯಾವಯವಿ ಪ್ರಕರಣ.
  • (ಶರೀರ ವಿಜ್ಞಾನ) ಅಪಚಾಲನ; ಅಪಕರ್ಷಣ; ಅಪವರ್ತನ; ಒಂದು ಅಂಗವನ್ನು ಮುಖ್ಯವಾಗಿ ಕೈ, ಕಾಲು, ಬೆರಳು, ಮೊದಲಾದವನ್ನು ಅದರ ನಿಯತಸ್ಥಾನದಿಂದ ಆಚೆಗೆ ಸೆಳೆದುಕೊಳ್ಳುವಿಕೆ.
  • (ರೋಗಶಾಸ್ತ್ರ) ಹುಣ್ಣಿನ ಬುಡ ಕುಗ್ಗಿ ಬಾಯಿ ತೆರೆದುಕೊಳ್ಳುವುದು.

  • abductor
    ನಾಮವಾಚಕ
  • ಅಪಹಾರಿ; ಅಪಹಾರಕ.
  • (ಅಂಗರಚನಾಶಾಸ್ತ್ರ) ಅಪಚಾಲಕ; ಅಪಕರ್ಷಕ; ಅಪವರ್ತಕ ಸ್ನಾಯು.

  • abductor muscle
    ನಾಮವಾಚಕ
    = abductor(2).

    abeam
    ಕ್ರಿಯಾವಿಶೇಷಣ
    ಹಡಗಿನ, ವಿಮಾನದ ಮಧ್ಯಕ್ಕೆದುರಾಗಿ ಯಾ ಉದ್ದಕ್ಕೆ ಸಮಕೋನದಲ್ಲಿ: the lighthouse was abeam of the ship ದೀಪಗೃಹ ಹಡಗಿಗೆ ಸಮಕೋನದಲ್ಲಿತ್ತು.

    abecedarian
    ಗುಣವಾಚಕ
  • ಅಕ್ಷರಮಾಲೆಗೆ ಸಂಬಂಧಿಸಿದ.
  • ಅಕಾರಾನುಕ್ರಮದ; ಅಕಾರಾದಿ ಜೋಡಿಸಿದ.
  • ಆರಂಭದೆಸೆಯ; ಪ್ರಾರಂಭಿಕ; ಪ್ರಾಥಮಿಕ; ಓನಾಮದ.

  • abecedarian
    ನಾಮವಾಚಕ
  • ಓನಾಮಿ; ಅಕ್ಷರಾಭ್ಯಾಸಿ; ಅಕ್ಷರ ಕಲಿಯುತ್ತಿರುವವನು.
  • ಓನಾಮಿ; ಯಾವುದೇ ವಿಷಯದ ಯಾ ಕೆಲಸದ ಪ್ರಥಮ ಪಾಠಗಳನ್ನು ಯಾ ಮೊದಲ ಹಂತಗಳನ್ನು ಕಲಿಯುತ್ತಿರುವವನು.

  • abed
    ಕ್ರಿಯಾವಿಶೇಷಣ ನುಡಿಗಟ್ಟು
    to bring abed ಮಗುವನ್ನು ಹೆರು.
  • ಹಾಸಿಗೆಯಲ್ಲಿ.
  • ರೋಗದಿಂದ ಹಾಸಿಗೆ ಹಿಡಿದು: he is abed with fever ಆತ ಜ್ವರದಿಂದ ಹಾಸಿಗೆ ಹಿಡಿದಿದ್ದಾನೆ.

  • abele
    ನಾಮವಾಚಕ
    ಏಬಲ್‍; ಪಾಪಲಸ್‍ ಆಲ್ಬ ಕುಲದ, ಬಿಳಿಯ ಪಾಪ್ಲರ್‍ ಮರ.

    abelmosk
    ನಾಮವಾಚಕ
    ಕಸ್ತೂರಿ ಗಿಡ; ಗಂಧಮೂಲ ಗಿಡ; ಏಷ್ಯಾ ಮತ್ತು ದಕ್ಷಿಣ ಆಹ್ರಿಕದ ಉಷ್ಣವಲಯಗಳಲ್ಲಿ ಬೆಳೆಯುವ ಕಸ್ತೂರಿ ವಾಸನೆಯಿರುವ ಬೀಜಗಳುಳ್ಳ ಗಿಡ.

    Aberdeen
    ನಾಮವಾಚಕ ಪದಗುಚ್ಛ
    ಆಬರ್ಡೀನ್‍:
  • ಸ್ಕಾಟ್ಲೆಂಡಿನ ಈಶಾನ್ಯದಲ್ಲಿರುವ ಒಂದು ನಗರ.
  • ಪದಗುಚ್ಛ \((1)\).
  • =ಪದಗುಚ್ಛ \((2)\).


  • logo