logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

ABC
ಸಂಕ್ಷಿಪ್ತ
  • Australian Broadcasting Commission.
  • (ಅಮೆರಿಕನ್‍ ಪ್ರಯೋಗ) American Broadcasting Company.

  • Abderite
    ನಾಮವಾಚಕ ಪದಗುಚ್ಛ
    the Abderite(ಆಬ್ಡರದಲ್ಲಿ ಹುಟ್ಟಿದ, ಕ್ರಿಸ್ತಪೂರ್ವ 4ನೇ ಶತಮಾನದ ಗ್ರೀಕ್‍ ತತ್ತ್ವಶಾಸ್ತ್ರಜ್ಞನೂ ವಾಗ್ಮಿಯೂ ಆದ) ಡಿಮಾಕ್ರಿಟಸ್‍.
  • ಆಬ್ಡರದವನು; ಗ್ರೀಸ್‍ ದೇಶದ ಆಬ್ಡರ ನಗರದ ನಿವಾಸಿ ಯಾ ಪ್ರಜೆ.
  • ದಡ್ಡ; ಗಾಂಪ.

  • abdicate
    ಸಕರ್ಮಕ ಕ್ರಿಯಾಪದ ಅಕರ್ಮಕ ಕ್ರಿಯಾಪದ
    (ರಾಜ್ಯ, ಅಧಿಕಾರ, ಪದವಿ, ಹಕ್ಕು, ಮೊದಲಾದವನ್ನು ವಿಧಿವತ್ತಾಗಿ ಯಾ ಕರ್ತವ್ಯಲೋಪದ ಕಾರಣದಿಂದ) ತೊರೆದು ಬಿಡು; ಬಿಟ್ಟುಬಿಡು; ತ್ಯಜಿಸು; ಪರಿತ್ಯಜಿಸು.(ಮುಖ್ಯವಾಗಿ ಸಿಂಹಾಸನವನ್ನು) ತೊರೆ; ಪರಿತ್ಯಜಿಸು.

    abdicated
    ಗುಣವಾಚಕ
    ಪದಚ್ಯುತ; ಪದತ್ಯಕ್ತ; ಅಧಿಕಾರ ಕಳೆದುಕೊಂಡ; ವಿಧಿವತ್ತಾಗಿ ತೊರೆದ.

    abdication
    ನಾಮವಾಚಕ
  • ಪದತ್ಯಾಗ ಯಾ ಪದಚ್ಯುತಿ.
  • ಸಿಂಹಾಸನತ್ಯಾಗ ಯಾ ಸಿಂಹಾಸನ ಚ್ಯುತಿ.

  • abdomen
    ನಾಮವಾಚಕ
  • (ಅಂಗರಚನಾಶಾಸ್ತ್ರ) ಹೊಟ್ಟೆ; ವಸ್ತಿ; ಕಿಬೊಟ್ಟೆ; ಉದರ; ಜೀರ್ಣಾಂಗಗಳಿರುವ ಮುಂಡದ ಕೆಳಭಾಗ.
  • (ಜೀವವಿಜ್ಞಾನ) (ಕೀಟ, ಜೇಡ, ಮೊದಲಾದವುಗಳ) ಮುಂಡದ ಹಿಂಭಾಗ.

  • abdominal
    ಗುಣವಾಚಕ
  • (ಅಂಗರಚನಾಶಾಸ್ತ್ರ) ಹೊಟ್ಟೆಯ; ಕಿಬ್ಬೊಟ್ಟೆಯ; ಉದರದ.
  • (ಜೀವವಿಜ್ಞಾನ) (ಕೀಟ, ಜೇಡ, ಮೊ.ವುಗಳ) ಮುಂಡದ ಹಿಂಭಾಗದ.
  • (ಮೀನಿನ ವಿಷಯದಲ್ಲಿ) ಹೊಟ್ಟೆ ಕೆಳಗೆ ಈಜುರೆಕ್ಕೆಯುಳ್ಳ.

  • abdominous
    ಗುಣವಾಚಕ
    ಡೊಳ್ಳು ಹೊಟ್ಟೆಯ; ಬೊಜ್ಜು ಹೊಟ್ಟೆಯ; ಸ್ಥೂಲೋದರದ.

    abducent
    ಗುಣವಾಚಕ
    (ಅಂಗರಚನಾಶಾಸ್ತ್ರ) ಅಪಚಾಲಕ; ಅಪವರ್ತಕ; ಅಪಕರ್ಷಕ; (ಒಂದು ಅಂಗವನ್ನು ಅದರ ನಿಯತ ಅಕ್ಷಸ್ಥಾನದಿಂದ) ಆಚೆಗೆ ಸೆಳೆಯುವ.

    abduct
    ಸಕರ್ಮಕ ಕ್ರಿಯಾಪದ
  • (ಮುಖ್ಯವಾಗಿ ಮಗು ಯಾ ಹೆಂಗಸನ್ನು) ಹಾರಿಸು; ಎಗರಿಸು; ಅಪಹರಿಸು; ಎತ್ತಿಕೊಂಡು ಹೋಗು; ಮೋಸದಿಂದಾಗಲಿ ಬಲಾತ್ಕಾರದಿಂದಾಗಲಿ ಹಾರಿಸಿಕೊಂಡು ಹೋಗು.
  • (ಶರೀರ ವಿಜ್ಞಾನ) ಅಪಚಾಲಿಸು; ಒಂದು ಅಂಗವನ್ನು ಅದರ ನಿಯತ ಅಕ್ಷಸ್ಥಾನದಿಂದ ಆಚೆಗೆ ಎಳೆ, ಸೆಳೆ.


  • logo