logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

abaft
ಉಪಸರ್ಗ
(ಹಡಗಿನ) ಹಿಂಭಾಗದಲ್ಲಿ; ಹಿಂಗೋಟಿನ ಕಡೆ.

abalone
ನಾಮವಾಚಕ
(ಅಮೆರಿಕನ್‍ ಪ್ರಯೋಗ) ಆಬಲೋನಿ; ಕಡಲ್ಗಿವಿ; ಹ್ಯಾಲಿಯೋಟಸ್‍ ಕುಲಕ್ಕೆ ಸೇರಿದ, ಕಿವಿಯಾಕಾರದ ಚಿಪ್ಪುಳ್ಳ, ತಿನ್ನಲು ಬರುವ ಒಂದು ಜಾತಿಯ ಮೃದ್ವಂಗಿ.

abandon
ಸಕರ್ಮಕ ಕ್ರಿಯಾಪದ
  • (ಬೇರೊಬ್ಬನ ಅಧೀನಕ್ಕೆ, ವಶಕ್ಕೆ, ದಯದಾಕ್ಷಿಣ್ಯಗಳಿಗೆ) ಬಿಟ್ಟುಬಿಡು; ಒಪ್ಪಿಸಿಬಿಡು.
  • (ಕಾಮಕ್ರೋಧಾದಿಗಳಿಗೆ ಸಂಪೂವಾಗಿ) ವಶವಾಗು.
  • (ಸ್ವಾಧೀನದಲ್ಲಿರುವುದನ್ನು, ಅಭ್ಯಾಸ, ಆಟಗಳನ್ನು) ತೊರೆ; ಬಿಟ್ಟುಬಿಡು; ಪರಿತ್ಯಜಿಸು.
  • (ವ್ಯಕ್ತಿ, ಹುದ್ದೆ, ಹಡಗನ್ನು) ಕೈಬಿಡು; ತ್ಯಜಿಸು.

  • abandon
    ನಾಮವಾಚಕ
    ಸ್ವೇಚ್ಛಾವರ್ತನೆ; ಸ್ವಚ್ಛಂದ–ವರ್ತನೆ, ನಡವಳಿಕೆ; ಯಾವುದೇ ಕಟ್ಟು ಕಟ್ಟಳೆಗೆ ಒಳಪಡದೆ ನಿರಾತಂಕವಾಗಿ, ಲಹರಿ ತಿರುಗಿದಂತೆ ವರ್ತಿಸುವುದು.

    abandoned
    ಗುಣವಾಚಕ
  • ತೊರೆದ; ಬಿಟ್ಟುಬಿಟ್ಟ; ತ್ಯಕ್ತ; ಪರಿತ್ಯಕ್ತ.
  • ನಡತೆಗೆಟ್ಟ: ದಾರಿತಪ್ಪಿದ; ಭ್ರಷ್ಟ; ಸ್ವೈರಿಯಾದ; ದುರ್ಮಾರ್ಗಿಯಾದ.

  • abandonee
    ನಾಮವಾಚಕ
    (ನ್ಯಾಯಶಾಸ್ತ್ರ)
  • ತ್ಯಕ್ತಗ್ರಾಹಿ; ವಿಧಿವತ್ತಾಗಿ ಯಾ ಕಾನೂನುರೀತ್ಯಾ ಪರಿತ್ಯಜಿಸಿದುದನ್ನು ಪಡೆದುಕೊಳ್ಳುವವನು.
  • ತ್ಯಕ್ತಗ್ರಾಹಿ; ಮುಖ್ಯವಾಗಿ ಮುಳುಗಿಹೋದ ಹಡಗನ್ನು ಎತ್ತಿ ಅದರಲ್ಲಿರುವುದನ್ನು ಕೊಳ್ಳಲು ಒಟ್ಟು ಒಪ್ಪಂದ ಮಾಡಿಕೊಳ್ಳುವವನು.

  • abandoner
    ನಾಮವಾಚಕ
    (ನ್ಯಾಯಶಾಸ್ತ್ರ) ಪರಿತ್ಯಾಗಿ; ಬಿಟ್ಟುಕೊಟ್ಟವನು; ಬಿಟ್ಟುಹೋಗುವವನು.

    abandonment
    ನಾಮವಾಚಕ
  • ಬಿಡುವಿಕೆ; ತೊರೆತ; ಪರಿತ್ಯಜನ; ಪರಿತ್ಯಾಗ; ತ್ಯಜಿಸುವಿಕೆ.
  • ತೊರೆಹಕ್ಕೊಳಗಾಗುವಿಕೆ; ಪರಿತ್ಯಕ್ತತೆ.
  • ಶರಣಾಗತಿ; ಮೊರೆಹೋಗುವಿಕೆ.
  • ಸ್ವಚ್ಛಂದ ನಡವಳಿಕೆ; ಸ್ವೇಚ್ಛಾವರ್ತನೆ; ನಿರಾತಂಕ, ನಿಶ್ಚಿಂತ–ವರ್ತನೆ.

  • abase
    ಸಕರ್ಮಕ ಕ್ರಿಯಾಪದ
    ಕೀಳೈಸು; ಕೀಳುಮಾಡು; ಹೀನೈಸು; ತುಚ್ಛೀಕರಿಸು: he abased himself ಆತ ತನ್ನನ್ನು ತಾನೇ ಹೀನೈಸಿಕೊಂಡನು.

    abasement
    ನಾಮವಾಚಕ
  • ಕೀಳುಮಾಡುವಿಕೆ; ಹೀನೈಸುವಿಕೆ.
  • ಹೀನಾಯ; ಹೀನಸ್ಥಿತಿ; ಕೀಳುದೆಸೆಯಲ್ಲಿರುವುದು.


  • logo