logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

abaxial
ಗುಣವಾಚಕ
(ಸಸ್ಯವಿಜ್ಞಾನ) ಅಪಾಕ್ಷ: ಅವಾಕ್ಷ; ಅಕ್ಷಕ್ಕೆ ವಿಮುಖವಾದ.

abaxile
ಗುಣವಾಚಕ
= abaxial.

abaya
ನಾಮವಾಚಕ
= aba.

abb
ನಾಮವಾಚಕ
(ನೇಯ್ಗೆಯಲ್ಲಿ) ಹೊಕ್ಕು; ಅಡ್ಡೆಳೆ; ಪ್ರೋತ.

Abba
ನಾಮವಾಚಕ
  • (ಕ್ರೈಸ್ತರ ದೈವ ಸಂಬೋಧನೆ) ಅಪ್ಪ; ತಂದೆ.
  • ಆಬ; ಕೆಲವು ಕ್ರೈಸ್ತ ಮಠಾ ಧಿಪತಿಗಳ, ಯೆಹೂದಿ ಪಂಡಿತರ ಬಿರುದು.

  • abba
    ನಾಮವಾಚಕ
    = aba.

    abbacy
    ನಾಮವಾಚಕ
    ಆಬಸಿ; ಆಬಟ್‍ ಪದವಿಯುಳ್ಳ ಕ್ರೈಸ್ತ ಮಠಾಧಿಪತಿಯ ಉದ್ಯೋಗ, ಅಧಿಕಾರಕ್ಷೇತ್ರ, ಅಧಿಕಾರಾವಧಿ.

    Abbasid
    ಗುಣವಾಚಕ
    ಅಬ್ಬಾಸ್‍ ವಂಶದ; ಕ್ರಿಸ್ತಶಕ 750 ರಿಂದ 1258ರ ವರೆಗೆ ಬಾಗ್ದಾದಿನಲ್ಲಿ ಆಳಿದ, ಮಹಮ್ಮದ್‍ ಪೈಗಂಬರನ ಸೋದರಮಾವನಾದ ಅಬ್ಬಾಸ್‍ನ ವಂಶಸ್ಥರೆಂದು ಹೇಳಿಕೊಳ್ಳುವ, ಖಲೀಫರ ವಂಶಕ್ಕೆ ಸೇರಿದ.

    Abbasid
    ಗುಣವಾಚಕ
    ಅಬ್ಬಾಸ್‍ ವಂಶದವ; ಬಾಗ್ದಾದಿನಲ್ಲಿ ಆಳಿದ ಖಲೀಫರ ವಂಶಕ್ಕೆ ಸೇರಿದವನು.

    abbatial
    ಗುಣವಾಚಕ
    ಆಬಿ, ಆಬಟ್‍, ಆಬೆಸ್‍–ಇವರಿಗೆ ಸಂಬಂಧಿಸಿದ.


    logo