logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

abash
ಸಕರ್ಮಕ ಕ್ರಿಯಾಪದ
(ಸಾಮಾನ್ಯವಾಗಿ ಕರ್ಮಣಿಪ್ರಯೋಗದಲ್ಲಿ)
  • ಮುಖ ಮುರಿ; ಮುಖ ಕೆಡಿಸು; ಕಂಗೆಡಿಸು; ನಾಚಿಸು; ಮುಖಭಂಗ ಮಾಡು; ತೇಜೋವಧೆ ಮಾಡು.
  • ಕಕ್ಕಾವಿಕ್ಕಿ ಮಾಡು; ತಬ್ಬಿಬ್ಬು ಮಾಡು.

  • abashment
    ನಾಮವಾಚಕ
  • ನಾಚಿಕೆ; ಮುಖಭಂಗ.
  • ಕಕ್ಕಾವಿಕ್ಕಿ; ತಬ್ಬಿಬ್ಬು.

  • abasia
    ನಾಮವಾಚಕ
    (ವೈದ್ಯಶಾಸ್ತ್ರ) ನಡೆಯುಡುಗು; ಗತಿಭ್ರಂಶ; ಸ್ನಾಯುಗಳ ಹೊಂದಾಣಿಕೆಯಿಲ್ಲದೆ ನಡೆ, ಚಲನೆ ಸಾಧ್ಯವಾಗದಿರುವಿಕೆ.

    abask
    ಕ್ರಿಯಾವಿಶೇಷಣ
    ಬಿಸಿಲು ಕಾಯಿಸಿಕೊಳ್ಳುತ್ತ; ಬಿಸಿಲಿಗೊಡ್ಡಿ.

    abate
    ಸಕರ್ಮಕ ಕ್ರಿಯಾಪದ ಅಕರ್ಮಕ ಕ್ರಿಯಾಪದ
    (ತೀವ್ರತೆ, ಬೆಲೆ, ಪ್ರವಾಹ, ಅಂಟುರೋಗ, ಮೊದಲಾದವುಗಳ ವಿಷಯದಲ್ಲಿ) ಕುಗ್ಗು; ತಗ್ಗು; ಇಳಿ; ಕಡಮೆಯಾಗು.
  • (ನ್ಯಾಯಶಾಸ್ತ್ರ) (ಆಜ್ಞೆ ಯಾ ಕೋರ್ಟು ಕ್ರಮವನ್ನು) ರದ್ದು ಮಾಡು; ರದ್ದುಗೊಳಿಸು; ವಜಾ ಮಾಡು.
  • (ತೀವ್ರತೆಯನ್ನು) ತಗ್ಗಿಸು; ಇಳಿಸು; ಕಡಮೆ ಮಾಡು.
  • (ನೋವನ್ನು) ಕಡಮೆ ಮಾಡು; ಶಮನಗೊಳಿಸು.
  • (ಬೆಲೆ) ಇಳಿಸು; ತಗ್ಗಿಸು.
  • (ಬೆಲೆಯ ನಿರ್ದಿಷ್ಟ ಯಾ ಅನಿರ್ದಿಷ್ಟ ಭಾಗವನ್ನು) ಕಳೆ; ತಗ್ಗಿಸು; ಬಿಟ್ಟುಬಿಡು.
  • (ಉಪದ್ರವ, ಪೀಡೆ, ಕಾಟ, ತೊಂದರೆಯನ್ನು) ಮುಗಿಸು; ಕೊನೆಗೊಳಿಸು; ಅಂತ್ಯಗೊಳಿಸು: we must abate the smoke nuisance in our cities ನಾವು ನಮ್ಮ ನಗರಗಳಲ್ಲಿಯ ಹೊಗೆಕಾಟವನ್ನು ಕೊನೆಗೊಳಿಸಬೇಕು.
  • (ಗತಪ್ರಯೋಗ) (ಮೊನೆಯನ್ನು, ಅಲಗನ್ನು) ಮೊಂಡು ಮಾಡು: abate the edge of the sword ಕತ್ತಿಯ ಅಲಗನ್ನು ಮೊಂಡು ಮಾಡು.
  • (ಬಲವನ್ನು, ಶಕ್ತಿಯನ್ನು) ಕುಂದಿಸು; ಕುಗ್ಗಿಸು; ಹ್ರಾಸಗೊಳಿಸು.

  • abatement
    ನಾಮವಾಚಕ
  • ಇಳಿಕೆ; ಇಳಿಸುವುದು; ತಗ್ಗಿಸುವುದು; ಕಡಮೆ ಮಾಡುವುದು.
  • (ನ್ಯಾಯಶಾಸ್ತ್ರ) (ಆಜ್ಞೆ, ಕ್ರಮ, ಮೊದಲಾದವುಗಳ) ರದ್ದತಿ; ವಜಾ (ಮಾಡುವುದು).
  • (ನೋವಿನ ವಿಷಯದಲ್ಲಿ) ಉಪಶಮನ; ಕಡಮೆಗೊಳಿಸು; ಕಡಮೆಯಾಗಿರುವುದು.
  • (ಉಪದ್ರವ ಮೊದಲಾದವುಗಳ) ಕೊನೆ; ಅಂತ್ಯ; ಮುಗಿದಿರುವ ಸ್ಥಿತಿ.

  • abatis
    ಗುಣವಾಚಕ
    (ಬಹುವಚನ ಅದೇ ಯಾ abatises).ಮರಕಾಪು; ಕೊಂಬೆಗಳು ಹೊರಚಾಚಿರುವಂತೆ ಮರಗಳನ್ನು ಕೆಡವಿ ಕಟ್ಟಿಕೊಂಡಿರುವ ತಡೆ, ರಕ್ಷಣೆ.

    abatised
    ಗುಣವಾಚಕ
    ಮರಕಾಪು–ಕಟ್ಟಿರುವ, ಒದಗಿಸಿರುವ.

    abattis
    ನಾಮವಾಚಕ
    (ಬಹುವಚನ ಅದೇ ಯಾ abattises). = abatis.

    abattoir
    ನಾಮವಾಚಕ
    ಕಸಾಯಿಖಾನೆ; ಮಾಂಸಕ್ಕಾಗಿ ದನ, ಕುರಿ, ಮೊದಲಾದವನ್ನು ಕಡಿಯುವ ಮನೆ.


    logo