logo
भारतवाणी
bharatavani  
logo
Knowledge through Indian Languages
Bharatavani

Krishi Rasayana Shastra Shabdartha Nirupanavali (English-Kannada)
A B C D E F G H I J K L M N O P Q R S T U V W X Y Z

Adiabatic Change
ಸ್ಥಿರೋಷ್ಣ ಬದಲಾವಣೆ. ಒಂದು ವಸ್ತುವಿನ ಬದಲಾವಣೆಗೆ ಬೇಕಾಗುವ ಶಕ್ತಿಯನ್ನು ಆ ವಸ್ತುವಿನೊಳಗಿನ ಆಂತರಿಕ ಶಕ್ತಿಯಿಂದಲೇ ಹೊಂದುವುದರಿಂದ, ಅದರ ಉಷ್ಣತೆ ಕಡಿಮೆ ಆಗುತ್ತದೆ.

Addition Compound
ಸಂಕಲಿತ ಸಂಧಿಸಿದ ಸಂಯುಕ್ತ ವಸ್ತು. ಸಂಕಲನಾ ಪ್ರತಿಕ್ರಿಯೆಯಿಂದುಂಟಾದ ಸಂಯುಕ್ತ ವಸ್ತು.

Addition Reaction
ಸಂಕಲನಾಪ್ರತಿಕ್ರಿಯೆ; ಸಂಧಿ ಪ್ರತಿಕ್ರಿಯೆ. ಎರಡು ಅಥವಾ ಹೆಚ್ಚು ಅಣುಗಳು ಒಟ್ಟುಗೂಡಿ ಒಂದು ವಸ್ತುವನ್ನು ಉತ್ಪತ್ತಿ ಮಾಡುವ ಪ್ರಕ್ರಿಯೆ. ಉದಾಹರಣೆ : ಗಂಧಕ ಮತ್ತು ಆಮ್ಲಜನಕ ಒಟ್ಟುಗೂಡಿ ಗಂಧಕದ ಡೈಆಕ್ಸೈಡ್ ಆಗುವಿಕೆ.

Adsorption
ಅಡ್ ಸಾರ್ ಪ್ ಷನ್, ಮೇಲ್ಮೈಗ್ರಹಣ; ಅನಿಲ ಮಂದಗಟ್ಟುವಿಕೆ. ಪದರದ ಎಲ್ಲೆಯಲ್ಲಿ ವಸ್ತು ಮಂದಗಟ್ಟುವಿಕೆ. ಮಂದಗಟ್ಟಲು ಎಡೆಮಾಡಿ ಕೊಡುವ ಭಾಗಕ್ಕೆ ಅಡ್ ಸಾರ್ಬೆಂಟ್ ಎಂದು ಹೆಸರು.

Aeolian Soil
ಗಾಳಿಸಾಗು ಮಣ್ಣು. ಗಾಳಿಯಿಂದ ಸಾಗಿಸಲ್ಪಟ್ಟು, ಬೇರೊಂದೆಡೆನಿಂತ ಮಣ್ಣು.

Aeration
ವಾಯುಪೂರಣ. ಮಣ್ಣಿನಲ್ಲಿರುವ ಗಾಳಿ, ವಾತಾವರಣದಲ್ಲಿರುವ ಗಾಳಿಯೊಡನೆ ವಿನಿಮಯವಾಗುವಿಕೆ.

Aerobic Respirtion
ವಾಯುಸನ್ನಿಧಿ ಉಸಿರಾಡುವಿಕೆ. ವಾಯುವಿನಲ್ಲಿರುವ ಆಮ್ಲಜನಕವನ್ನು ಉಪಯೋಗಿಸಿಕೊಂಡು ಉಸಿರಾಡುವಿಕೆ.

Affinity
ಆಕರ್ಷಣೆ. ಮೂಲಧಾತುಗಳು ಒಂದರೊಡನೊಂದು ರಾಸಾಯನಿಕ ಸಂಯೋಗವಾಗುವ ಪ್ರವೃತ್ತಿ.

Agent
ಕಾರಕ. ರಾಸಾಯನಿಕ ಪ್ರಕ್ರಿಯೆಗಳನ್ನು ಕ್ರಿಯಾಶಕ್ತಗೊಳಿಸುವ ವಸ್ತು.

Agglutinin
ಪ್ರತಿಜೀವಿ ಅಂಟುಕಾರಕತೆ. ಬ್ಯಾಕ್ಟೀರಿಯಾ ಅಥವಾ ಇತರ ಕಣಗಳನ್ನು ಅಂಟು ಪದಾರ್ಥವನ್ನಾಗಿ ಮಾರ್ಪಡಿಸುವ ಸಾಮರ್ಥ್ಯ.


logo