logo
भारतवाणी
bharatavani  
logo
Knowledge through Indian Languages
Bharatavani

Krishi Rasayana Shastra Shabdartha Nirupanavali (English-Kannada)
A B C D E F G H I J K L M N O P Q R S T U V W X Y Z

Aggregate
ಸಮಷ್ಟಿ. ಮಣ್ಣುಕಣಗಳ ಒಕ್ಕೂಟ.

Aggregation
ಸಮಷ್ಟೀಕರಣ. ಮಣ್ಣು ಕಣಗಳು ಒಟ್ಟಾಗಿ ಸೇರುವ ಅಥವಾ ಸಂಯುಕ್ತ ಕಣಗಳಾಗುವ ವಿಧಾನ.

Agricultural Geology
ಕೃಷಿ ಭೂಗರ್ಭ ಶಾಸ್ತ್ರ. ಶಿಲಾ ಗುಣಧರ್ಮ, ಮಣ್ಣು ಉತ್ಪಾದನೆಯಲ್ಲಿ ಖನಿಜಗಳ ಪಾತ್ರ ಮುಂತಾದ ವಿಷಯಗಳನ್ನು ಚರ್ಚಿಸುವ ಭೂಗರ್ಭ ಶಾಸ್ತ್ರದ ವಿಭಾಗ.

Air Capacity
ಹವಾ ಸಾಮರ್ಥ್ಯ. ಮಣ್ಣು ನೀರಿನಲ್ಲಿ ಪೂರ್ತಿ ತೊಯ್ದಾಗ ಅದರಲ್ಲಿ ಉಳಿಯುವ ಗಾಳಿಯ ಮೊತ್ತ. ಇದು ಸಾಮಾನ್ಯವಾಗಿ ಮಣ್ಣಿನ ಸಂಯುಕ್ತಗಳ ಮಧ್ಯಾಂತರವನ್ನು ಸೂಚಿಸುತ್ತದೆ.

Alcohol
ಆಲ್ಕೋಹಾಲ್; ಮಧ್ಯಸಾರ. ಅಲಿಫ್ಯಾಟಿಕ್ ಹೈಡ್ರೋಕಾರ್ಬನ್ ಗಳಿಂದ ಉತ್ಪತ್ತಿಯಾಗುವ ವಸ್ತು. ಅದರಲ್ಲಿ ಒಂದು ಅಥವಾ ಹೆಚ್ಚು ‘H’ ಬದಲು ‘OH’ ಅಥವಾ ಹೈಡ್ರಾಕ್ಸಿಲ್ ಗುಂಪು ಇರುತ್ತದೆ.

Aldehyde
ಆಲ್ಡಿಹೈಡ್. ಆಲ್ಕೋಹಾಲ್ ಗಳಿಂದ ಉತ್ಪತ್ತಿಯಾದ ಹಾಗೂ ‘CHO’ ಕ್ರಿಯಾಸಮುದಾಯವುಳ್ಳ ಒಂದು ವರ್ಗದ ಸಾವಯವ ಸಂಯುಕ್ತ ವಸ್ತು.

Allotropy
ಬಹುರೂಪತೆ. ಪರಮಾಣುಗಳ ಅಥವಾ ಅಣುಗಳ ವಿನ್ಯಾಸ ವ್ಯತ್ಯಾಸದಿಂದಾಗಿ ಕೆಲವು ಮೂಲ ವಸ್ತುಗಳು ಒಂದಕ್ಕಿಂದ ಹೆಚ್ಚು ರೂಪದಲ್ಲಿರುವ ವಿಶಿಷ್ಟ ಗುಣ.

Alloys
ಮಿಶ್ರಲೋಹಗಳು. ಎರಡು ಅಥವಾ ಹೆಚ್ಚು ಲೋಹಗಳ ಮಿಶ್ರಣದಿಂದುಂಟಾದ ಸಂಯುಕ್ತ ವಸ್ತುಗಳು.

Alkali
ಕ್ಷಾರ. ನೀರಿನಲ್ಲಿ ಕರಗಿ ಸುಡುವ ಗುಣವುಳ್ಳ, ಆಮ್ಲವನ್ನು ನಿರಾಮ್ಲಗೊಳಿಸುವ ವಸ್ತು. ಇದು ಸಾಬೂನಿನಂತೆ ನುಣುಪುಳ್ಳ ಕೆಂಪುಲಿಟ್ ಮಸ್ ಕಾಗದವನ್ನು ನೀಲಿಯಾಗಿ ಪರಿವರ್ತಿಸುತ್ತದೆ.

Alkali Soil
ಕ್ಷಾರಮಣ್ಣು. ಸಸ್ಯಗಳ ಬೆಳವಣಿಗೆಗೆ ತೊಂದರೆಯಾಗುವಂತೆ ಹೆಚ್ಚಿನ ಮಟ್ಟದ ಕ್ಷಾರೀಯತೆ ಇರುವ ಮಣ್ಣು. ಇದರಲ್ಲಿ ಶೇಕಡ 15 ಕ್ಕೂ ಹೆಚ್ಚು ಕ್ಷಾರದ ವಿನಿಮಯ ಸಾಧ್ಯ. ಉದಾಹರಣೆ : ಸೋಡಿಯಂ ಇರುವ ಮಣ್ಣು.


logo