logo
भारतवाणी
bharatavani  
logo
Knowledge through Indian Languages
Bharatavani

Krishi Rasayana Shastra Shabdartha Nirupanavali (English-Kannada)
A B C D E F G H I J K L M N O P Q R S T U V W X Y Z

Pan (Hard)
ಪದರ (ಗಟ್ಟಿ). ಬಲವಾಗಿ ಗಟ್ಟಿಗಟ್ಟಿದ ಮಣ್ಣಿನೊಳಗಿನ ಪದರು. ಹೆಚ್ಚು ಜೇಡಿ ಮತ್ತು ಸುಣ್ಣವಸ್ತುಗಳಿಂದ ಈ ಪದರುಗಳುಂಟಾಗುತ್ತವೆ.

Partial Pressure
ಭಾಗಶಃ ಒತ್ತಡ. ಒಂದು ಮಿಶ್ರಣದ ಪೂರ್ಣ ಘನ ಅಳತೆಯನ್ನು ಆ ಮಿಶ್ರಣದ ಒಂದು ಘಟಕ ಆವರಿಸಿಕೊಂಡಾಗ ಉಂಟಾಗುವ ಒತ್ತಡಕ್ಕೆ ಭಾಗಶಃ ಒತ್ತಡ ಎಂದು ಹೆಸರು.

Parent Material
ಮೂಲ ಸಾಮಗ್ರಿ; ಮೂಲ ವಸ್ತು. ಮಣ್ಣು ಉತ್ಪತ್ತಿಯಾಗುವ ಮೂಲ ಸಾಮಗ್ರಿ. ಈ ಮೂಲ ಸಾಮಗ್ರಿಗಳು ಸಾಮಾನ್ಯವಾಗಿ ಶಿಥಿಲವಾಗಿರುವುದಿಲ್ಲ.

Parent Rocks
ಮೂಲ ಶಿಲೆಗಳು; ತಾಯಿ ಬಂಡೆಗಳು. ಇವು ಮಣ್ಣಿನ ಮೂಲ ಶಿಲೆಗಳು. ಉದಾಹರಣೆಗೆ, ಅಗ್ನಿ ಶಿಲೆ; ಜನ ಶಿಲೆ.

Particle Density
ಕಣ ಸಾಂದ್ರತೆ. ರಂಧ್ರಾವರಣವನ್ನು ಬಿಟ್ಟು ಕಂಡುಹಿಡಿದ ಮಣ್ಣುಕಣಗಳ ಸರಾಸರಿ ಸಾಂದ್ರತೆ.

Particle Size
ಕಣ ಗಾತ್ರ. ಇದು ಮಣ್ಣಿನ ಕಣಗಳ ವ್ಯಾಸವನ್ನು ಸೂಚಿಸುತ್ತದೆ. ಇದನ್ನು ಜರಡಿಯಿಂದ ಅಥವಾ ಕಣಗಳು ದ್ರವದಲ್ಲಿ ತೂರುವ ವೇಗದಿಂದ ಕಂಡುಹಿಡಿಯುತ್ತಾರೆ.

Parts Per Million
ದಶ ಲಕ್ಷಾಂಶ. ಹತ್ತು ಲಕ್ಷದಲ್ಲಿ ಎಷ್ಟು ಭಾಗ ಇದೆ ಎಂಬುದನ್ನು ಸೂಚಿಸುವ ಪದ್ಧತಿ. ಮಣ್ಣಿನ ವಿಶ್ಲೇಷಣೆಯ ನಿರೂಪಣೆಯಲ್ಲಿ 1.000,000 ಗ್ರಾಂಗೆ ಎಷ್ಟು ಭಾಗ ವಿವಿಧ ವಸ್ತುಗಳಿವೆ ಎಂಬುದನ್ನು ನಮೂದಿಸುತ್ತಾರೆ.

Partial Sterilization
ಭಾಗಶಃ ನಿರ್ಜೀವೀಕರಣ ; ಅಂಶಿಕ ಬರಡುಗೊಳಿಸುವಿಕೆ. ಶಾಖ ಅಥವಾ ರಾಸಾಯನಿಕ ಪ್ರಯೋಗಗಳಿಂದ ಭಾಗಶಃ ಮಣ್ಣಿನಿಂದ ಸೂಕ್ಷ್ಮ ಜೀವಿಗಳನ್ನು ನಿಷ್ಕ್ರಿಯಗೊಳಿಸುವ ವಿಧಾನ. ಇದರಿಂದ ಕೆಲವು ಜಾತಿಯ ಜೀವಿಗಳು ಸ್ವಲ್ಪಮಟ್ಟಿಗೆ ಹಾಳಾಗುತ್ತವೆ.

Pascal’s Law
ಪ್ಯಾಸ್ಕಲ್ ನ ನಿಯಮ. ಸ್ಥಿರವಾದ ದ್ರವದ ಮೇಲೆ ಪ್ರಯೋಗಿಸಲ್ಪಟ್ಟ ಒತ್ತಡ ಎಲ್ಲ ಭಾಗಗಳಿಗೂ ಸಮವಾಗಿ ಹರಡಲ್ಪಡುತ್ತದೆ.

Pedology
ಸಸ್ಯೊಪಯೋಗಿ ಮಣ್ಣಿನ ಶಾಸ್ತ್ರ ಅಥವಾ ಮಣ್ಣಿನ ವಿಜ್ಞಾನ. ಬಗೆ ಬಗೆಯ ಮಣ್ಣುಗಳನ್ನು ನೈಜ ಅಂಶಗಳೆಂದು ಪರಿಗಣಿಸಿ, ಅವುಗಳ ಭೌತಿಕ, ರಾಸಾಯನಿಕ ಮತ್ತು ಜೀವ ವಿಧಾನಗಳನ್ನು ವಿವರಿಸುವ ಮಣ್ಣಿನ ವಿಜ್ಞಾನ.


logo