logo
भारतवाणी
bharatavani  
logo
Knowledge through Indian Languages
Bharatavani

Krishi Rasayana Shastra Shabdartha Nirupanavali (English-Kannada)
A B C D E F G H I J K L M N O P Q R S T U V W X Y Z

Unsaturated Soil
ಅಸಂತೃಪ್ತ ಮಣ್ಣು. ಮಣ್ಣಿನ ವಿನಿಮಯ ಸಂಕೀರ್ಣದಲ್ಲಿ ಜಲಜನಕ ಒಂದುಗೂಡಿದಾಗ ಮಣ್ಣು ಅಸಂತೃಪ್ತವಾಗಿದೆ ಎಂದು ಹೇಳುತ್ತಾರೆ. ಈ ಸ್ಥಿತಿಯಲ್ಲಿ ಮಣ್ಣಿನ ಪಿ. ಎಚ್. ಆಮ್ಲಗತಿಯನ್ನು ತಾಳುತ್ತದೆ.

Upper Plastic Limit
ನಮ್ಯತೆಯ ಮೇಲ್ಮಟ್ಟದ ಮಿತಿ ; ಮೇಲ್ಮಟ್ಟದ ಆಕೃತಿ ರೂಪಣೆಯ ಮಿತಿ. ಪ್ರಯೋಗಿಸಿದ ಒತ್ತಡದಲ್ಲಿ ಮಣ್ಣು ಸರಾಗವಾಗಿ ಹರಡಿಕೊಳ್ಳವ ಮಣ್ಣಿನ ತೇವಾಂಶ.

Urea
ಯೂರಿಯಾ. ಇದು ಕಾರ್ಬನಿಕ್ ಆಮ್ಲದ ಸಂಯೋಜಿತ ಆಮೈಡ್, ಈ ಸಾವಯವ ಸಾರಜನಕ ರಾಸಾಯನಿಕ ಗೊಬ್ಬರದಲ್ಲಿ ಶೇಕಡ 44-46 ರಷ್ಟು ಸಾರಜನಕವಿರುತ್ತದೆ.


logo