logo
भारतवाणी
bharatavani  
logo
Knowledge through Indian Languages
Bharatavani

Krishi Rasayana Shastra Shabdartha Nirupanavali (English-Kannada)
A B C D E F G H I J K L M N O P Q R S T U V W X Y Z

Ecology
ಜೀವ ಪರಿಸ್ಥಿತಿ ಶಾಸ್ತ್ರ. ಸಸ್ಯ ಮತ್ತು ಪ್ರಾಣಿಗಳಿಗೆ ಹಾಗೂ ಅವುಗಳ ಸುತ್ತಲ ಸನ್ನಿವೇಶದೊಡನೆ ಇರುವ ಸಂಬಂಧ. ಅವುಗಳ ಶೀಲ ಸ್ವಭಾವ, ಜೀವನ ರೀತಿ ಮುಂತಾದವುಗಳನ್ನು ಕುರಿತ ವಿಮರ್ಶೆ.

Edaphology
ಸಸ್ಯೋಪಯೋಗ ಅಥವಾ ಸಸ್ಯಾಧಾರ ಮಣ್ಣು ಶಾಸ್ತ್ರ. ಸಸ್ಯಗಳ ಬೆಳವಣಿಗೆಯ ಮೇಲೆ ಮಣ್ಣಿನ ಪ್ರಭಾವವನ್ನು ವಿವರಿಸುವ ಮಣ್ಣು ವಿಜ್ಞಾನ.

Elasticity
ಸ್ಥಿತಿಸ್ಥಾಪಕತ್ವ; ಸ್ಥಿತಿಸ್ಥಾಪನಾಶಕ್ತಿ. ಒಂದು ವಸ್ತು ತನ್ನ ಆಕಾರ ಬದಲಾವಣೆಯನ್ನು ವಿರೋಧಿಸುವ ಮತ್ತು ಪುನರ್ ಪಡೆಯುವ ಗುಣ.

Elastic Limit
ಸ್ಥಿತಿಸ್ಥಾಪನಾಮಿತಿ. ಸ್ಥಿರವಾದ ಬದಲಾವಣೆಯನ್ನುಂಟುಮಾಡುವ ತೀರಾ ಕಡಿಮೆ ಒತ್ತಡ.

Electric Field
ವಿದ್ಯುತ್ ಕ್ಷೇತ್ರ. ಒಂದು ಕ್ಷೇತ್ರದ ಮೇಲೆ ಹೇರಲ್ಪಟ್ಟ ವಿದ್ಯುತ್ ಬಲ.

Electrical Potential
ವಿದ್ಯುತ್ ಪ್ರಚ್ಛನ್ನತೆ. ವಿದ್ಯುತ್ ಕ್ಷೇತ್ರದಲ್ಲಿ ಒಂದು ಏಕಮಾನ ವಿದ್ಯುತ್ಕಣವು ಹೊಂದಿರುವ ಪ್ರಚ್ಛನ್ನ, ಶಕ್ತಿಗೆ ವಿದ್ಯುತ್ ಪ್ರಚ್ಛನ್ನತೆ ಎಂದು ಹೆಸರು.

Electro Potential Difference
ವಿದ್ಯುತ್ ಪ್ರಚ್ಛನ್ನಾಂತರ. ವಿದ್ಯುತ್ ಕ್ಷೇತ್ರದಲ್ಲಿ ಒಂದು ಬಿಂದುವಿನಿಂದ ಮತ್ತೊಂದು ಬಿಂದುವಿಗೆ ಏಕಮಾನ ವಿದ್ಯುತ್ ಕಣವನ್ನು ಚಲಿಸಲು ಪ್ರಯೋಗಿಸಬೇಕಾದ ಕೆಲಸಕ್ಕೆ ವಿದ್ಯುತ್ ಪ್ರಚ್ಛನ್ನಾಂತರ ಎಂದು ಹೆಸರು.

Electro Valency
ವಿದ್ಯುತ್ ಸಂಯೋಗ ಸಾಮರ್ಥ್ಯ. ರಾಸಾಯನಿಕ ಕ್ರಿಯೆಯಲ್ಲಿ ಪರಮಾಣುಗಳಲ್ಲಿ ಇಲೆಕ್ಟ್ರಾನ್ ಗಳ ವರ್ಗಾವಣೆಯಿಂದ, ಪರಸ್ಪರ ವಿರುದ್ಧ ವಿದ್ಯುದಂಶವುಳ್ಳ ಪರಮಾಣುಗಳಲ್ಲಿ ಆಕರ್ಷಣದಿಂದುಂಟಾದ ಸಂಯೋಗ ಶಕ್ತಿ.

Electromotive Force
ವಿದ್ಯುಚ್ಛಾಲಕ ಶಕ್ತಿ ; ವಿದ್ಯುದ್ವಾಹಕ ಬಲ. ಒಂದು ಆಕಾರದಿಂದ ಒಂದು ಏಕಮಾನ ವಿದ್ಯುತ್ ಪ್ರವಾಹವನ್ನು ಎಳೆಯುವಾಗ, ಅದು ಒದಗಿಸುವ ಶಕ್ತಿಯ ದರಕ್ಕೆ ವಿದ್ಯುದ್ವಾಹಕ ಶಕ್ತಿ ಎಂದು ಹೆಸರು.

Electrolysis
ವಿದ್ಯುದ್ವಿಭಜನೆ ; ವಿದ್ಯುದ್ವಿಶ್ಲೇಷಣೆ. ಕೆಲವು ಸಂಯುಕ್ತ ಪದಾರ್ಥಗಳು ದ್ರಾವಣ ರೂಪದಲ್ಲಿದ್ದಾಗ, ವಿದ್ಯುದ್ವಾಹಕಗಳಾಗಿ ವರ್ತಿಸುತ್ತವೆ. ಹೀಗೆ ದ್ರಾವಣಗಳ ಮೂಲಕ ವಿದ್ಯುತ್ ಹರಿದಾಗ, ಕೆಲವು ರಾಸಾಯನಿಕ ಕ್ರಿಯೆಗಳುಂಟಾಗಿ ಸಂಯುಕ್ತ ವಸ್ತುಗಳು ವಿಭಜಿಸಲ್ಪಡುತ್ತವೆ. ವಿದ್ಯುಚ್ಛಕ್ತಿಯಿಂದಾಗುವ ಈ ರಾಸಾಯನಿಕ ವಿಭಜನೆಗೆ ವಿದ್ಯುದ್ವಿಭಜನೆ, ಎಂದು ಹೆಸರು.


logo